ಬುಧನ ಅಸ್ತ ಅವಧಿ ಈ 4 ರಾಶಿಗಳ ಜನರ ಪಾಲಿಗೆ ಭಾರಿ ಧನವೃದ್ಧಿಯ ಯೋಗ ತರಲಿದೆ!
ಮೇಷ ರಾಶಿ: ಬುಧದ ಕುಂಭ ರಾಶಿ ಗೋಚರ ಮೇಷ ರಾಶಿಯವರಿಗೆ ತುಂಬಾ ಉತ್ತಮ ಸಾಬೀತಾಗಲಿದೆ. ಈ ಅವಧಿಯು ನೌಕರ ವರ್ಗದ ಜನರಿಗೆ ಉತ್ತಮವಾಗಿರುತ್ತದೆ. ಕಠಿಣ ಪರಿಶ್ರಮ ಪ್ರತಿಫಲ ನೀಡಲಿದೆ. ಪ್ರೇಮ ಜೀವನ ಸ್ವಲ್ಪ ಒತ್ತಡದಿಂದ ಕೂಡಿರುತ್ತದೆ. ಬುಧ ಗ್ರಹಕ್ಕೆ ಸಂಬಂಧಿಸಿದ ಈ ಪರಿಹಾರವನ್ನು ನೀವು ಮಾಡಬಹುದು. ಶ್ರೀ ವಿಷ್ಣುವಿನ ಶ್ರೀ ವಾಮನ ರೂಪವನ್ನು ಆರಾಧಿಸುವುದು ಮತ್ತು ಪೂಜಿಸುವುದು ನಿಮಗೆ ಪ್ರಯೋಜನವನ್ನು ನೀಡಲಿದೆ.
ವೃಷಭ ರಾಶಿ: ಬುಧನ ಕುಂಭ ಗೋಚರ ವೃಷಭ ಜಾತಕದವರ ಪಾಲಿಗೆ ಸಾಕಷ್ಟು ಅನುಕೂಲಕರ ಸಾಬೀತಾಗಲಿದೆ. ಉದ್ಯೋಗದಲ್ಲಿ ಸ್ಥಿರತೆ ಬರಲಿದೆ. ಹಿರಿಯರ ಸಂಪೂರ್ಣ ಸಹಕಾರ ಸಿಗಲಿದೆ. ಸಮಾಜದಲ್ಲಿ ನಿಮ್ಮ ಖ್ಯಾತಿ ಉತ್ತಮವಾಗಿರುತ್ತದೆ. ಆದರೆ ಒಂದು ತಿಂಗಳ ಕಾಲ ಬುಧಗ್ರಹಕ್ಕೆ ಸಂಬಂಧಿಸಿದ ಪರಿಹಾರಗಳನ್ನು ಕೈಗೊಳ್ಳುವುದರಿಂದ ನೀವು ಹೆಚ್ಚಿನ ಫಲಿತಾಂಶಗಳನ್ನು ಪಡೆಯುವಿರಿ. ಸಾಧ್ಯವಾದರೆ ನಿತ್ಯವೂ ಹಸುವಿಗೆ ಮೇವು ತಿನ್ನಿಸಿ.
ಸಿಂಹ ರಾಶಿ: ಕುಂಭ ರಾಶಿಗೆ ಬುಧದ ಪ್ರವೇಶವು ಸಿಂಹ ರಾಶಿಯವರಿಗೆ ಅನುಕೂಲಕರವಾಗಿರುತ್ತದೆ. ಈ ಸಮಯವು ಉದ್ಯಮಿಗಳಿಗೆ ಅನುಕೂಲಕರವಾಗಿರುತ್ತದೆ. ಈ ಅವಧಿಯಲ್ಲಿ ನೀವು ಹೊಸ ವ್ಯವಹಾರವನ್ನು ಪ್ರಾರಂಭಿಸಲು ಬಯಸಿದರೆ ಅದು ಒಳ್ಳೆಯ ಫಲಗಳನ್ನು ನೀಡಲಿದೆ. ಕುಟುಂಬದಲ್ಲಿ ಕೆಲವು ಬಿರುಕುಗಳು ಉಂಟಾಗಬಹುದು. ಜೀವನದಲ್ಲಿ ಒತ್ತಡವೂ ಸ್ವಲ್ಪ ಹೆಚ್ಚಾಗಬಹುದು. ಮಾತಿನ ಮೇಲೆ ಹಿಡಿತವಿರಲಿ. ಬುಧವಾರದಂದು ನಿಯಮಿತವಾಗಿ ಶ್ರೀ ಗಣಪತಿ ಅಥರ್ವಶೀರ್ಷವನ್ನು ಪಠಿಸಲು ಅಥವಾ ಕೇಳಲು ಸಾಧ್ಯವಾದರೆ, ಖಂಡಿತವಾಗಿಯೂ ಕೇಳಿ.
ತುಲಾ ರಾಶಿ: ಬುಧನ ಕುಂಭ ಗೋಚರ ತುಲಾ ರಾಶಿಯವರಿಗೆ ಧನಾತ್ಮಕವಾಗಿರಬಹುದು. ದಕ್ಷತೆಯನ್ನು ಹೆಚ್ಚಿಸಬಹುದು. ಈ ಅವಧಿಯಲ್ಲಿ ಹಣವನ್ನು ಪಡೆಯುವ ಉತ್ತಮ ಅವಕಾಶಗಳಿವೆ. ನಿಮ್ಮ ಪ್ರತಿಭೆಯನ್ನು ಸಾಬೀತುಪಡಿಸಲು ನಿಮಗೆ ಅವಕಾಶ ಸಿಗಬಹುದು. ವಿದ್ಯಾರ್ಥಿಗಳಿಗೆ ಉತ್ತಮ ಸಮಯ ಬರಲಿದೆ. ಸಾಧ್ಯವಾದರೆ, ಬುಧವಾರದಂದು ಅಗತ್ಯವಿರುವವರಿಗೆ ಬಟ್ಟೆಗಳನ್ನು ದಾನ ಮಾಡಿ.(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)