ಶೀಘ್ರದಲ್ಲಿಯೇ ಬುದ್ಧಿದಾತ ಬುಧ ವಕ್ರ ನಡೆ ಆರಂಭ, ಧನದ ಅಧಿದೇವತೆ ಕೃಪೆಯಿಂದ ಈ ರಾಶಿಗಳ ಜನರ ಜೀವನದಲ್ಲಿ ಚಿನ್ನದಂತಹ ಕಾಲ ಆರಂಭ!
Horoscope 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಬುದ್ಧಿಯ ಕಾರಕ ಗ್ರಹ ಎಂದೇ ಪರಿಗಣಿಸಲಾಗುವ ಬುಧ ವೃಶ್ಚಿಕ ರಾಶಿಯಲ್ಲಿ ತನ್ನ ವಕ್ರ ನಡೆ ಅನುಸರಿಸಲಿದ್ದಾನೆ. ಇದರಿಂದ ಕೆಲ ರಾಶಿಗಳ ವೃತ್ತಿ ಮತ್ತು ವ್ಯಾಪಾರದಲ್ಲಿ ಉನ್ನತಿಯ ಎಲ್ಲಾ ಯೋಗಗಳು ರೂಪುಗೊಳ್ಳುತ್ತಿವೆ. (Spiritual News In Kannada)
ಕರ್ಕ ರಾಶಿ: ಬುಧ ನಿಮ್ಮ ಗೋಚರ ಜಾತಕದ ಪಂಚಮ ಭಾವದಲ್ಲಿ ವಕ್ರನಡೆ ಅನುಸರಿಸಲಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ಮಕ್ಕಳಿಗೆ ಸಂಬಂಧಿಸಿದಂತೆ ನಿಮಗೆ ಒಳ್ಳೆಯ ಸುದ್ದಿ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ಮಕ್ಕಳ ಅಭಿವೃದ್ಧಿ ಕಂಡು ನಿಮ್ಮ ಮನಸ್ಸು ಪ್ರಸನ್ನಗೊಳ್ಳಲಿದೆ. ಇದಲ್ಲದೆ ಬುಧನ ಕೃಪೆಯಿಂದ ನಿಮಗೆ ಒಳ್ಳೆಯ ಲಾಭ ಸಿಗಲಿದೆ. ನಿಮ್ಮ ಮೂಲಕ ಮಾಡಲಾದ ಪ್ರಯತ್ನಗಳಿಗೆ ತಕ್ಕ ಫಲ ಸಿಗಲಿದೆ. ಪ್ರೇಮ ಸಂಬಂಧಗಳಲ್ಲಿ ಇರುವವರ ಪ್ರೇಮ ವಿವಾಹಕ್ಕೆ ಪರಿವರ್ತನೆಯಾಗಲಿದೆ. ಇನ್ನೊಂದೆಡೆ ಈ ಅವಧಿಯಲ್ಲಿ ನಿಮ್ಮ ಘನತೆ ಗೌರವ ಹೆಚ್ಚಾಗಲಿದೆ. ಉನ್ನತ ಸ್ಥಾನ ಕೂಡ ಪ್ರಾಪ್ತಿಯಾಗಲಿದೆ. ಇದರ ಜೊತೆಗೆ ಈ ಅವಧಿಯಲ್ಲಿ ನಿಮಗೆ ಕಾಲಕಾಲಕ್ಕೆ ಆಕಸ್ಮಿಕ ಧನಲಾಭ ಕೂಡ ಪ್ರಾಪ್ತಿಯಾಗಲಿದೆ.
ಮೀನ ರಾಶಿ: ಬುಧ ನಿಮ್ಮ ಜಾತಕದ ನವಮ ಭಾವದಲ್ಲಿ ವಕ್ರ ನಡೆ ಅನುಸರಿಸಲಿದ್ದಾನೆ. ಹೀಗಾಗಿ ಹೊಸ ವರ್ಷದ ಆರಂಭ ನಿಮಗೆ ಭಾಗ್ಯೋದಯ ಭಾಗ್ಯ ಪ್ರಾಪ್ತಿಯಾಗಲಿದೆ. ಈ ಅವಧಿಯಲ್ಲಿ ನಿಮಗೆ ದೇಶ ವಿದೇಶ ಸುತ್ತುವ ಅವಕಾಶ ಸಿಗುವ ಸಾಧ್ಯತೆ ಇದೆ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರಿಗೆ ಯಶಸ್ಸು ಸಿಗಲಿದೆ. ಕಾರ್ಯಕ್ಷೇತ್ರದಲ್ಲಿ ಉನ್ನತಿಯ ಯೋಗ ರೂಪುಗೊಳ್ಳುತ್ತಿದೆ. ನಿರೀಕ್ಷೆಗಿಂತ ಹೆಚ್ಚು ಧನಲಾಭವಾಗಲಿದೆ. ಇದರಿಂದ ನಿಮ್ಮ ಮನಸ್ಸು ಪ್ರಸನ್ನವಾಗಿರಲಿದೆ. ಯಾವುದಾದರೊಂದು ಧಾರ್ಮಿಕ ಅಥವಾ ಮಂಗಳ ಕಾರ್ಯಗಳಲ್ಲಿ ನೀವು ಪಾಲ್ಗೊಳ್ಳುವ ಸಂಕೇತಗಳಿವೆ.
ಸಿಂಹ ರಾಶಿ: ಗ್ರಹಗಳ ರಾಜಕುಮಾರನ ಈ ವಕ್ರನಡೆ ನಿಮ್ಮ ಪಾಲಿಗೆ ಸಾಕಷ್ಟು ಲಾಭದಾಯಕ ಸಾಬೀತಾಗಲಿದೆ. ಏಕೆಂದರೆ ಸೂರ್ಯ ನಿಮ್ಮ ರಾಶಿಗೆ ಅಧಿಪತಿಯಾಗಿದ್ದು, ಬುಧ ಹಾಗೂ ಸೂರ್ಯನ ನಡುವೆ ಮಿತ್ರಭಾವ ಸಂಬಂಧವಿದೆ. ಇನ್ನೊಂದೆಡೆ ಬುಧ ನಿಮ್ಮ ಜಾತಕದ ಚತುರ್ಥ ಭಾವದಲ್ಲಿ ಗೋಚರಿಸುವ ಕಾರಣ ನಿಮಗೆ ವಾಹನ-ಆಸ್ತಿಪಾಸ್ತಿ ಸುಖ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ಇನ್ನೊಂದೆಡೆ ಪಿತ್ರಾರ್ಜಿತ ಆಸ್ತಿಯಿಂದ ನಿಮಗೆ ಲಾಭ ಉಂಟಾಗಲಿದೆ. ಹಲವು ಆಸೆ ಆಕಾಂಕ್ಷೆಗಳು ಈಡೇರಲಿವೆ. ಮನೆ ವಾಹನ ಖರೀದಿಸುವ ಯೋಗ ಕೂಡ ನಿರ್ಮಾಣಗೊಳ್ಳುತ್ತಿದೆ. ಬುಧನ ದೃಷ್ಟಿ ನಿಮ್ಮ ಜಾತಕದ ಕರ್ಮ ಭಾವದ ಮೇಲೆ ಇರುವುದರಿಂದ ವೃತ್ತಿ ವ್ಯಾಪಾರದಲ್ಲಿ ನಿಮಗೆ ಅಪಾರ ಲಾಭ ಸಿಗಲಿದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)