ಈ 2 ಎಲೆಗಳನ್ನು ಅರೆದು ತಲೆಗೆ ಹಚ್ಚಿ ಒಂದು ಗಂಟೆ ಬಿಟ್ಟರೆ ಸಾಕು.. ಬಿಳಿ ಕೂದಲು ಸಂಪೂರ್ಣವಾಗಿ ಬುಡದಿಂದಲೇ ಕಪ್ಪಾಗುತ್ತದೆ!
ಬಿಳಿ ಕೂದಲನ್ನು ಕಪ್ಪಾಗಿಸಲು ರಾಸಾಯನಿಕಗಳಿರುವ ಹೇರ್ ಡೈ ಬದಲು ಈ ಎಲೆಗಳ ಪೇಸ್ಟ್ ಹಚ್ಚಬಹುದು. ಇದು ನೈಸರ್ಗಿಕವಾಗಿ ಬಿಳಿ ಕೂದನ್ನು ಕಪ್ಪಾಗಿಸುತ್ತದೆ.
ಮೆಹೆಂದಿ ಎಲೆ ಮತ್ತು ಇಂಡಿಗೋ ಎಲೆ ಇದೆರಡನ್ನು ರುಬ್ಬುವ ಮೂಲಕ ಪುಡಿಯನ್ನು ತಯಾರಿಸಿ ಗಾಜಿನ ಡಬ್ಬದಲ್ಲಿ ಮುಚ್ಚಿಡಬೇಕು.
ಈ ಎರಡು ಎಲೆಗಳ ಪುಡಿಗೆ ಕಾಫಿ ನೀರನ್ನು ಸೇರಿಸಿ, ಕೂದಲಿಗೆ ಹಚ್ಚಬೇಕು. ಬಿಳಿ ಕೂದಲಿಗೆ ಬೇರಿನಿಂದ ತುದಿವರೆಗೆ ಈ ಪೇಸ್ಟ್‌ನ್ನು ಹಚ್ಚಬೇಕು.
ಒಂದು ಗಂಟೆ ಬಿಟ್ಟು ಬಳಿಕ ತಲೆ ಸ್ನಾನ ಮಾಡಬೇಕು. ಇದರಿಂದ ಒಂದು ಗಂಟೆಯೊಳಗೆ ಬಿಳಿ ಕೂದಲನ್ನು ಕಪ್ಪಾಗಿಸಬಹುದು.
ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.