Meera Chopra: 40ನೇ ವಯಸ್ಸಿನಲ್ಲಿ ದಾಂಪತ್ಯಕ್ಕೆ ಕಾಲಿಡುತ್ತಿರುವ ಡಿಬಾಸ್‌ ಅರ್ಜುನ್ ಚಿತ್ರದ ನಟಿ!

Thu, 28 Dec 2023-10:14 am,

ನಟಿ ಮೀರಾ ಈ ವರ್ಷ 'ಸಫೇದ್' ಎನ್ನುವ ಚಿತ್ರದಲ್ಲಿ ಅಭಿನಯಿಸಿದ್ದು, ಸದ್ಯ 'ನಾಸ್ತಿಕ್', 'ಮೊಗಲಿ ಪುವ್ವು' ಎನ್ನುವ ಎರಡು ಸಿನಿಮಾಗಳಲ್ಲಿ ಮೀರಾ ಚೋಪ್ರಾ ನಟಿಸಿದ್ದಾರೆ. ಆದರೆ ಮುಂದಿನ ವರ್ಷ ಆ ಸಿನಿಮಾಗಳು ತೆರೆಗೆ ಬರಲಿವೆ. 

ಬಹುಭಾಷಾ ತಾರೆ ಮೀರಾರನ್ನು 2008ರಲ್ಲಿ ನಿರ್ದೇಶಕ ಶಾಹುರಾಜ್ ಶಿಂಧೆ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದರು. ಅರ್ಜುನ್‌ ಚಿತ್ರದಲ್ಲಿ ದರ್ಶನ್ ಜೋಡಿಯಾಗಿ ಈಕೆ ಮಿಂಚಿದ್ದರು. 

 ಮೀರಾ ಚೋಪ್ರಾ, 2005ರಲ್ಲಿ 'ಅನ್ಬೆ ಆರುಯಿರೇ' ಎನ್ನುವ ತಮಿಳು ಸಿನಿಮಾ ಮೂಲಕ ಆಕೆ ಚಿತ್ರರಂಗಕ್ಕೆ ಬಂದವರು, ಈಕೆ ಪ್ರಿಯಾಂಕ ಚೋಪ್ರಾ ಮತ್ತು ಪರಿಣಿತಿ ಚೋಪ್ರಾ ಕಸಿನ್ ಆಗಿದ್ದರೂ ಕೂಡ ಈ ನಟಿಗೆ ದೊಡ್ಡಮಟ್ಟದಲ್ಲಿ ಸಕ್ಸಸ್ ಸಿಗಲಿಲ್ಲ.

ನಟಿ ಮೀರಾ ಮದುವೆ ಸಮಾರಂಭ ರಾಜಸ್ಥಾನದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್‌ನಲ್ಲಿ ನಡೆದ ಬಳಿಕ ಮುಂಬೈನಲ್ಲಿ ರಿಸೆಪ್ಷನ್ ಪಾರ್ಟಿ ಆಯೋಜಿಸುವ ಲೆಕ್ಕಾಚಾರದಲ್ಲಿದ್ದಾರೆ. ಚಿತ್ರರಂಗದವರು ಹಾಗೂ ಸ್ನೇಹಿತರನ್ನು ಈ ಪಾರ್ಟಿಗೆ ಆಹ್ವಾನಿಸಲು ತೀರ್ಮಾನಿಸಿದ್ದಾರೆ.

ಮೀರಾ ಚೋಪ್ರಾ ಸಂದರ್ಶನದಲ್ಲಿ, " ರಾಜಸ್ಥಾನದಲ್ಲಿ ಅದ್ಧೂರಿಯಾಗಿ ಮದುವೆ ನಡೆಯಲಿದೆ. ವಿವಾಹ ಮಹೋತ್ಸವದಲ್ಲಿ 150 ಜನ ಅತಿಥಿಗಳಿಗೆ ಆಹ್ವಾನ ನೀಡಲು ಚಿಂತನೆ ನಡೆಸಿದ್ದೇವೆ" ಎಂದು ತಿಳಿಸಿದ್ದಾರೆ.

ನಟಿ ಮೀರಾ ಸಂದರ್ಶನದಲ್ಲಿ "ಹೌದು. ನಾನು ಮದುವೆ ಆಗುತ್ತಿದ್ದೇನೆ. 2024 ಫೆಬ್ರವರಿಯಲ್ಲಿ ಮದುವೆ ನಡೆಯಲಿದೆ. ಈಗಾಗಲೇ ನಮ್ಮ ಕುಟುಂಬ ಸದಸ್ಯರು ಮದುವೆ ಸಿದ್ಧತೆ ನಡೆಸಿದ್ದಾರೆ." ಎಂದು ಹೇಳಿದ್ದಾರೆ.

ಬಹುಭಾಷಾ ನಟಿ ಮೀರಾ ಚೋಪ್ರಾ 40ನೇ ವಯಸ್ಸಿನಲ್ಲಿ ಮದುವೆಯಾಗಲಿ ರೆಡಿಯಾಗಿದ್ದಾರೆ ಎಂಬ ವಿಷಯವನ್ನು ಸಂದರ್ಶವೊಂದರಲ್ಲಿ ಹೇಳಿಕೊಂಡಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link