Mercury Retrogrades 2024: ಬುಧನ ಹಿಮ್ಮಖ ಚಲನೆಯಿಂದ ಈ 3 ರಾಶಿಯವರಿಗೆ ಖುಲಾಯಿಸಲಿದೆ ಅದೃಷ್ಟ!
ಜ್ಯೋತಿಷ್ಯಶಾಸ್ತ್ರದಲ್ಲಿ ಬುಧ ರಾಶಿಯ ಸಂಚಾರವು ಜನರ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಬುಧ ಗ್ರಹ ಯಾರ ಜಾತಕದಲ್ಲಿ ಬಲವಾದ ಸ್ಥಾನದಲ್ಲಿರುತ್ತದೋ ಅಂಥವರಿಗೆ ಉನ್ನತ ಜ್ಞಾನ ನೀಡುತ್ತದೆ. ಈ ಜನರು ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚಿನ ಲಾಭ ಪಡೆಯುತ್ತಾರೆ. ಉದ್ಯಮಿಗಳು ತಮ್ಮ ಜ್ಞಾನದಿಂದ ಹೆಚ್ಚಿನ ಧನಲಾಭ ಗಳಿಸುತ್ತಾರೆ. ಜಾತಕದಲ್ಲಿ ಬುಧ ಬಲವಿರುವ ಜನರು ವ್ಯಾಪಾರ ಚಟುವಟಿಕೆಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ.
ಬುಧವು ಕೆಲವೊಮ್ಮೆ ಹಿಮ್ಮುಖವಾಗಿ ಸಾಗುತ್ತದೆ. ಜುಲೈ 19ರಿಂದ ಬುಧ ಗ್ರಹವು ಸಿಂಹ ರಾಶಿಯಲ್ಲಿ ಸಂಚಾರ ಮಾಡುತ್ತಿದೆ. ಆಗಸ್ಟ್ 5ರ ಬೆಳಗ್ಗೆ 9.44ಕ್ಕೆ ಬುಧ ಗ್ರಹವು ಸಿಂಹರಾಶಿಯಲ್ಲಿ ಹಿಮ್ಮುಖವಾಗಿ ಸಂಚಾರ ಮಾಡುತ್ತದೆ. ಬುಧವು ಸಿಂಹದಲ್ಲಿ ಹಿಮ್ಮೆಟ್ಟುವುದರಿಂದ ಕೆಲವು ರಾಶಿಗಳಿಗೆ ಈ ಸಮಯವು ಅದ್ಭುತವಾಗಿರುತ್ತದೆ. ಆಗಸ್ಟ್ 2024ರ ಆರಂಭದಲ್ಲಿ ಬುಧ ಹಿಮ್ಮೆಟ್ಟುವಿಕೆಯಿಂದ ಲಾಭ ಪಡೆಯಲಿರುವ ರಾಶಿಗಳು ಯಾವುವು ಎಂದು ತಿಳಿಯಿರಿ.
ಮಿಥುನ ರಾಶಿಯವರಿಗೆ ಬುಧ ಹಿಮ್ಮೆಟ್ಟುವಿಕೆಯು ತುಂಬಾ ಅನುಕೂಲಕರವಾಗಿರುತ್ತದೆ. ಮಿಥುನ ರಾಶಿಯ ೩ನೇ ಮನೆಯಲ್ಲಿ ಬುಧ ಹಿಮ್ಮೆಟ್ಟುತ್ತದೆ. ಹೀಗಾಗಿ ಎಲ್ಲಾ ಕ್ಷೇತ್ರಗಳಲ್ಲಿ ನಿಮಗೆ ಅತ್ಯುತ್ತಮ ಫಲಿತಾಂಶಗಳು ಸಿಗುತ್ತವೆ. ನಿಮ್ಮ ಕೆಲಸಗಳು ಯಶಸ್ವಿಯಾಗುತ್ತವೆ. ಮಿಥುನ ರಾಶಿಯವರು ಕಠಿಣ ಪರಿಶ್ರಮದ ಫಲಿತಾಂಶ ಪಡೆಯುತ್ತಾರೆ. ಕೆಲಸಕ್ಕೆ ಸಂಬಂಧಿಸಿದಂತೆ ನೀವು ಪ್ರವಾಸ ಕೈಗೊಳ್ಳಬಹುದು. ವ್ಯಾಪಾರದಲ್ಲಿರುವವರು ಧನಲಾಭ ಗಳಿಸಲಿದ್ದಾರೆ. ಈ ಅವಧಿಯಲ್ಲಿ ಸ್ಥಗಿತಗೊಂಡ ಕೆಲಸಗಳು ಪೂರ್ಣಗೊಳ್ಳಲಿವೆ. ಆದಾಯದ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ. ಎಲ್ಲಾ ರೀತಿಯ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ.
