ತಂದೆಯ ಸರಳತೆಯ ಹಾದಿಯಲ್ಲಿ ಮಗ ದರ್ಶನ್ ಪುಟ್ಟಣ್ಣಯ್ಯ!
![ಮೇಲುಕೋಟೆ ಶಾಸಕ ಮೇಲುಕೋಟೆ ಶಾಸಕ](https://kannada.cdn.zeenews.com/kannada/sites/default/files/2023/05/22/307989-darshanputtannaiahtrain1.jpg?im=FitAndFill=(500,286))
2023ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿರುವ ದರ್ಶನ್ ಪುಟ್ಟಣ್ಣಯ್ಯ ತಂದೆಯಂತೆಯೇ ಸರಳತೆಯ ಹಾದಿಯಲ್ಲಿ ಸಾಗಿದ್ದಾರೆ.
![](https://kannada.cdn.zeenews.com/kannada/sites/default/files/2023/05/22/307988-darshanputtannaiahtrain2.jpg?im=FitAndFill=(500,286))
ಇಂದಿನಿಂದ ನೂತನ ಸರ್ಕಾರದ ಮೊದಲ ಅಧಿವೇಶನ ಆರಂಭವಾಗಲಿದ್ದು, ಹೊಸದಾಗಿ ಮೇಲುಕೋಟೆ ಶಾಸಕರಾಗಿ ಆಯ್ಕೆಯಾಗಿರುವ ದರ್ಶನ್ ಪುಟ್ಟಣ್ಣಯ್ಯ ಮೊದಲ ದಿನ ಅಧಿವೇಶನಕ್ಕೆ ರೈಲಿನಲ್ಲಿ ಪ್ರಯಾಣಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
![](https://kannada.cdn.zeenews.com/kannada/sites/default/files/2023/05/22/307987-darshanputtannaiahtrain3.jpg?im=FitAndFill=(500,286))
ಮೊದಲ ದಿನ ಅಧಿವೇಶನಕ್ಕೆ ಜನಸಾಮಾನ್ಯರಂತೆ ರೈಲಿನಲ್ಲಿ ಪ್ರಯಾಣಿಸಿದ ದರ್ಶನ್ ಪುಟ್ಟಣ್ಣಯ್ಯ, ಪಾಂಡವಪುರ ರೈಲ್ವೆ ನಿಲ್ದಾಣದಿಂದ ಬೆಂಗಳೂರಿಗೆ ಪ್ರಯಾಣಿಸಿದರು.
ಮಂಡ್ಯ ಜಿಲ್ಲೆಯ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ದರ್ಶನ್ ಪುಟ್ಟಣ್ಣಯ್ಯ ಇಂದು ಬೆಳಿಗ್ಗೆ ಚಾಮುಂಡಿ ಎಕ್ಸ್ಪ್ರೆಸ್ ರೈಲಿನಲ್ಲಿ ಸಾಮಾನ್ಯ ಬೋಗಿಯಲ್ಲಿ ಪ್ರಯಾಣಿಸಿದರು.
ಶಾಸಕನೆಂಬ ಹಮ್ಮು ಬಿಮ್ಮು ಬಿಟ್ಟು ಜನ ಸಾಮಾನ್ಯರ ಜೊತೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಸರಳತೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.