Massive Tariff Hikes: ಜುಲೈ 3ರೊಳಗೆ ರಿಚಾರ್ಜ್‌ ಮಾಡಿಸಿಕೊಳ್ಳದಿದ್ರೆ ನಿಮ್ಮ ಜೇಬಿಗೆ ಬೀಳಲಿದೆ ಕತ್ತರಿ!

Mon, 01 Jul 2024-11:44 am,

ಜಿಯೋ & ಏರ್‌ಟೆಲ್‌ನ ರೀಚಾರ್ಜ್ ಯೋಜನೆಗಳು ಜುಲೈ 3ರಿಂದ ದುಬಾರಿಯಾಗಲಿವೆ. ಈ ದಿನಾಂಕದಿಂದ ರಿಚಾರ್ಜ್ ಮಾಡಿಸಿಕೊಂಡರೆ ನಿಮಗೆ 140 ರೂ. ಹೆಚ್ಚು ಹೊರೆ ಬೀಳಲಿದೆ. ರೀಚಾರ್ಜ್ ಯೋಜನೆಗಳ ಹೊಸ ಪಟ್ಟಿಯಲ್ಲಿ 719 ರೂ. ಯೋಜನೆ ಪ್ಲ್ಯಾನ್‌ ಮೇಲೆ 140 ರೂ. ಹೆಚ್ಚುವರಿ ಪಾವತಿಸಬೇಕು. ಬಳಕೆದಾರರು ಈ ರಿಚಾರ್ಜ್‌ ಯೋಜನೆಗೆ 859 ರೂ. ಖರ್ಚು ಮಾಡಬೇಕಾಗುತ್ತದೆ. 84 ದಿನಗಳ ವ್ಯಾಲಿಡಿಟಿಯ ಈ ಯೋಜನೆಯ ಲಾಭ ಬೇಕಾದ್ರೆ ನೀವು ಈಗಲೇ 719 ರೂ. ಪಾವತಿಸಬೇಕು. ಜುಲೈ 3ರ ನಂತರ ಈ ರಿಚಾರ್ಜ್‌ ಪ್ಲ್ಯಾನ್‌ ದುಬಾರಿಯಾಗಲಿದೆ. ಆದರೆ Vi ಬಳಕೆದಾರರಿಗೆ ಜುಲೈ 4ರವರೆಗೆ ಅವಕಾಶವಿರುತ್ತದೆ.

Jioನಂತೆ ಏರ್‌ಟೆಲ್ ತನ್ನ ಗ್ರಾಹಕರಿಗೆ 84 ದಿನಗಳವರೆಗೆ 719 ರೂ.ಗೆ ಅನಿಯಮಿತ ಕರೆ ಮತ್ತು 100 SMS ಸೌಲಭ್ಯವನ್ನು ಒದಗಿಸುತ್ತದೆ. ಏರ್‌ಟೆಲ್‌ನ 719 ರೂ.ನ ಯೋಜನೆಯು ದಿನಕ್ಕೆ 1.5GB ಡೇಟಾದೊಂದಿಗೆ ಬರುತ್ತದೆ.

ಜಿಯೋದ 719 ರೂ. ರಿಚಾರ್ಜ್‌ ಪ್ಲ್ಯಾನ್‌ ಎಲ್ಲರ ಆಯ್ಕೆಯ ಪ್ಲ್ಯಾನ್‌ ಆಗಿದೆ. ಈ ರಿಚಾರ್ಜ್‌ ಪ್ಲ್ಯಾನ್‌ ಇನ್ನೆರಡು ದಿನಗಳಲ್ಲಿ ರಿಚಾರ್ಜ್‌ ಮಾಡಿಸಿಕೊಂಡಲ್ಲಿ ನೀವು 140 ರೂ. ಉಳಿಸಬಹುದು. ಇದದರೊಂದಿಗೆ ಪ್ರತಿದಿನ 2GB ಡೇಟಾ, ಅನಿಯಮಿತ ಕರೆ ಮತ್ತು SMS ಸೌಲಭ್ಯ ಪಡೆಯಬಹುದು. ಇದರೊಂದಿಗೆ ಅನಿಯಮಿತ 5G ಡೇಟಾ ಮತ್ತು Jio ಅಪ್ಲಿಕೇಶನ್‌ಗಳ ಪ್ರಯೋಜನ ಸಹ ನೀಡಲಾಗುತ್ತಿದೆ. ಏರಟೆಲ್‌ ಗ್ರಾಹಕರು ಇಷ್ಟೇ ರಿಚಾರ್ಜ್‌ ಮಾಡಿಸಿಕೊಂಡಲ್ಲಿ ಪ್ರತಿದಿನ ಕೇವಲ 1.5GB ಡೇಟಾ ಸಿಗುತ್ತದೆ. 

Vodafone Idea 719 ರೂ.ಗೆ 1.5GB ಡೇಟಾ, ಅನಿಯಮಿತ ಕರೆ ಮತ್ತು ದಿನಕ್ಕೆ 100 SMS ಒದಗಿಸುತ್ತದೆ. ಇದಲ್ಲದೆ ಅನಿಯಮಿತ ಡೇಟಾ, ವಾರಾಂತ್ಯದ ಡೇಟಾ ರೋಲ್‌ಓವರ್‌ನ ಪ್ರಯೋಜನ ಪಡೆಯಬಹುದು. ಮಧ್ಯರಾತ್ರಿ 12ರಿಂದ ಬೆಳಗ್ಗೆ 6ರವರೆಗೆ ಉಚಿತ ಡೇಟಾ ಸಹ ನೀಡಲಾಗುತ್ತದೆ. ನೀವು ರಾತ್ರಿ 12 ಗಂಟೆಯ ನಂತರ ಹೆಚ್ಚು ಇಂಟರ್ನೆಟ್ ಬಳಸುವ ಗ್ರಾಹಕರಾಗಿದ್ದರೆ ಯೋಜನೆ ನಿಮಗೆ ಉತ್ತಮ ಆಯ್ಕೆಯಾಗಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link