ಟೀಂ ಇಂಡಿಯಾ ಸ್ಟಾರ್ ಆಟಗಾರನ ಪ್ರೀತಿಯಲ್ಲಿ ಬಿದ್ದ ಆಸ್ಟ್ರೇಲಿಯಾ ಆಟಗಾರನ ಪುತ್ರಿ..! ತಂದೆಯ ಮುಂದೆ ಮನದ ಆಸೆ ಬಿಚ್ಚಿಟ್ಟಳು ಸುಂದರಿ!
Grace Hayden: ಬ್ರಿಸ್ಬೇನ್‌ನ ಗಬ್ಬಾ ಮೈದಾನದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ರಿಷಬ್ ಪಂತ್ ದೊಡ್ಡ ದಾಖಲೆ ಮಾಡಿದ್ದಾರೆ.
ಮಳೆಯಿಂದಾಗಿ ಮೊದಲ ದಿನ ಕೇವಲ 14 ಓವರ್‌ಗಳನ್ನು ಮಾತ್ರ ಆಡಲು ಸಾಧ್ಯವಾಯಿತು, ಆದರೆ ಮೊದಲನೆ ದಿನ ಮಲೆಯಿಂದಾಗಿ ರದ್ದಾಗಿದ್ದ ಪಂದ್ಯವನ್ನು ಮುಂದುವರೆಸಲು ಎರಡನೆ ದಿನ ಕೊಂಚ ಮುಂಚಿತವಾಗಿಯೇ ಪಂದ್ಯವನ್ನು ಆರಂಭಿಸಲಾಗಿದೆ.
ಈ ಪಂದ್ಯದ ವೇಳೆ ರಿಷಬ್ ಪಂತ್ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ವಿಕೆಟ್‌ಕೀಪರ್ ವೃತ್ತಿಜೀವನದ 150 ನೇ ವಿಕೆಟ್ ಪಡೆದು ಸಾಧನೆ ಮಾಡಿದ್ದಾರೆ.
2018ರಲ್ಲಿ ಭಾರತ ಪರ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಪಂತ್ 41 ಟೆಸ್ಟ್ ಪಂದ್ಯಗಳಲ್ಲಿ ಈ ಸಾಧನೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಇದೀಗ ಇನ್ಟ್ರೆಸ್ಟಿಂಗ್ ಸುದ್ದಿ ಏನೆಂದರೆ ಸ್ಟಾರ್ ಆಟಗಾರನಿಗೆ ಸುಂದರಿಯೊಬ್ಬಳು ಮನಸೋತಿದ್ದಾಳೆ.
ಆಸ್ಟ್ರೇಲಿಯಾದ ದಿಗ್ಗಜ ಬ್ಯಾಟ್ಸ್‌ಮನ್ ಮ್ಯಾಥ್ಯೂ ಹೇಡನ್ ಅವರ ಪುತ್ರಿ ಗ್ರೇಸ್ ಹೇಡನ್ ಕ್ರಿಕೆಟ್ ಆಡದಿರಬಹುದು. ಆದರೆ, ಆಕೆ ಕ್ರೀಡಾ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಐಪಿಎಲ್‌ನಿಂದ ಐಸಿಸಿ ಪಂದ್ಯಾವಳಿಗಳವರೆಗೆ ಅನೇಕ ಪ್ರಮುಖ ಕ್ರಿಕೆಟ್ ಕಾರ್ಯಕ್ರಮಗಳಲ್ಲಿ ನಿರೀಕಪಕಿಯಾಗಿ ಕೆಲಸ ಮಾಡಿದ್ದಾರೆ.
ಟೈಮ್ಸ್ ಆಫ್ ಇಂಡಿಯಾದೊಂದಿಗೆ ಮಾತನಾಡಿದ ಗ್ರೇಸ್, ರಿಷಬ್ ಪಂತ್ ಅವರ ಅದ್ಭುತ ಪುನರಾಗಮನವನ್ನು ಶ್ಲಾಘಿಸಿದ್ದು, ಗಂಭೀರ ಅಪಘಾತದ ನಂತರ ಕಮ್‌ಬ್ಯಾಕ್ ಮಾಡಿರುವದಷ್ಟೆ ಅಲ್ಲ, ಜೊತೆಗೆ ಐಪಿಎಲ್‌ನಲ್ಲಿ ಅತೀ ಹೆಚ್ಚು ಮೊತ್ತಕ್ಕೆ ಸೇಲ್ ಆಗಿರುವುದರ ಕುರಿತ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಅಷ್ಟೆ, ಅಲ್ಲ ರಿಷಬ್ ಪಂತ್ ಅವರ ಕುರಿತು ಮಾತನಾಡುತ್ತಾ, ನಾನು ಆಸ್ಟ್ರೇಲಿಯನ್ ಇರಬಹುದು ಆದರೆ, ನನಗೆ ಟೀಂ ಇಂಡಿಯಾದ ರಿಷಬ್ ಪಂತ್ ಎಂದರೆ ಬಹಳ ಇಷ್ಟ ಅಷ್ಟೆ ಅಲ್ಲ ಗೌರವ ಕೂಡ, ಈ ವಿಚಾರ ನನ್ನ ತಂದೆ ಬಳಿಯೂ ನಾನು ಸಾಕಷ್ಟು ಬಾರಿ ಮಾತನಾಡದ್ದೇನೆ ಎಂದಿದ್ದಾರೆ.