ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಸೊಸೆ ಚಿತ್ರರಂಗವನ್ನೇ ಆಳುತ್ತಿರುವ ಖ್ಯಾತ ನಟಿ! ಯಾರು ಗೊತ್ತಾ ಆ ಸುಂದರಿ?
ಮನರಂಜನಾ ಕ್ಷೇತ್ರದಲ್ಲಿ ಸದ್ಯ ಸಖತ್ ಹವಾ ಸೃಷ್ಟಿಸುತ್ತಿರುವ ಅದಿತಿ ದ್ರಾವಿಡ್ ಅವರ ಜೀವನ ಮತ್ತು ವೃತ್ತಿಜೀವನದ ಬಗ್ಗೆ ಒಂದಿಷ್ಟು ಮಾಹಿತಿಯನ್ನು ನಿಮ್ಮ ಮುಂದಿಡಲಿದ್ದೇವೆ.
ಪ್ರತಿಭಾವಂತ ಮರಾಠಿ ನಟಿ ಅದಿತಿ ದ್ರಾವಿಡ್. ಈಕೆಯ ಪೂರ್ಣ ಹೆಸರು ಅದಿತಿ ವಿನಾಯಕ್ ದ್ರಾವಿಡ್. ಮಹಾರಾಷ್ಟ್ರದ ಪುಣೆಯಲ್ಲಿ ಜನಿಸಿದ ಅವರು ಪ್ರಸ್ತುತ ಮುಂಬೈನಲ್ಲಿ ನೆಲೆಸಿದ್ದಾರೆ.
ಮಹಾರಾಷ್ಟ್ರದ ಪುಣೆಯ ಅಭಿನವ ವಿದ್ಯಾಲಯದಲ್ಲಿ ಶಾಲಾ ಶಿಕ್ಷಣ ಪೂರೈಸಿದ ಅದಿತಿ, ಪುಣೆಯ BMCCಯಲ್ಲಿ ಕಾಲೇಜು ಶಿಕ್ಷಣವನ್ನು ಪಡೆದರು.
ಇನ್ನು ರಾಹುಲ್ ದ್ರಾವಿಡ್ ಅವರು ದಿಗ್ಗಜ ಕ್ರಿಕೆಟಿಗರಾಗಿದ್ದರೂ ಸಹ, ಅದಿತಿ ತನ್ನ ಕುಟುಂಬದ ಗುರುತನ್ನು ಎಂದಿಗೂ ಬಹಿರಂಗಪಡಿಸದೆ, ತನ್ನ ಪ್ರತಿಭೆಯಿಂದಲೇ ಈ ಸ್ಥಾಯಿಗೆ ತಲುಪಿದ್ದಾರೆ.
ಅದಿತಿ ಮರಾಠಿ ಧಾರಾವಾಹಿ "ಮಜ್ಯಾ ನವ್ರಾಚಿ ಬಾಯ್ಕೊ" ಮೂಲಕ ಮನರಂಜನಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು. "ಡಾ. ಬಾಬಾಶೇಬ್ ಅಂಬೇಡ್ಕರ್", "ಮಜ್ಯಾ ನವ್ರಾಚಿ ಬಾಯ್ಕೊ" ಮತ್ತು "ಸುಂದ್ರ ಮನಮಧ್ಯೆ ಭರಾಲಿ" ಧಾರಾವಾಹಿಗಳಲ್ಲಿ ಅಭಿನಯಿಸಿ ಕಿರುತೆರೆಯನ್ನೇ ಆಳುತ್ತಿದ್ದಾರೆ.
ಇನ್ನು ಅದಿತಿ ದ್ರಾವಿಡ್ ಅವರು, ತನ್ನ ಡ್ರೆಸ್ ಬ್ರಾಂಡ್ "ದಿ ಡ್ರೆಸ್ವಾಲಿ. ಕಂ" ಅನ್ನು ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳನ್ನು ಅಚ್ಚರಿಗೊಳಿಸಿದ್ದಾರೆ. ಅವರು ಸುಮಾರು ಮೂರು ವರ್ಷಗಳ ಕಾಲ ಈ ಉದ್ಯಮದಲ್ಲಿ ಕೆಲಸ ಮಾಡಿದ್ದು, ಅಕ್ಷಯ ತೃತೀಯದ ಶುಭ ದಿನದಂದು ಅನಾವರಣಗೊಳಿಸಿದ್ದರು.