Mercury Retrograde: ಏಪ್ರಿಲ್ ಮೊದಲ ವಾರದಲ್ಲಿ ಬುಧನ ಹಿಮ್ಮುಖ ಚಲನೆ, 7 ರಾಶಿಯವರಿಗೆ ಆರ್ಥಿಕ ಬಿಕ್ಕಟ್ಟು

Thu, 21 Mar 2024-6:41 am,

ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ, ತರ್ಕ, ಬುದ್ಧಿ, ಹಣಕಾಸಿನ ಅಂಶ ಎಂದು ಪರಿಗಣಿಸಲಾಗಿರುವ ಬುಧ ಗ್ರಹವು ಶೀಘ್ರದಲ್ಲೇ ತನ್ನ ವಕ್ರ ನಡೆಯನ್ನು ಆರಂಭಿಸಲಿದೆ. 02 ಏಪ್ರಿಲ್ 2024 ರಂದು, ಮೇಷ ರಾಶಿಯಲ್ಲಿ ಬುಧನ ಹಿಮ್ಮುಖ ಚಲನೆ ಆರಂಭವಾಗಲಿದೆ. ಇದರ ಶುಭ-ಅಶುಭ ಪರಿಣಾಮಗಳು ದ್ವಾದಶ ರಾಶಿಗಳ ಮೇಲೆ ಕಂಡು ಬರುತ್ತದೆ. ಆದರೂ, ಈ ಸಮಯದಲ್ಲಿ ಏಳು ರಾಶಿಯ ಜನರಿಗೆ ಹಣಕಾಸಿನ ಬಿಕ್ಕಟ್ಟು ಹೆಚ್ಚಾಗಲಿದೆ ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ... 

ಸ್ವ ರಾಶಿಯಲ್ಲಿ ಬುಧನ ಹಿಮ್ಮುಖ ಚಲನೆ ಮೇಷ ರಾಶಿ ಜನರಿಗೆ ಅಷ್ಟು ಉತ್ತಮವಾಗಿಲ್ಲ. ಆದಾಯಕ್ಕಿಂತ ಖರ್ಚು ಹೆಚ್ಚಾಗುವುದರಿಂದ ಆರ್ಥಿಕವಾಗಿ ಇದು ಸವಾಲಿನ ಸಮಯ. ಈ ಸಮಯದಲ್ಲಿ ಹೂಡಿಕೆಯ ಬಗ್ಗೆ ಎಚ್ಚರಿಕೆಯಿಂದಿರಿ. 

ವೃಷಭ ರಾಶಿಯವರಿಗೆ ಈ ಸಮಯದಲ್ಲಿ ನಿಮ್ಮ ಕಠಿಣ ಪರಿಶ್ರಮದ ಹೊರತಾಗಿಯೂ ನಿರೀಕ್ಷಿತ ಆದಾಯ ಲಭಿಸದೆ ನಿಮ್ಮ ಮನಸ್ಥಿತಿ ಹಾಳಾಗಬಹುದು. ಇದಲ್ಲದೆ, ಮೇಷ ರಾಶಿಯಲ್ಲಿ ಬುಧನ ವಕ್ರ ನಡೆಯು ಉತ್ತಮ ಆದಾಯ ಗಳಿಸಲು ತೊಡಕುಂಟು ಮಾಡಬಹುದು. ಹಾಗಾಗಿ, ಈ ಅವಧಿಯಲ್ಲಿ ಹಣಕಾಸಿನ ವಿಷಯದಲ್ಲಿ ಎಚ್ಚರಿಕೆಯಿಂದಿರಿ. 

ಮೇಷ ರಾಶಿಯಲ್ಲಿ ಹಿಮ್ಮುಖ ಚಲನೆಯನ್ನು ಆರಂಭಿಸಲಿರುವ ಬುಧನು ಕರ್ಕಾಟಕ ರಾಶಿಯವರ ವೆಚ್ಚಗಳನ್ನು ಹೆಚ್ಚಾಗಿಸಲಿದ್ದು ಇವರ ಆರ್ಥಿಕ ಸ್ಥಿತಿ ಹದಗೆಡಲಿದೆ. ಗಮನಾರ್ಹವಾಗಿ ಆದಾಯವು ಮೊದಲಿಗಿಂತ ಕಡಿಮೆಯಾಗಲಿದ್ದು, ದೂರ ಪ್ರಯಾಣದಿಂದ ಹಣಕಾಸಿನ ನಷ್ಟ ಸಾಧ್ಯತೆ ಇದೆ. 

