Mercury Retrograde - ಜನವರಿ 14 ರಿಂದ ಬುಧನ ವಕ್ರ ನಡೆ ಆರಂಭ, ಈ ರಾಶಿಗಳ ಜನರ ಆರ್ಥಿಕ ಸ್ಥಿತಿ, ವೃತ್ತಿ ಜೀವನದ ಮೇಲೆ ನೇರ ಪ್ರಭಾವ
1. ಮೇಷ - ಬುಧನ ಈ ವಕ್ರಿ ನಡೆ ