Megha Shetty: ಬೋಲ್ಡ್ ಲುಕ್‌ನಲ್ಲಿ ಕ್ಯಾಮೆರಾ ಕಣ್ಣಿಗೆ ಸೆರೆಯಾದ ಕೈವ ಬೆಡಗಿ!
ಕಿರುತೆರೆ ಹಾಗೂ ಬೆಳ್ಳಿತೆರೆಯ ನಟಿ ಮೇಘಾ ಶೆಟ್ಟಿ ಮತ್ತೆ ಗ್ಲ್ಯಾಮರಸ್ ಆಗಿ ಫೋಟೋಶೂಟ್‌ನಲ್ಲಿ ಮಿಂಚಿದ್ದು, ಅದರಲ್ಲಿ ಶೆಟ್ಟಿ ನೀಲಿ ಬಣ್ಣದ ಉಡುಗೆಯಲ್ಲಿ ನಟಿ ಕಂಗೊಳಿಸುವುದರ ಜೊತೆಗೆ, ಈಕೆಯ ಬೋಲ್ಡ್ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ನಟಿ ಮೇಘಾ ಶೆಟ್ಟಿಯ ಫೋಟೊಗಳಿಗೆ ಲೈಕ್ಸ್‌ಗಳ ಮಳೆಯೇ ಸುರಿಯುತ್ತಿದ್ದು, ಫ್ಯಾನ್ಸ್ ತಮ್ಮ ಮೆಚ್ಚುಗೆಯನ್ನು ಕಮೆಂಟ್‌ಗಳ ನದಿಯೇ ಹರಿಸುತ್ತಿದ್ದಾರೆ.
‘ಕೈವಾ’ ಸುಂದರಿ ಮೇಘಾ, ನೀಲಿ ಬಣ್ಣದ ಡ್ರೆಸ್‌ನಲ್ಲಿ ಮುದ್ದಾಗಿ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದು, ಈಕೆಯ ಸೌಂದರ್ಯವನ್ನು ಹಾಲಿವುಡ್ ನಟಿಯರಿಗೆ ಹೋಲಿಸಿ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.
ನಟಿ ಮೇಘಾ ಶೆಟ್ಟಿ ಕಿರುತೆರೆಯ ಜನಪ್ರಿಯ ‘ಜೊತೆ ಜೊತೆಯಲಿ’ ಸೀರಿಯಲ್‌ನಲ್ಲಿ ನಾಯಕಿಯಾಗಿ ಅನು ಸಿರಿಮನೆ ಪಾತ್ರದ ಮೂಲಕ ಕನ್ನಡಿಗರಿಗೆ ಪರಿಚಿತರಾಗಿ ಮೇಘಾ ಶೆಟ್ಟಿ ಮಿಂಚಿದ್ದರು.
ಮೇಘಾ ಶೆಟ್ಟಿ ಗೋಲ್ಡನ್ ಸ್ಟಾರ್ ಗಣೇಶ್‌ಗೆ ಜೋಡಿಯಾಗಿ ‘ತ್ರಿಬಲ್ ರೈಡಿಂಗ್’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ್ದರು.
ಚಂದನವನದ ಬೆಡಗಿ ಮೇಘಾ ಶೆಟ್ಟಿ ಬಳಿಕ ಡಾರ್ಲಿಂಗ್ ಕೃಷ್ಣಗೆ ನಾಯಕಿಯಾಗಿ ‘ದಿಲ್‌ಪಸಂದ್’ ಹಾಗೂ ಧನ್ವೀರ್ ಜೊತೆ ‘ಕೈವಾ’ ಸಿನಿಮಾದಲ್ಲಿ ಮೇಘಾ ಶೆಟ್ಟಿ ನಟಿಸಿದ್ದರು.
ಸದ್ಯ ಮೇಘಾ ಶೆಟ್ಟಿ ದೊಡ್ಮನೆ ಕುಡಿ ವಿನಯ್ ರಾಜ್‌ಕುಮಾರ್ ಜೊತೆ ‘ಗ್ರಾಮಾಯಣ’ ಎಂಬ ಚಿತ್ರದಲ್ಲಿ ನಟಿಸುತ್ತಿದ್ದು, ಹೊಸ ಬಗೆಯ ಕಥೆಗಳನ್ನು ನಟಿ ಕೇಳುತ್ತಿದ್ದಾರೆ.
ನಟಿ ಹುಟ್ಟಿದ್ದು ಮಂಗಳೂರಿನಲ್ಲಾದರೂ, ಬೆಳೆದಿದ್ದು ಹಾಗೂ ಜೀವನವನ್ನು ಕಟ್ಟಿಕೊಂಡಿದ್ದು ಬೆಂಗಳೂರಿನಲ್ಲಿ. ಈಕೆ ನಟನೆಯ ಜೊತೆಗೆ ಕೆಂಡಸಂಪಿಯ ಎಂಬ ಧಾರವಾಹಿಗೆ ನಿರ್ಮಾಪಕಿಯಾಗಿದ್ದಾರೆ.