Maruti, Hyundai, Mahindra ಲಾಂಚ್ ಮಾಡುತ್ತಿದೆ ಈ 6 ಅದ್ಬತ ಕಾರು, ವೈಶಿಷ್ಟ್ಯ ಬೆಲೆ ಎಷ್ಟಿರಲಿದೆ ಗೊತ್ತಾ?
ಮೊದಲನೆಯದಾಗಿ, ಹ್ಯುಂಡೈನಿಂದ ಬಹುನಿರೀಕ್ಷಿತ SUV Alcazar ನ 3-Row SUV 18 ಜೂನ್ 18 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ಇದು 6-7 ಆಸನಗಳ ಎಸ್ಯುವಿ. ಇದರ ಪ್ರೀ ಬುಕಿಂಗ್ ಈಗಾಗಲೇ ಆರಂಭವಾಗಿದೆ. 25 ಸಾವಿರ ರೂ ಪಾವತಿಸಿ ಪ್ರೀ ಬಿಕಿಂಗ್ ಮಾಡಿಕೊಳ್ಳಬಹುದು. Alcazar ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಬರಲಿದೆ. ಪ್ರೆಸ್ಟೀಜ್, ಪ್ಲ್ಯಾಟಿನಮ್ ಮತ್ತು ಸಿಗ್ನೇಚರ್ ಎಂಬ ಮೂರು ವೇರಿಯೆಂಟ್ ಗಳಲ್ಲಿ ಈ ಕಾರು ಬಿಡುಗಡೆಯಾಗಲಿದೆ.
ಮಾರುತಿ ಸುಜುಕಿ ಇಂಡಿಯಾ ಅತ್ಯದ್ಭುತ ಕಾರನ್ನು ಬಿಡುಗಡೆ ಮಾಡಲಿದೆ. ಈ ಕಾರಿನ ಹೆಸರು Jimmy. ಈ ಕಾರು ಮಾರುತಿ ಸುಜುಕಿ Gypsyಯ ರಿಪ್ಲೇಸ್ ಮೆಂಟ್ ಆಗಿರಲಿದೆ. ಹೊಸ ವಿನ್ಯಾಸಗಳೊಂದಿಗೆ ಇದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು. ಮಾರುತಿಯ ಗುಜರಾತ್ ಪ್ಲಾಂಟ್ ನಲ್ಲಿ ಈ ಕಾರಿನ ಮ್ಯಾನಿಫ್ಯಾಕಲ್ಚರಿಂಗ್ ನಡೆಯುತ್ತಿದೆ. ಜಿಮ್ಮಿಯ 3 ಡೋರ್ ಮತ್ತು 5 ಡೋರ್ ಎರಡೂ ಎರಡೂ ಆವೃತ್ತಿಗಳಲ್ಲಿ ಕಾರು ಲಾಂಚ್ ಆಗಲಿವೆ.
ಮಹೀಂದ್ರಾ ತನ್ನ 6/7 ಆಸನಗಳ XUV700 ಅನ್ನು ಈ ವರ್ಷದ ಅಕ್ಟೋಬರ್‌ನಲ್ಲಿ ಬಿಡುಗಡೆ ಮಾಡಲಿದೆ. ಇದು XUV500ನ ರಿಪ್ಲೇಸ್ ಮೆಂಟ್ ಆಗಿರುತ್ತದೆ. ಇದರ ಟೆಸ್ಟಿಂಗ್ ಕೊನೆಯ ಹಂತದಲ್ಲಿದೆ. ಇದು ಮಹೀಂದ್ರಾ ಅವರ ಪ್ರಮುಖ ಪ್ರೋಡೆಕ್ಟ್ ಆಗಿರಲಿದೆ. ಈ ಕಾರಿನ ಬಿಡುಗಡೆಯ ನಂತರ, ಮಹೀಂದ್ರಾ ತನ್ನ ಅತ್ಯಂತ ಜನಪ್ರಿಯ XUV 500 ಬ್ರಾಂಡ್ ಅನ್ನು ನಿಲ್ಲಿಸಲಿದೆ. XUV 700 ನೇರವಾಗಿ Tata Safari, MG Hector Plus, Hyundai ನ Alcazaಜನೊತೆ ಸ್ಪರ್ಧಿಸಲಿದೆ. ಇದರ ಬೆಲೆ 14 ಲಕ್ಷದಿಂದ 20 ಲಕ್ಷ ರೂಪಾಯಿಗಳವರೆಗೆ ಇರುತ್ತದೆ.
ಮಹೀಂದ್ರಾ ತನ್ನ ಅತ್ಯಂತ ಯಶಸ್ವಿ SUV Scorpioದ Next Gen ಆವೃತ್ತಿಯನ್ನು ಬಿಡುಗಡೆ ಮಾಡಲಿದೆ. ಇದನ್ನು 2022 ರ ಆರಂಭದಲ್ಲಿ ಲಾಂಚ್ ಮಾಡಬಹುದು ಎಂದು ಅಂದಾಜಿಸಲಾಗಿದೆ. ಇದರ ಬೆಲೆ 12 ರಿಂದ 20 ಲಕ್ಷ ರೂಪಾಯಿಗಳಾಗಿರಬಹುದು.
Tata HBX ಒಂದು ಮಿನಿ SUV ಆಗಿದ್ದು, ಮುಂದಿನ ವರ್ಷ ಬಿಡುಗಡೆಯಾಗಲಿದೆ. ಇದನ್ನು ಆಟೋ ಎಕ್ಸ್‌ಪೋ 2020 ರಲ್ಲಿ HBX ಪರಿಕಲ್ಪನೆಯಾಗಿ ಪರಿಚಯಿಸಲಾಯಿತು. ಈ ಮಿನಿ ಕಾರಿನ ಉತ್ಪಾದನಾ ಆವೃತ್ತಿಯು ಪ್ರೊಡೆಕ್ಷನ್ ವರ್ಸನ್ ಕಾನ್ಸೆಪ್ಟ್ ನೊಂದಿಗೆ 95 ಪ್ರತಿಶತದವರೆಗೆ ಹೊಂದಿಕೆಯಾಗುತ್ತದೆ ಎಂದು ಕಂಪನಿಯು ಹೇಳಿದೆ.
ಅಮೆರಿಕದ ಆಟೋಮೊಬೈಲ್ ಕಂಪನಿ, Jeep ತನ್ನ 3-Row SUV Commander ಕಾರನ್ನು ಬಿಡುಗಡೆ ಮಾಡಲು ಸಿದ್ದತೆ ನಡೆಸುತ್ತಿದೆ. ಕೆಲವು ಸಮಯದ ಹಿಂದೆ ಇದರ ಟೀಸರ್ ಸೋಷಿಯಲ್ ಮೀಡಿಯಾದಲ್ಲಿ ಕಂಡುಬಂದಿತ್ತು. 2021 ರ ಜುಲೈ-ಆಗಸ್ಟ್ನಲ್ಲಿ ಗ್ಲೋಬಲ್ ಪ್ರೀಮಿಯರ್ ಕಾಣುವ ನಿರೀಕ್ಷೆಯಿದೆ. 2022 ರ ಮಧ್ಯದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು. ಈ ಕಾರಿನ ಬೆಲೆ ಸುಮಾರು 28 ರಿಂದ 35 ಲಕ್ಷ ರೂಗಳವರೆಗೆ ಇರಬಹುದು.