ವೀರೆಂದ್ರ ಸೆಹ್ವಾಗ್ ಸೋದರಳಿಯ RCBಯ ಸ್ಟಾರ್ ಕ್ರಿಕೆಟಿಗ! ಫಿಟ್ನೆಸ್’ನಲ್ಲಿ ಕೊಹ್ಲಿಯನ್ನೇ ಮೀರಿಸಿರುವ ಆತ ಯಾರು ಗೊತ್ತಾ?
ಭಾರತದ ಸ್ಫೋಟಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಅವರ ಸೋದರಳಿಯ ಮಯಾಂಕ್ ದಾಗರ್. ಕೊಹ್ಲಿಯಂತೆ ಮಯಾಂಕ್ ಕೂಡ ತಮ್ಮ ಫಿಟ್ನೆಸ್ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ.
ಒಂದೊಮ್ಮೆ ನಡೆಸಿದ ಯೋ-ಯೋ ಟೆಸ್ಟ್’ನಲ್ಲಿ, ಮಯಾಂಕ್ ಕೊಹ್ಲಿಗಿಂತ ಮುಂದಿದ್ದರು. ಇನ್‌ಸ್ಟಾಗ್ರಾಂನಲ್ಲಿ ಯೋ-ಯೋ ಟೆಸ್ಟ್ ಸ್ಕೋರ್ 19.3 ಎಂದು ಸ್ಟೋರಿ ಕೂಡ ಶೇರ್ ಮಾಡಿದ್ದರು. ಇನ್ನುವಿರಾಟ್ ಕೊಹ್ಲಿ ಅವರ ಅತ್ಯುತ್ತಮ ಯೋ-ಯೋ ಸ್ಕೋರ್ 19.0 ಆಗಿದೆ.
ಮಯಾಂಕ್ ಇದುವರೆಗೆ 34 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 97 ವಿಕೆಟ್ ಕಬಳಿಸಿರುವ ಅವರು, 801 ರನ್ ಗಳಿಸಿದ್ದಾರೆ. ಲಿಸ್ಟ್ ಎನಲ್ಲಿ 49 ಪಂದ್ಯಗಳನ್ನು ಆಡಿರುವ ಮಯಾಂಕ್, 52 ವಿಕೆಟ್ಗಳನ್ನು ಪಡೆದಿದ್ದಾರೆ. ಟಿ20 ಬಗ್ಗೆ ಮಾತನಾಡುವುದಾದರೆ 54 ಟಿ20ಗಳಲ್ಲಿ 1267 ರನ್ ಗಳಿಸಿ, 55 ವಿಕೆಟ್‌ಗಳನ್ನು ಪಡೆದಿದ್ದಾರೆ.