Hair Care: ತುಪ್ಪಕ್ಕೆ ಈ 2 ವಸ್ತು ಬೆರೆಸಿ ಹಚ್ಚಿ, ವಾರದಲ್ಲೇ ಬಿಳಿ ಕೂದಲು ಗಾಢ ಕಪ್ಪಾಗುವುದು ಜೊತೆಗೆ ತಲೆಹೊಟ್ಟು ಕೂಡ ಮಾಯವಾಗುವುದು!
ಬಿಳಿ ಕೂದಲನ್ನು ಕಪ್ಪಾಗಿಸಲು ಹೇರ್ ಡೈ ಬಳಸುವ ಬದಲು ಮನೆಯಲ್ಲೇ ಇರುವ ದೇಸಿ ತುಪ್ಪವನ್ನು ಬಳಸಿದರೆ ಕಡು ಕಪ್ಪಾದ ಉದ್ದ ಕೂದಲನ್ನು ಪಡೆಯಬಹುದು.
ಹಸುವಿನ ತುಪ್ಪವನ್ನು ನೆತ್ತಿಯ ಮೇಲೆ ವಾರದಲ್ಲಿ ಒಂದು ಅಥವಾ ಎರಡು ಬಾರಿ ಹಾಕಿ ನಯವಾಗಿ ಮಸಾಜ್ ಮಾಡಿ. ಇದರಿಂದ ಕೂದಲು ಉದುರುವಿಕೆ ನಿಂತು ಉದ್ದ ದಪ್ಪ ಕೇಶರಾಶಿ ನಿಮ್ಮದಾಗುತ್ತದೆ.
ಬಿಳಿ ಕೂದಲನ್ನು ಕಪ್ಪಾಗಿಸಲು 2 ಸ್ಪೂನ್ ತುಪ್ಪಕ್ಕೆ 1 ಟೀ ಸ್ಪೂನ್ ನಿಂಬೆ ಹಣ್ಣಿನ ರಸ ಮತ್ತು 1 ಸ್ಪೂನ್ ಬಾದಾಮಿ ಎಣ್ಣೆ ಅಥವಾ ಆಲಿವ್ ಆಯಿಲ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ಬಿಳಿ ಕೂದಲಿನ ಬುಡದಿಂದ ತುದಿಯವರೆಗೆ ಹಚ್ಚಿ, ಬುರಡೆಯನ್ನು ನಯವಾಗಿ ಮಸಾಜ್ ಮಾಡಿ. ವಾರದಲ್ಲಿ ಒಂದು ಅಥವಾ ಎರಡು ಬಾರಿ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ.
ಇದರಿಂದ ನೆತ್ತಿ ಒಣಗುವಿಕೆ ಸಮಸ್ಯೆ ದೂರವಾಗುತ್ತದೆ. ಅಲ್ಲದೇ ಬಿಳಿ ಕೂದಲು ಕ್ರಮೇಣ ಕಪ್ಪಾಗಿ ರೇಷ್ಮೆಯಂತೆ ಶೈನ್ ಆಗುತ್ತದೆ.
ಒಂದು ಬಟ್ಟಲಿನಲ್ಲಿ 4 - 5 ಚಮಚ ತುಪ್ಪ, ಅಲೋವೆರಾ ಜೆಲ್ ಮತ್ತು ಆಲಿವ್ ಆಯಿಲ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ತಲೆಗೆ ಹಚ್ಚುವುದರಿಂದ ತಲೆಹೊಟ್ಟಿನ ಸಮಸ್ಯೆ ಕೂಡ ನಿವಾರಣೆಯಾಗುತ್ತದೆ.