ನವರಾತ್ರಿಯಲ್ಲಿ ಸರ್ಕಾರಿ ನೌಕರರಿಗೆ ಸರ್ಕಾರದ ಗಿಫ್ಟ್ ! ವೇತನದಲ್ಲಿ 27 ಸಾವಿರ ರೂ. ಹೆಚ್ಚಳ
ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ.3ರಷ್ಟು ಹೆಚ್ಚಾಗಲಿದ್ದು, ಒಟ್ಟು ತುಟ್ಟಿ ಭತ್ಯೆ ಶೇ.45ಕ್ಕೆ ಏರಲಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಆದರೆ ಜೂನ್‌ನಲ್ಲಿ ಸೂಚ್ಯಂಕ ಸಂಖ್ಯೆ 136.4 ಪಾಯಿಂಟ್‌ಗಳಷ್ಟಿದ್ದು, ಅದರ ಆಧಾರದ ಮೇಲೆ ಲೆಕ್ಕ ಹಾಕಿದರೆ ಡಿಎ ಸ್ಕೋರ್ 46.24ಕ್ಕೆ ತಲುಪಿದೆ. ಅಂದರೆ ಡಿಎಯಲ್ಲಿ ಒಟ್ಟು ಶೇ.4ರಷ್ಟು ಹೆಚ್ಚಳವಾಗಲಿದೆ ಎನ್ನುವ ಲೆಕ್ಕಾಚಾರವೂ ಇದೆ.
ಮೂಲ ವೇತನದ ಲೆಕ್ಕಾಚಾರ ಹೇಗಿರುತ್ತದೆ ( 18,000 ರೂಪಾಯಿಗೆ ) ಮೂಲ ವೇತನ - ರೂ 18,000 ಹೊಸ ಡಿಎ (ಶೇ 46) - ತಿಂಗಳಿಗೆ 8280 .ರೂ ಪ್ರಸ್ತುತ ಡಿಎ (ಶೇ 42) - ತಿಂಗಳಿಗೆ 7560.ರೂ ಎಷ್ಟಾಗಿದೆ ಹೆಚ್ಚಳ - ತಿಂಗಳಿಗೆ 720 . ರೂ ವಾರ್ಷಿಕ ಹೆಚ್ಚಳ ಎಷ್ಟು - 8640 . ರೂ
ಮೂಲ ವೇತನ - 56,900 ರೂ. ಮೇಲೆ ಲೆಕ್ಕಾಚಾರ : ಹೊಸ ಡಿಎ (ಶೇ 46) - ತಿಂಗಳಿಗೆ 26,174 .ರೂ ಪ್ರಸ್ತುತ ಡಿಎ (ಶೇ 42) - ತಿಂಗಳಿಗೆ 23,898 .ರೂ ಎಷ್ಟಾಗಿದೆ ಹೆಚ್ಚಳ - ತಿಂಗಳಿಗೆ 2,276 ರೂ ವಾರ್ಷಿಕ ಹೆಚ್ಚಳ ಎಷ್ಟು - 27,312
ಈ ಹಿಂದೆ ಮಾರ್ಚ್‌ನಲ್ಲಿ ನೌಕರರ ಡಿಎ ಹೆಚ್ಚಿಸಲಾಗಿತ್ತು. ಆಗ ತುಟ್ಟಿಭತ್ಯೆಯನ್ನು 4% ಹೆಚ್ಚಳದೊಂದಿಗೆ 38% ರಿಂದ 42% ಕ್ಕೆ ಏರಿಸಲಾಗಿತ್ತು. ನವರಾತ್ರಿ ಸಮಯದಲ್ಲಿಯೇ ಈ ಘೋಷಣೆ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಸರ್ಕಾರಿ ನೌಕರರ ಫಿಟ್‌ಮೆಂಟ್ ಅಂಶ ಹೆಚ್ಚಿಸಬೇಕು ಎಂಬ ಬೇಡಿಕೆ ಬಹಳ ದಿನಗಳಿಂದ ಇದೆ. ಸರ್ಕಾರ ಕೂಡಾ ಈ ಬಾರಿ ನೌಕರರ ಬೇಡಿಕೆಯನ್ನು ಪರಿಗಣಿಸುವ ಸಾಧ್ಯತೆ ಇದೆ. ಸರ್ಕಾರವು ಫಿಟ್‌ಮೆಂಟ್ ಅಂಶವನ್ನು 2.60 ರಿಂದ 3.0 ಪಟ್ಟು ಹೆಚ್ಚಿಸುವ ನಿರೀಕ್ಷೆಯಿದೆ. ಈ ರೀತಿಯಲ್ಲಿ ಸರ್ಕಾರಿ ಉದ್ಯೋಗಿಗಳು ಶೀಘ್ರದಲ್ಲೇ ಎರಡು ಸಿಹಿ ಸುದ್ದಿಗಳನ್ನು ಪಡೆಯಲಿದ್ದಾರೆ.