Budh Vakri 2023: 10 ದಿನಗಳ ಬಳಿಕ ಈ ರಾಶಿಯ ಜನರು ಭಾರಿ ಶ್ರೀಮಂತರಾಗಲಿದ್ದಾರೆ, ವಕ್ರಿ ಬುಧನ ಕಾರಣ ತಿಜೋರಿ ಹಣದಿಂದ ತುಂಬಿ ತುಳುಕಲಿದೆ!

Tue, 11 Apr 2023-6:05 pm,

ಮೇಷ ರಾಶಿ: ಬುಧನ ವಕ್ರ ನಡೆ ಮೇಷ ರಾಶಿಯವರಿಗೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಸುಲಭವಾಗಿಸಲಿದೆ. ವೃತ್ತಿ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳು ದೊರೆಯಲಿವೆ. ಹೊಸ ಕೆಲಸ ಸಿಗಬಹುದು, ಬಡ್ತಿ-ಇನ್ಕ್ರಿಮೆಂಟ್ ಸಿಗುವ ಎಲ್ಲಾ ಸಾಧ್ಯತೆಗಳು ನಿಚ್ಚಳವಾಗುತ್ತಿವೆ. ಹಣಕಾಸಿನ ಭಾಗ ಅತ್ಯಂತ ಉತ್ತಮವಾಗಿರಲಿದೆ. ಹೊಸ ಹೊಸ ಮೂಲಗಳಿಂದ ಆದಾಯ ಹರಿದುಬರಲಿದೆ.   

ಮಿಥುನ ರಾಶಿ: ಬುದ್ಧನ ಹಿಮ್ಮುಖ ನಡೆ ಮಿಥುನ ರಾಶಿಯವರಿಗೆ ಸಮಸ್ಯೆಗಳು ಮತ್ತು ಅಡೆತಡೆಗಳಿಂದ ಪರಿಹಾರವನ್ನು ನೀಡಲಿದೆ. ಹೊಸ ಅವಕಾಶಗಳು ಸಿಗಲಿವೆ. ಕಚೇರಿಯಲ್ಲಿ ನಿಮ್ಮ ಇಮೇಜ್  ಉತ್ತಮವಾಗಿರುತ್ತದೆ. ನೀವು ಜನರ ಭಾರಿ ಪ್ರಶಂಸೆಗೆ ಪಾತ್ರರಾಗುವಿರಿ. ಉದ್ಯಮಿಗಳಿಗೆ ಅಪಾರ ಲಾಭವಾಗಲಿದ್ದು, ಆರ್ಥಿಕ ಸ್ಥಿತಿ ಪ್ರಯೋಜನಕಾರಿಯಾಗಲಿದೆ. ಹಲವು ಮೂಲಗಳಿಂದ ಹಣ ಹರಿದುಬರಲಿದೆ. .  

ಸಿಂಹ ರಾಶಿ: ಬುಧನ ಹಿಮ್ಮುಖ ನಡೆ ಸಿಂಹ ರಾಶಿಯವರಿಗೆ ಉತ್ತಮ ಯಶಸ್ಸನ್ನು ನೀಡಲಿದೆ. ನೀವು ದೀರ್ಘ ಕಾಲದಿಂದ ನಿರೀಕ್ಷಿಸುತ್ತಿರುವ ಸಾಧನೆಯನ್ನು ನೀವು ಮಾಡಬಹುದು. ವಿದೇಶಕ್ಕೆ ಹೋಗುವ ನಿಮ್ಮ ಕನಸು ನನಸಾಗಬಹುದು. ವ್ಯಾಪಾರ ವೃದ್ಧಿಯಾಗಲಿದೆ. ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದೆ. ಆರೋಗ್ಯ ಉತ್ತಮವಾಗಿರಲಿದೆ.  

ಕುಂಭ ರಾಶಿ: ಬುಧನ ವಕ್ರ ನಡೆ ಕುಂಭ ರಾಶಿಯವರಿಗೆ ಜೀವನದಲ್ಲಿ ಪ್ರಗತಿಗೆ ಹೊಸ ಮಾರ್ಗಗಳನ್ನು ತೆರೆಯಲಿದೆ. ಉದ್ಯೋಗ-ವ್ಯವಹಾರದಲ್ಲಿ ಪ್ರಗತಿ ಕಂಡುಬರಲಿದೆ. ಯಾವುದೇ ವಿಶೇಷ ಕೆಲಸದಲ್ಲಿ ನೀವು ಯಶಸ್ಸನ್ನು ಪಡೆಯಬಹುದು. ಬಾಸ್ ನಿಮ್ಮನ್ನು ಹೊಗಳಬಹುದು. ಕುಟುಂಬದಲ್ಲಿ ಸಮೃದ್ಧಿ ಇರಲಿದೆ. ಸಂಗಾತಿಯೊಂದಿಗಿನ ನಿಮ್ಮ ಬಾಂಧವ್ಯ ಉತ್ತಮವಾಗಿರಲಿದೆ.

ಮೀನ ರಾಶಿ: ವಕ್ರಿ ಬುಧ  ಮೀನ ರಾಶಿಯವರಿಗೆ ವೃತ್ತಿಯಲ್ಲಿ ವಿಶೇಷ ಯಶಸ್ಸನ್ನು ದಯಪಾಲಿಸಲಿದ್ದಾನೆ. ನಿಮ್ಮ ಶ್ರಮದ ಸಂಪೂರ್ಣ ಫಲ ನಿಮಗೆ ಪ್ರಾಪ್ತಿಯಾಗಲಿದೆ ಮತ್ತು ನೀವು ಅಪಾರ ಸಂತೋಷವನ್ನು ಅನುಭವಿಸುವಿರಿ. ಬಡ್ತಿ-ಇಂಕ್ರಿಮೆಂಟ್ ಸಿಗಲಿದೆ. ಹಿರಿಯರ ಸಂಪರ್ಕದಿಂದ ಲಾಭವನ್ನು ಪಡೆಯುವಿರಿ. ವ್ಯಾಪಾರಸ್ಥರಿಗೆ ವಿದೇಶದಿಂದ ಲಾಭವಾಗಲಿದೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link