Photo Gallery: ಅಚ್ಚರಿಗಳನ್ನು ಬಚ್ಚಿಟ್ಟುಕೊಂಡ ಮಾವು ಬೇವು
ಅಂಥಾ ಗೀತ ಗುಚ್ಛವನ್ನು ಸಿನಿಮಾ ರೂಪಕ್ಕೆ ತರಬೇಕೆಂದು ಸಿ ಅಶ್ವತ್ಥ್, ಬಾಲಸುಬ್ರಮಣ್ಯಂ, ದೊಡ್ಡರಂಗೇಗೌಡರು ನಲವತ್ತು ವರ್ಷಗಳಿಂದೀಚೆಗೆ ಬಹುವಾಗಿ ಪ್ರಯತ್ನಿಸಿದ್ದರು.
ರಾಜಶೇಖರ್ ಅವರು ಅತ್ಯಂತ ಆಸ್ಥೆಯಿಂದ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸುಚೇಂದ್ರ ಪ್ರಸಾದ್ ಅವರ ಕನಸಿಗೆ ಜೊತೆಯಾಗಿದ್ದಾರೆ. ಒಟ್ಟಾರೆಯಾಗಿ ಮಾವು ಬೇವು ಕನ್ನಡದ ಪ್ರೇಕ್ಷಕರಿಗೆ ಹೊಸಾ ಬಗೆಯ ಅನುಭೂತಿಯನ್ನು ಕೊಡಮಾಡಲಿರುವುದು ನಿಜ.
ಹಿರಿಯ ನಟ ಶ್ರೀನಿವಾಸ ಮೂರ್ತಿ, ಸುಂದರಶ್ರೀ, ನೀನಾಸಂ ಸಂದೀಪ್, ಚೈತ್ರ ಎಚ್.ಜಿ, ಡ್ಯಾನಿ ಕುಟ್ಟಪ್ಪ, ಸುಪ್ರಿಯಾ ಎಸ್ ರಾವ್, ರಂಜಿತಾ ಎಚ್, ಸಿತಾರಾ, ಚಕ್ರವರ್ತಿ ದಾವಣಗೆರೆ, ರಂಜನ್ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ.
70-80ರ ದಶಕದಲ್ಲಿ ಹಾಡುಗಳೆಂದರೆ ಹುಚ್ಚೇಳುವ, ಮುದಗೊಳ್ಳುವ ಕಾಲಮಾನವೊಂದಿತ್ತು. ಅಂಥಾ ಘಳಿಗೆಯಲ್ಲಿ ಕನ್ನಡದ ಮೇರು ಕವಿ ದೊಡ್ಡರಂಗೇಗೌಡರು, ಪ್ರಖ್ಯಾತ ಗಾಯಕ ಎಸ್.ಪಿ ಬಾಲಸುಬ್ರಮಣ್ಯಂ ಮತ್ತು ಜನಪ್ರಿಯ ಸಂಗೀತ ನಿರ್ದೇಶಕರುಗಳಾದ ಅಶ್ವತ್ಥ್-ವೈದಿ ಜೋಡಿಯ ಸಮಾಗಮ ಸಂಭವಿಸಿತ್ತು.
ಅದನ್ನು ತಣಿಸುತ್ತಲೇ, ಅಗಾಧ ಪ್ರಮಾಣದಲ್ಲಿ ನಿರೀಕ್ಷೆ ಮೂಡಿಸಬಲ್ಲ ಒಂದಷ್ಟು ವಿಚಾರಗಳೀಗ ಚಿತ್ರತಂಡದ ಕಡೆಯಿಂದ ಹೊರಬಿದ್ದಿವೆ!
ಮಾವು ಬೇವು’ ಇದೇ ಏಪ್ರಿಲ್ 21ರಂದು ಬಿಡುಗಡೆಗೊಳ್ಳಲಿದೆ. ಸುಚೇಂದ್ರ ಪ್ರಸಾದ್ ಸಾರಥ್ಯ ವಹಿಸಿದ್ದಾರೆಂದ ಮೇಲೆ ಮಾವು ಬೇವಿನ ಬಗ್ಗೆ ತಾನೇ ತಾನಾಗಿ ಕುತೂಹಲವೊಂದು ಮೂಡಿಕೊಳ್ಳುತ್ತದೆ.