ಪ್ರೀತಿಯ ಬಲೆಗೆ ಬಿದ್ದು ಎರಡು ಮಕ್ಕಳ ತಾಯಿಯೊಂದಿಗೆ ಮದುವೆ!ಚಿಯರ್ ಗರ್ಲ್,ಮಾಡೆಲ್ ಅಂದಕ್ಕೆ ಮನಸೋತ ಖ್ಯಾತ ಕ್ರಿಕೆಟಿಗನಿಗೆ ಸಿಕ್ಕಿದ್ದು ನರಕ ಯಾತನೆ!
)
ಹಸಿನ್ ಜಹಾನ್ ವೃತ್ತಿಪರ ಮಾಡೆಲ್.ಕೋಲ್ಕತ್ತಾ ನೈಟ್ ರೈಡರ್ಸ್‌ಗೆ ಚಿಯರ್ ಲೀಡರ್ ಕೂಡಾ ಆಗಿದ್ದಾರೆ.ಹಸಿನ್ ಜಹಾನ್ ತಮ್ಮ ಫಿಟ್ನೆಸ್ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ.
)
ಮೊಹಮ್ಮದ್ ಶಮಿ ಜೊತೆಗಿನ ವಿವಾದದಿಂದಾಗಿ ಹಸಿನ್ ಜಹಾನ್ ತನ್ನ ಮಗಳೊಂದಿಗೆ ಬಹಳ ದಿನಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು.ಇವರಿಬ್ಬರ ನಡುವೆ ಮನಸ್ತಾಪ ಬಹಳ ಸಮಯದಿಂದ ನಡೆದುಕೊಂಡು ಬಂದಿದೆ. ಆದರೂ ಇಬ್ಬರ ನಡುವೆ ಇನ್ನೂ ವಿಚ್ಛೇದನ ಆಗಿಲ್ಲ.
)
ಮೊಹಮ್ಮದ್ ಶಮಿ ಮತ್ತು ಹಸೀನ್ ಜಹಾನ್ 2014ರಲ್ಲಿ ವಿವಾಹವಾದರು.ಕೆಲವು ವರ್ಷಗಳ ನಂತರ, ಶಮಿ ಇತರ ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದಾರೆಂದು ಎನ್ನುವ ಆರೋಪ ಪತ್ನಿ ಕಡೆಯಿಂದ ಬಂತು.
2018ರಲ್ಲಿ,ಹಲ್ಲೆ, ಅತ್ಯಾಚಾರ,ಕೊಲೆ ಯತ್ನ ಮತ್ತು ಕೌಟುಂಬಿಕ ಹಿಂಸಾಚಾರದಂತಹ ಆರೋಪಗಳ ಅಡಿಯಲ್ಲಿ ಶಮಿ ವಿರುದ್ದ ಪ್ರಕರಣ ದಾಖಲಿಸಲಾಗಿದೆ.
ಹಸೀನ್ ರೂಪದರ್ಶಿಯಾಗಿದ್ದರು. ನಂತರ ಅವರು ಕೋಲ್ಕತ್ತಾ ನೈಟ್ ರೈಡರ್ಸ್‌ನ ಚಿಯರ್ ಲೀಡರ್ ಆದರು.ಇದೇ ಸಮಯದಲ್ಲಿ ಇಬ್ಬರೂ ಭೇಟಿಯಾದದ್ದು, ಪ್ರೀತಿ ಹುಟ್ಟಿದ್ದು, ಮದುವೆಯಾದದ್ದು.
ಮದುವೆಯ ನಂತರ ಹಸಿನ್ ಜಹಾನ್ ಮಾಡೆಲಿಂಗ್ ತೊರೆದರು.ಇದು ಹಸಿನ್ ಜಹಾನ್ ಅವರ ಎರಡನೇ ಮದುವೆ.
ಹಸೀನ್ ಜಹಾನ್ ಅವರ ಮೊದಲ ಮದುವೆಯಿಂದ ಇಬ್ಬರು ಮಕ್ಕಳಿದ್ದಾರೆ. ಮೊದಲ ಮದುವೆಯಿಂದ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದರು.ಆದರೆ 2010ರಲ್ಲಿ ಇವರಿಬ್ಬರಿಗೂ ವಿಚ್ಛೇದನವಾಗಿತ್ತು.