Maruti Wagon-R: ಕಡಿಮೆ ಬಜೆಟ್‌ನಲ್ಲಿ ಉತ್ತಮ ಮೈಲೇಜ್ ನೀಡುವ ಈ ಕಾರಿಗೆ ಬೇಡಿಕೆ ಕಡಿಮೆಯಾಗಿಲ್ಲ!
ಮಾರುತಿ Wagon-R ಕೇವಲ 6-8 ಲಕ್ಷ ರೂ. ಬಜೆಟ್‌ನಲ್ಲಿ ಸಿಗುತ್ತದೆ. ಐವರು ಕುಳಿತುಕೊಳ್ಳಲು ಸಾಕಷ್ಟು ಸ್ಥಳಾವಕಾಶ ಹೊಂದಿದೆ. ಇದರ ಜೊತೆಗೆ ಈ ಕಾರಿನಲ್ಲಿ ಲೆಗ್‌ರೂಮ್ & ಹೆಡ್‌ರೂಮ್ ಉತ್ತಮವಾಗಿದೆ. ಬೂಟ್ ಸ್ಪೇಸ್ & ಗ್ರೌಂಡ್ ಕ್ಲಿಯರೆನ್ಸ್ ಸಹ ಸಾಕಷ್ಟು ಉತ್ತಮವಾಗಿದೆ. ಹೀಗಾಗಿ ಇದು ದೀರ್ಘ ಪ್ರಯಾಣಕ್ಕೆ ಉತ್ತಮ ಕಾರಾಗಿದೆ.
ಮಾರುತಿ Wagon-R ಪ್ರಯಾಣಿಕರ ಅನುಕೂಲಕ್ಕೆ ಅಗತ್ಯವಿರುವ ಎಲ್ಲಾ ವೈಶಿಷ್ಟ್ಯಗಳನ್ನು ಹೊಂದಿದೆ. 7 ಇಂಚಿನ ಟಚ್‌ಸ್ಕ್ರೀನ್ ಡಿಸ್‌ಪ್ಲೇ, 4-ಸ್ಪೀಕರ್ ಮ್ಯೂಸಿಕ್ ಸಿಸ್ಟಮ್, ಸ್ಟೀರಿಂಗ್-ಮೌಂಟೆಡ್ ಆಡಿಯೋ ಕಂಟ್ರೋಲ್ & ಸ್ಮಾರ್ಟ್‌ಫೋನ್ ನ್ಯಾವಿಗೇಷನ್‌ನಂತಹ ವೈಶಿಷ್ಟ್ಯ ಹೊಂದಿದೆ. ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಇಬಿಡಿಯೊಂದಿಗೆ ABS, ರಿಯರ್ ಪಾರ್ಕಿಂಗ್ ಸೆನ್ಸಾರ್, ಹಿಲ್-ಹೋಲ್ಡ್ ಅಸಿಸ್ಟ್ (AMT ರೂಪಾಂತರ ಮಾತ್ರ) ಇವೆ.
ಕಂಪನಿಯು Wagon-R ಮೂಲ ಮಾದರಿಯಲ್ಲಿ 1.0 ಲೀಟರ್ K-ಸೀರಿಸ್ ಎಂಜಿನ್ ನೀಡುತ್ತದೆ. ಉನ್ನತ ಮಾದರಿಯನ್ನು 1.2 ಲೀಟರ್ ಎಂಜಿನ್‌ನೊಂದಿಗೆ ನೀಡಲಾಗುತ್ತದೆ. ಈ ಕಾರು 1.0 ಲೀಟರ್ ಎಂಜಿನ್‌ನಲ್ಲಿ CNG ಆಯ್ಕೆಯೊಂದಿಗೆ ಲಭ್ಯವಿದೆ. 1.2 ಲೀಟರಿನ ಪೆಟ್ರೋಲ್ ಎಂಜಿನ್ 88.5 BHP ಪವರ್ ಹಾಗೂ 113 NM ಟಾರ್ಕ್ ಉತ್ಪಾದಿಸುತ್ತದೆ. ಇದರ ಮೈಲೇಜ್ ಕೂಡ ಉತ್ತಮವಾಗಿದ್ದು, ಪೆಟ್ರೋಲ್‌ನಲ್ಲಿ 25KM ಮತ್ತು CNGಯಲ್ಲಿ 35KMವರೆಗೆ ಮೈಲೇಜ್ ನೀಡುತ್ತದೆ. ಮೈಲೇಜ್ ಅಂಕಿಅಂಶಗಳು ARAI ಪ್ರಮಾಣೀಕೃತವಾಗಿವೆ.
Wagon-Rಅನ್ನು LXI, VXI, ZXI ಮತ್ತು ZXI+ ಎಂಬ 4 ರೂಪಾಂತರಗಳಲ್ಲಿ ಮಾರಾಟ ಮಾಡಲಾಗುತ್ತಿದೆ. LXI ಮತ್ತು VXI ಟ್ರಿಮ್‌ಗಳು ಕಾರ್ಖಾನೆಯಲ್ಲಿ ಅಳವಡಿಸಿದ CNG ಕಿಟ್ ಆಯ್ಕೆಯೊಂದಿಗೆ ಬರುತ್ತವೆ. ಮಾರುತಿ Wagon-R ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂನಲ್ಲಿ 5.54 ಲಕ್ಷ ರೂ.ನಿಂದ 7.42 ಲಕ್ಷ ರೂ.ಇದೆ.
ಮಾರುತಿ ಸುಜುಕಿ Wagon-R ಅನ್ನು ಮೊದಲ ಬಾರಿಗೆ 1999ರಲ್ಲಿ ಬಿಡುಗಡೆ ಮಾಡಲಾಗಿತ್ತು. ಅಂದಿನಿಂದ ಇಂದಿನವರೆಗೂ ಈ ಕಾರು ಮಾರಾಟವಾಗುತ್ತಿದೆ. ಈ ವಾಹನವನ್ನು Resell ಮಾಡಿದರೂ ಉತ್ತಮ ಬೆಲೆಗೆ ಕೊಂಡುಕೊಳ್ಳುವವರಿದ್ದಾರೆ. ಮಾರುತಿ Wagon-R ಪೆಟ್ರೋನ್‌ನಲ್ಲಿ 23-25KM ಮತ್ತು CNGಯಲ್ಲಿ 33KM ಮೈಲೇಜ್ ನೀಡುತ್ತದೆ.