ಗೋರಂಟಿಯಲ್ಲಿ ಈ ಒಂದು ಪುಡಿ ಬೆರೆಸಿ ಹಚ್ಚಿ ಸಾಕು ಕೆಲವೇ ನಿಮಿಷಗಳಲ್ಲಿ ಬಿಳಿ ಕೂದಲು ಕಪ್ಪಾಗಿ ಫಳ ಫಳ ಹೊಳೆಯುತ್ತೆ!
ಬಿಳಿ ಕೂದಲನ್ನು ಕಪ್ಪಾಗಿಸಲು ಗೋರಂಟಿ ಸೊಪ್ಪು ತುಂಬಾ ಲಾಭದಾಯಕವಾಗಿದೆ.
ವಿಶಿಷ್ಟ ಸುವಾಸನೆ, ಪರಿಮಳಯುಕ್ತ ಗೋರಂಟಿ ಸೊಪ್ಪಿನಲ್ಲಿರುವ ಪೋಷಕಾಂಶಗಳು ಕೂದಲಿಗೆ ಗಾಢ ಬಣ್ಣವನ್ನು ನೀಡುವುದರ ಜೊತೆಗೆ ತುರಿಕೆ, ತಲೆಹೊಟ್ಟು, ಕೂದಲುದುರುವಿಕೆ ಸಮಸ್ಯೆಗಳನ್ನು ನಿವಾರಿಸುವಲ್ಲಿಯೂ ಪರಿಣಾಮಕಾರಿ ಗಿಡಮೂಲಿಕೆ ಆಗಿದೆ.
ಬಿಳಿ ಕೂದಲನ್ನು ಕಪ್ಪಾಗಿಸಲು ಗೋರಂಟಿ ಎಲೆಗಳು ಸಹಕಾರವೇ ಆದರೂ ಸಹ ಇದರಲ್ಲಿ ಒಂದು ವಿಶೇಷ ಪುಡಿ ಬೆರೆಸುವುದರಿಂದ ಇದರ ಶಕ್ತಿ ಇಮ್ಮಡಿಗೊಳ್ಳುತ್ತದೆ.
ಕೂದಲಿನ ಎಲ್ಲಾ ರೀತಿಯ ಸಮಸ್ಯೆಗಳಿಗೂ ನೆಲ್ಲಿಕಾಯಿ ರಾಮಬಾಣ. ನೆಲ್ಲಿಕಾಯಿ ಪುಡಿಯನ್ನು ಗೋರಂಟಿಯಲ್ಲಿ ಬೆರೆಸಿ ಹಚ್ಚಿದರೆ ಕೆಲವೇ ನಿಮಿಷಗಳಲ್ಲಿ ಬಿಳಿ ಕೂದಲು ಗಾಢ ಕಪ್ಪು ಬಣ್ಣಕ್ಕೆ ತಿರುಗುತ್ತದೆ.
ನೆಲ್ಲಿಕಾಯಿ ಬೀಜ ತೆಗೆದು ಚೆನ್ನಾಗಿ ಪುಡಿ ಮಾಡಿ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ, ನೀರು ಅರ್ಧ ಕಡಿಮೆಯಾದ ಬಳಿಕ ಇದರಲ್ಲಿ ನುಣ್ಣಗೆ ರುಬ್ಬಿದ ಗೋರಂಟಿಯನ್ನು ಹಾಕಿ ಬೆರೆಸಿ. ಇದು ತಣ್ಣಗಾದ ಬಳಿಕ ಕೂದಲಿಗೆ ಹಚ್ಚಿ. ಒಂದೂವರೆ ಗಂಟೆ ಬಳಿಕ ಹೇರ್ ವಾಶ್ ಮಾಡಿ. ಕೂಡಲೇ ಬಿಳಿ ಕೂದಲು ಗಾಢ ಕಪ್ಪಾಗುವುದನ್ನು ನೀವು ಕಾಣಬಹುದು.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.