ಮ್ಯಾಕ್ಸ್ ರಿಲೀಸ್ ಡೇಟ್ ಬಗ್ಗೆ ಸುದೀಪ್ ಕೊಟ್ರು ಬಿಗ್ ಅಪ್‌ಡೇಟ್
)
ಕಾರ್ತಿಕ್ ಮಹೇಶ್ ನಟನೆಯ ‘ರಾಮರಸ’ ಸಿನಿಮಾ ಇವೆಂಟ್‌ಗೆ ಆಗಮಿಸಿದ ವೇಳೆ ನಟ ಸುದೀಪ್ ಹಲವು ವಚಾರಗಳ ಬಗ್ಗೆ ಮಾತನಾಡಿದರು. ಇದೇ ವೇಳೆ ಮ್ಯಾಕ್ಸ್ ಸಿನಿಮಾ ರಿಲೀಸ್ ಡೇಟ್ ಬಗ್ಗೆಯೂ ಅಪ್‌ಡೇಟ್ ನೀಡಿದರು.
)
ವಿಕ್ರಾಂತ್ ರೋಣ ಸಿನಿಮಾದ ಬಳಿಕ ನಟ ಸುದೀಪ್ ಮ್ಯಾಕ್ಸ್ ಚಿತ್ರವನ್ನು ಅನೌನ್ಸ್ ಮಾಡಿದರು. ಈ ಚಿತ್ರದ ಬಗ್ಗೆ ಇದೀಗ ಬಿಗ್ ಅಪ್‌ಡೇಟ್ ನೀಡಿದ್ದಾರೆ. ಮ್ಯಾಕ್ಸ್ ಸಿನಿಮಾವನ್ನು ವಿಜಯ್ ಕಾರ್ತಿಕೇಯ ನಿರ್ದೇಶನ ಮಾಡಿದ್ದಾರೆ.
)
ಮ್ಯಾಕ್ಸ್ ಸಿನಿಮಾದ ಡಬ್ಬಿಂಗ್ ಕೆಲಸಗಳೆಲ್ಲವೂ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ ಎಂದು ಸುದೀಪ್ ಹೇಳಿದ್ದಾರೆ.
ಆಗಸ್ಟ್‌ನಲ್ಲಿ ಸಿನಿಮಾ ಬರಬಹುದು. ಕೆಲಸ ಸ್ವಲ್ಪ ವಿಳಂಬ ಆದರೆ ಸೆಪ್ಟೆಂಬರ್ ವೇಳೆಗೆ ಮ್ಯಾಕ್ಸ್ ರಿಲೀಸ್ ಆಗಲಿದೆ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
ಕಿಚ್ಚ ಸುದೀಪ್, ವರಲಕ್ಷ್ಮಿ ಶರತ್ ಕುಮಾರ್, ಸಂಯುಕ್ತಾ ಹೊರನಾಡು, ಸುಕೃತಾ ವಾಘ್ಲೆ, ಪ್ರಮೋದ್ ಶೆಟ್ಟಿ ಸೇರಿದಂತೆ ಹಲವು ತಾರೆಯರು ನಟಿಸಿದ್ದಾರೆ. ಕಲೈಪುಲಿ ಎಸ್. ಧನು ಮ್ಯಾಕ್ಸ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.