Maruti Cheapest Car : ಮಾರುತಿ ಲಾಂಚ್ ಮಾಡಲಿದೆ ಅಲ್ಟೋಗಿಂತಲೂ ಅಗ್ಗದ ಕಾರು..!

Fri, 11 Jun 2021-4:14 pm,

ಮಾರುತಿ ಸುಜುಕಿಯ ಅಗ್ಗದ ಕಾರು ಅಂದರೆ ಆಲ್ಟೋ. ಆದರೆ, ಇದಕ್ಕಿಂತಲೂ ಅಗ್ಗದ ಕಾರು ಮಾರುಕಟ್ಟೆಗೆ ತರಲು ಹೊರಟಿದೆ ಕಂಪನಿ. ಈ ಹೊಸ ಕಾರಿನ ಬೆಲೆ ಸುಮಾರು 4 ಲಕ್ಷ ಎನ್ನಲಾಗಿದೆ.   

ಇದು ಆಲ್ಟೊ ಕಾರಿನ ರಿಪ್ಲೇಸ್ ಮೆಂಟ್ ಅಥವಾ ಆಲ್ಟೋದ ಹೊಸ ಆವೃತಿಯಾಗಿರಲಿದೆ ಎನ್ನಲಾಗಿದೆ. ಹೊಸ ಲುಕ್ ನೊಂದಿಗೆ ಈ ಕಾರು ರಸ್ತೆಗಿಳಿಯಲಿದೆ. 

ಮಾರುತಿಯ ಈ ಹೊಸ ಕಾರು ಮಾರುತಿ ಆಲ್ಟೊಗಿಂತ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿರಲಿದೆ.  ಮಾರುತಿ ಈ ಕಾರಿನ ತಯಾರಿಯಲ್ಲಿ ನಿರತರಾಗಿದ್ದು, ಶೀಘ್ರದಲ್ಲೇ ಕಾರಿನ ಬಿಡುಗಡೆಯ ಬಗ್ಗೆ ಪ್ರಕಟಿಸಬಹುದು. ಮಾರುತಿ ಆಲ್ಟೊದ ಟಾಪ್ ಮಾಡೆಲ್ 4.16 ಲಕ್ಷ ರೂಗಳಿಗೆ ಲಭ್ಯವಿದೆ.

ಮಾರುತಿ ತನ್ನ ವಾಹನಗಳನ್ನು ಹರ್ಟೆಕ್ಟ್ ಪ್ಲಾಟ್‌ಫಾರ್ಮ್‌ಗೆ ವರ್ಗಾಯಿಸುತ್ತಿರುವುದರಿಂದ ಮಾರುತಿ ಸುಜುಕಿ ಈ ಹೊಸ ಕಾರನ್ನು ಆಲ್ಟೊದ ಹೊಸ ಆವೃತ್ತಿಯಾಗಿ ಬಿಡುಗಡೆ ಮಾಡಬಹುದು ಎನ್ನಲಾಗಿದೆ. 

ಈ ಕಾರು 1000 ಸಿಸಿ ಎಂಜಿನ್‌ನೊಂದಿಗೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ. ಇದರ ಟಾಪ್ ವೇರಿಯೆಂಟ್ ಪವರ್ ವಿಂಡೋಸ್‌ನಂತಹ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ. ಅಲ್ಲದೆ, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಕಾರಿನಲ್ಲಿ ನೀಡಬಹುದು. ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಸಂಪರ್ಕವನ್ನು ಈ ಹೊಸ ಕಾರಿನಲ್ಲಿ ಕಾಣಬಹುದು.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link