Megha Shetty: ಸ್ಲೀವ್ ಲೆಸ್ ಬ್ಲೌಸ್‌ ತೊಟ್ಟು ಮಿಂಚಿದ ಕೈವ ಸುಂದರಿ!

Sat, 23 Dec 2023-6:08 pm,

ಮೇಘಾ ಶೆಟ್ಟಿ 'ಜೊತೆ ಜೊತೆಯಲಿ' ಧಾರಾವಾಹಿಯ ಮೂಲಕ ಅನು ಸಿರಿಮನೆ ಆಗಿ ಮಿಂಚಿದ ನಟಿ, ಕಿರುತೆರೆಯಲ್ಲಿ ಕಮಾಲ್ ಮಾಡಿದ ಬಳಿಕ ಹಿರಿತೆರೆಯ ಬಹು ಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾರೆ. ಇದೀಗ ಚಂದನವನದಲ್ಲಿ ಹಲವಾರು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ.  

ನಟಿ ಮೇಘಾ ಶೆಟ್ಟಿ, ಅಭಿನಯದಲ್ಲಿ ಇವರನ್ನು ಮೀರಿಸುವವರು ಮತ್ತೊಬ್ಬರು ಇಲ್ಲ ಎನ್ನುವ ಹಾಗೆ ಬಹಳ ಅದ್ಭುತವಾಗಿ ನಟಿಸಿ ಸೈ ಎನಿಸಿಕೊಂಡಿದ್ದು, ನಟನೆಯ ಯಾವುದೇ ಹಿನ್ನೆಲೆ ಇಲ್ಲದೆ ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳುತ್ತಿರುವ ಈಕೆಯನ್ನು ನೋಡಿದ ಅಭಿಮಾನಿಗಳಿಗೆ ಬಹಳ ಖುಷಿಯ ಸಂಗತಿ ಆಗಿದೆ.

ಇತ್ತೀಚೆಗೆ ಮೇಘಾ ಶೆಟ್ಟಿ ಹೊಸ ರೀತಿಯ ಫೋಟೋಶೂಟ್‌ಗಳನ್ನು ಮಾಡಿಸಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಾ ಇರುತ್ತಾರೆ. ಇದೀಗ ಕಲರ್ ಫುಲ್ ಆಗಿರುವ ಸೀರೆಯಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ನಿದ್ದೆ ಕದ್ದು ಬಿಟ್ಟಿದ್ದಾರೆ.

ನಟಿ ಮೇಘಾ ಶೆಟ್ಟಿ, ಸ್ಲೀವ್ ಲೆಸ್ ಬ್ಲೌಸ್ ತೊಟ್ಟು ಬಹಳ ಅದ್ಭುತವಾಗಿ ಕಾಣಿಸುತ್ತಿದ್ದು, ಈಕೆಯ ಫೋಟೋ ನೋಡಿದ ಅಭಿಮಾನಿಗಳು ದೇವತೆ, ಸುಂದರಿ ಎಂದೆಲ್ಲ ಕಾಮೆಂಟ್ ಮಾಡುತ್ತಿದ್ದಾರೆ. 

ಮೇಘಾ ಶೆಟ್ಟಿ ಕಲರ್‌ಫುಲ್ ಸೀರೆಯನ್ನುಟ್ಟು, ಸರಳವಾಗಿ ಮೇಕಪ್ ಮಾಡಿಕೊಂಡು, ಜೊತೆಗೆ ಒಂದು ಕೈಗೆ ಮಾತ್ರ ಬಳೆ ತೊಟ್ಟಕೊಂಡಿದ್ದಾರೆ. ಹಾಗೆಯೇ ಹಣೆಗೆ ಬಿಂದಿಯನ್ನು ಇಡದೆ, ವಿಶೇಷವಾಗಿ  ಕಿವಿಗೆ ದೊಡ್ಡದಾದ ಓಲೆಯನ್ನೂ ಹಾಕಿದ್ದಾರೆ. ಇದನ್ನ ನೋಡಿದ ಅಭಿಮಾನಿಗಳು ಕಿವಿ ಹುಷಾರು ತಾಯಿ ಎಂದು ಕಾಮೆಂಟ್ ಮಾಡಿದ್ದಾರೆ. 

 ಹಾಗೆಯೇ ಮೇಘಾ ಶೆಟ್ಟಿಯನ್ನು ಸೀರೆಯಲ್ಲಿ ನೋಡಿದ ಫ್ಯಾನ್ಸ್‌ ಜಸ್ಟ್ ಲುಕಿಂಗ್ ಲೈಕ್ ಎ ವಾವ್ ಎಂದು ಕಾಮೆಂಟ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಸಖತ್ ವೈರಲ್ ಆಗಿದ್ದು ನೋಡುಗರಿಗೆ ಮತ್ತಷ್ಟು ಖುಷಿ ನೀಡುತ್ತಿದೆ.

ಮೇಘಾ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿದ್ದು ಸುಮಾರು 11 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ. ಮೇಘಾ ಶೆಟ್ಟಿ ಆಗಾಗ ರೀಲ್ಸ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡುವ ಮೂಲಕ ಅಭಿಮಾನಿಗಳಿಗೆ ಖುಷಿ ನೀಡಿದ್ದಾರೆ.

ಈಗಾಗಲೇ ಮೇಘಾ ಶೆಟ್ಟಿ ಅಭಿನಯದ ತ್ರಿಬಲ್ ರೈಡಿಂಗ್, ದಿಲ್ ಪಸಂದ್  ಹಾಗೂ ಕೈವ ಚಿತ್ರಗಳು ರಿಲೀಸ್ ಆಗಿದ್ದು ಗ್ರಾಮಾಯಣ, ಆಫ್ಟರ್‌ ಆಪರೇಷನ್‌ ಲಂಡನ್‌ ಕೆಫೆ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link