Swift, Nexon ಅಲ್ಲ… 34KM ಮೈಲೇಜ್ ನೀಡುವ, ದೇಶದಲ್ಲಿ ಅತೀ ಹೆಚ್ಚು ಮಾರಾಟವಾದ ಕಾರಿದು! ಬೆಲೆ ಜಸ್ಟ್ 5 ಲಕ್ಷ
ಮಾರುತಿ ಸುಜುಕಿ ವ್ಯಾಗನ್-ಆರ್ ಕಳೆದ ತಿಂಗಳು ಅಂದರೆ ಏಪ್ರಿಲ್ 2023 ರಲ್ಲಿ ಹೆಚ್ಚು ಮಾರಾಟವಾದ ಕಾರಾಗಿದೆ. ಮಾರುತಿ ಸುಜುಕಿ 20,879 ವ್ಯಾಗನ್ಆರ್ ಯುನಿಟ್ ಗಳನ್ನು ಮಾರಾಟ ಮಾಡಿದೆ.
ಕಳೆದ ವರ್ಷದ ಏಪ್ರಿಲ್ ತಿಂಗಳಿಗೆ ಹೋಲಿಸಿದರೆ, ಮಾರಾಟದಲ್ಲಿ ಸುಮಾರು 20 ಪ್ರತಿಶತದಷ್ಟು ಹೆಚ್ಚಳವಾಗಿದೆ. ಏಕೆಂದರೆ ಏಪ್ರಿಲ್ 2022 ರಲ್ಲಿ ವ್ಯಾಗನ್ ಆರ್ ಕೇವಲ 17,766 ಯುನಿಟ್‌ಗಳು ಮಾರಾಟವಾಗಿತ್ತು. ಮಾರುತಿ ಸುಜುಕಿ ವ್ಯಾಗನ್‌ಆರ್‌ನ ಆರಂಭಿಕ ಬೆಲೆ ರೂ 5.54 ಲಕ್ಷ (ಎಕ್ಸ್ ಶೋ ರೂಂ, ದೆಹಲಿ). ಇದು 34.05 km/kg (CNG) ವರೆಗೆ ಮೈಲೇಜ್ ನೀಡುತ್ತದೆ.
ಮಾರುತಿ ಸ್ವಿಫ್ಟ್ ಕಳೆದ ತಿಂಗಳು 18,573 ಯುನಿಟ್ ಗಳು ಮಾರಾಟವಾಗುವ ಮೂಲಕ ಎರಡನೇ ಅತಿ ಹೆಚ್ಚು ಮಾರಾಟವಾದ ಕಾರು ಎಂದೆನಿಸಿಕೊಂಡಿದೆ. ಆದರೆ, ಮಾರುತಿ ಸುಜುಕಿ ಬಲೆನೊ 16,180 ಯುನಿಟ್ ಗಳನ್ನು ಮಾರಾಟ ಮಾಡುವುದರೊಂದಿಗೆ ಮೂರನೇ ಹೆಚ್ಚು ಮಾರಾಟವಾದ ಕಾರು ಎಂಬ ಖ್ಯಾತಿಗೆ ಪಾತ್ರವಾಗಿದೆ. ಇದರ ನಂತರ ಟಾಟಾ ನೆಕ್ಸಾನ್ ನಾಲ್ಕನೇ ಸ್ಥಾನದಲ್ಲಿದೆ. ಅಂದರೆ, ಏಪ್ರಿಲ್ ನಲ್ಲಿ ಟಾಪ್-3 ಹೆಚ್ಚು ಮಾರಾಟವಾದ ಕಾರುಗಳು ಮಾರುತಿಯದ್ದಾಗಿದೆ
ಟಾಟಾ ನೆಕ್ಸಾನ್ ಕಳೆದ ತಿಂಗಳು 15,002 ಯುನಿಟ್ ಗಳು ಮಾರಾಟವಾಗುವ ಮೂಲಕ ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿತ್ತು. ಹ್ಯುಂಡೈ ಕ್ರೆಟಾ 14,186 ಯುನಿಟ್ ಗಳನ್ನು ಮಾರಾಟ ಮಾಡುವುದರೊಂದಿಗೆ ಐದನೇ ಸ್ಥಾನದಲ್ಲಿದೆ. ಮಾರುತಿ ಸುಜುಕಿಯ ಕಾರು ಮಾರಾಟದಲ್ಲಿ ಮತ್ತೆ ಆರನೇ ಸ್ಥಾನಕ್ಕೆ ಬಂದಿದೆ,
ಏಳನೇ ಸ್ಥಾನದಲ್ಲಿ ಮಾರುತಿ ಸುಜುಕಿ ಆಲ್ಟೊ ಇದ್ದು, 11,548 ಯುನಿಟ್ ಗಳನ್ನು ಮಾರಾಟ ಮಾಡಿದೆ. ಟಾಟಾ ಪಂಚ್ 10,934 ಯುನಿಟ್ ಗಳನ್ನು ಮಾರಾಟ ಮಾಡುವುದರೊಂದಿಗೆ ಎಂಟನೇ ಸ್ಥಾನದಲ್ಲಿದೆ. ನಂತರ ಮಾರುತಿ ಸುಜುಕಿ ಇಕೊ 10,504 ಯುನಿಟ್ ಗಳನ್ನು ಮಾರಾಟ ಮಾಡುವ ಮೂಲಕ 9 ನೇ ಅತ್ಯುತ್ತಮ ಮಾರಾಟವಾದ ಕಾರು ಆಗಿದೆ. 10,342 ಜನರು ಖರೀದಿಸಿದ ಹ್ಯುಂಡೈ ವೆನ್ಯೂ 10 ನೇ ಸ್ಥಾನದಲ್ಲಿದೆ.