ಭಾರತದಲ್ಲಿ ಹೊಸ ಕಾರು ಬಿಡುಗಡೆ ಮಾಡಿದ Mercedes Benz , ಇಲ್ಲಿದೆ ಬೆಲೆ ಮತ್ತು ವೈಶಿಷ್ಟ್ಯಗಳ ಮಾಹಿತಿ

Mon, 23 Aug 2021-9:14 pm,

 AMG GLE 63 S 4MATIC+ Coupe ಮಾದರಿಯು 4-ಲೀಟರ್ ಎಂಜಿನ್ ಹೊಂದಿದೆ.  ಇದು 612 hp ಪವರ್  ನೀಡುತ್ತದೆ ಎಂದು ಕಂಪನಿ ಹೇಳಿದೆ. ಎಎಂಜಿ ಕಾರ್ಯಕ್ಷಮತೆಯ ಶ್ರೇಣಿಯಲ್ಲಿ ಇದು ಭಾರತದಲ್ಲಿ ಲಭ್ಯವಿರುವ 12 ನೇ ಮಾದರಿ ಎಂದು ಮರ್ಸಿಡಿಸ್ ಬೆಂಜ್ ಹೇಳಿದೆ. ಮರ್ಸಿಡಿಸ್ ಭಾರತೀಯ ಮಾರುಕಟ್ಟೆಯಲ್ಲಿ ಬಲವಾದ ಹಿಡಿತವನ್ನು ಸಾಧಿಸಿದೆ.  

ಮರ್ಸಿಡಿಸ್ ಬೆಂಜ್ ಪ್ರಕಾರ, ಈ ಮಾದರಿಯು 48-ವೋಲ್ಟ್ ಹೈಬ್ರಿಡ್ ಸಿಸ್ಟಮ್ ಅನ್ನು ಹೊಂದಿದೆ. ಇದು 22 HP ಯ ಹೆಚ್ಚುವರಿ ಔಟ್ಪುಟ್ ನೀಡುತ್ತದೆ. ಇದು ಕೇವಲ 3.8 ಸೆಕೆಂಡುಗಳಲ್ಲಿ ಕಾರನ್ನು0 ಯಿಂದ 100 ಕಿಮೀ ವೇಗವನ್ನು ನೀಡುತ್ತದೆ. ಕಾರಿನ ಗರಿಷ್ಠ ವೇಗ 280 ಕಿಮೀ/ಗಂ. 

ಮರ್ಸಿಡಿಸ್ ಬೆಂಜ್  ಕಾರು ಸುರಕ್ಷತಾ ವೈಶಿಷ್ಟ್ಯಗಳಾದ ಕ್ಯಾಬಿನ್ ಏರ್ ಬ್ಯಾಗ್, ಬ್ಲೈಂಡ್ ಸ್ಪಾಟ್ ಅಸಿಸ್ಟ್, 3-ಹಂತದ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ ಮತ್ತು ಡೈನಾಮಿಕ್ ಹ್ಯಾಂಡ್ಲಿಂಗ್ ಕಂಟ್ರೋಲ್ ಸಿಸ್ಟಂನೊಂದಿಗೆ ಬರುತ್ತದೆ. ಇದು ಮಾತ್ರವಲ್ಲ, ಈ ಮಾದರಿಯು ಕಂಪನಿಯ ಅತ್ಯುತ್ತಮ ಆಯ್ಕೆಯಾಗಿದೆ.

 ಮರ್ಸಿಡಿಸ್ ಬೆಂಜ್  ಇಂಡಿಯಾ, "AMG ಪೋರ್ಟ್ಫೋಲಿಯೊ ನಮ್ಮ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಸೆಗ್ಮೆಂಟ್ ಆಗಿ ಮುಂದುವರೆದಿದೆ ಮತ್ತು 'AMG GLE 63 S 4MATIC+ Coupe' ಅನ್ನು ಪ್ರಾರಂಭಿಸುವುದರಿಂದ ಐಷಾರಾಮಿ ಕಾರ್ಯಕ್ಷಮತೆ ಸೆಗ್ಮೆಂಟ್ ನಮ್ಮ ಪ್ರಬಲ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸುತ್ತದೆ."ಎಂದು ಮರ್ಸಿಡಿಸ್ ಬೆಂಜ್ ನ  MD ಮತ್ತು CEO ಮಾರ್ಟಿನ್ ಶ್ವೆಂಕ್, ಹೇಳಿದ್ದಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link