ತುಲಾ ರಾಶಿಯರಿಗೆ ಬುಧನ ಹಿಮ್ಮುಖ ಚಲನೆಯು ಪ್ರಯೋಜನಕಾರಿಯಾಗಿದೆ. ಇದರಿಂದ ತುಲಾ ರಾಶಿಯವರು ಜೀವನದ ಹೆಚ್ಚಿನ ಕ್ಷೇತ್ರಗಳಲ್ಲಿ ಯಶಸ್ಸನ್ನು ಸಾಧಿಸುತ್ತಾರೆ. ವ್ಯಾಪಾರ-ವ್ಯವಹಾರದಲ್ಲಿ ಧನಲಾಭ, ಮನೆಯಲ್ಲಿ ಸುಖ-ಶಾಂತಿ, ಸಂಪತ್ತು ಹೆಚ್ಚುತ್ತದೆ. ಈ ರಾಶಿಯವರು ಜೀವನದಲ್ಲಿ ವಿವಿಧ ಗುರಿಗಳನ್ನು ಸಾಧಿಸಲು ಅವಕಾಶಗಳನ್ನು ಪಡೆಯುತ್ತಾರೆ. ನಿಮ್ಮ ಆರ್ಥಿಕ ಪರಿಸ್ಥಿತಿಯು ಸುಧಾರಿಸುತ್ತದೆ. ನಿಮ್ಮ ಆರ್ಥಿಕ ಜೀವನವು ಬಲವಾಗಿರುತ್ತದೆ. ಈ ಸಮಯದಲ್ಲಿ ನೀವು ಹೂಡಿಕೆ ಮಾಡಬಹುದು. ತುಲಾ ರಾಶಿಯವರ ಪ್ರೇಮ ಜೀವನವು ಅದ್ಭುತವಾಗಿರುತ್ತದೆ.
ಧನು ರಾಶಿಯ 9ನೇ ಮನೆಯಲ್ಲಿ ಬುಧನು ಹಿಮ್ಮೆಟ್ಟುವುದರಿಂದ ಧನು ರಾಶಿಯವರಿಗೆ ಬುಧನು ಶುಭ ಲಾಭ ನೀಡುತ್ತಾನೆ. ವೃತ್ತಿಜೀವನಕ್ಕೆ ಸಂಬಂಧಿಸಿದಂತೆ ನೀವು ವಿದೇಶಕ್ಕೆ ಹೋಗಲು ಅವಕಾಶ ಪಡೆಯಬಹುದು. ಈ ಅವಧಿಯಲ್ಲಿ ಹೆಚ್ಚಿನ ಹಣ ಗಳಿಸಬಹುದು. ನೀವು ಹಣ ಉಳಿಸಲು ಸಾಧ್ಯವಾಗುತ್ತದೆ. ವಿವಿಧ ಕಾರ್ಯಗಳನ್ನು ಪೂರ್ಣಗೊಳಿಸಲು ಅದೃಷ್ಟದ ಬೆಂಬಲ ಪಡೆಯುವಿರಿ. ಸ್ವಯಂ ಉದ್ಯೋಗಿಗಳು ನಿರ್ದಿಷ್ಟ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಹೂಡಿಕೆ ಮಾಡಬಹುದು. ಈ ಕಾರಣದಿಂದ ಧನಲಾಭ ಗಳಿಸುವಲ್ಲಿ ಯಶಸ್ವಿಯಾಗುವಿರಿ. ಸಂಗಾತಿಯೊಂದಿಗೆ ನೀವು ಸಂತೋಷದ ಸಮಯ ಕಳೆಯಬಹುದು.