ಬುಧನ ಹಿಮ್ಮುಖ ಚಲನೆಯು ಕನ್ಯಾ ರಾಶಿಯವರಿಗೆ ಆರ್ಥಿಕ ಹೊರೆಯನ್ನು ಹೆಚ್ಚಿಸಬಹುದು. ಇದು ನಿಮ್ಮ ಕುಟುಂಬದ ಅಗತ್ಯತೆಗಳನ್ನು ಪೂರೈಸಲು ಕೂಡ ಸವಾಲುಗಳನ್ನು ತಂದೊಡ್ಡಬಹುದು. ಹಠಾತ್ ವೆಚ್ಚಗಳಿಂದ ಆರ್ಥಿಕ ಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆ ಇದೆ. 

ಮೇಷ ರಾಶಿಯಲ್ಲಿ ಬುಧನ ಸಂಚಾರದ ಅವಧಿಯಲ್ಲಿ ವೃಶ್ಚಿಕ ರಾಶಿಯ ಜನರು ಹಣಕಾಸು ನಷ್ಟದ ಬಗ್ಗೆ ವಿಶೇಷವಾಗಿ ಜಾಗರೂಕರಾಗಿರಬೇಕು. ಹಣಕಾಸಿನ ಹೆಚ್ಚಿನ ಜವಾಬ್ದಾರಿ, ಜೊತೆಗೆ ಖರ್ಚುಗಳ ನಿರ್ವಹಣೆ ಕಷ್ಟವಾಗುವ ಕಾರಣ ನಿಮ್ಮ ಒತ್ತಡ ಹೆಚ್ಚಾಗಬಹುದು. ವ್ಯಾಪಾರಸ್ಥರಿಗೆ ನೀವು ನಿರೀಕ್ಷಿಸಿದಷ್ಟು ಲಾಭವಾಗದೇ ಇರಬಹುದು. 

ಬುಧನ ವಕ್ರ ನಡೆಯ ಸಮಯದಲ್ಲಿ ಧನು ರಾಶಿಯವರಿಗೆ ನಿಮ್ಮ ಖರ್ಚುಗಳು ಗಣನೀಯ ಏರಿಕೆಯನ್ನ್ ಕಾಣಬಹುದು. ಹಣದ ಕೊರತೆಯಿಂದಾಗಿ ಖರ್ಚುಗಳ ನಿರ್ವಹಣೆ ಸವಾಲು ಎಂದೆನಿಸಬಹುದು. ಇದು ನಿಮ್ಮಲ್ಲಿ ನಿರಾಶೆಯನ್ನು ಕೂಡ ಉಂಟು ಮಾಡಬಹುದು. 

ಬುಧನ ಹಿಮ್ಮುಖ ಚಲನೆಯು ಮಕರ ರಾಶಿಯವರಿಗೆ ವ್ಯಾಪಾರದಲ್ಲಿ ನೀವು ನಿರೀಕ್ಷಿಸಿದಷ್ಟು ಲಾಭ ಗಳಿಸಲು ಅಡ್ಡಿಯುಂಟು ಮಾಡಬಹುದು. ಹಾಗಾಗಿ, ಹೊಸ ಡೀಲ್‌ಗಳಲ್ಲಿ ತೊಡಗಿಸಿಕೊಳ್ಳಲು ವ್ಯಾಪಾರಸ್ಥರಿಗೆ  ಕಠಿಣ ಸಮಯ ಇದಾಗಿದೆ. ಹಣದ ಹರಿವು ಹೆಚ್ಚಾಗಲಿದೆಯಾದರೂ, ಉಳಿತಾಯ ಸವಾಲಾಗಿರುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link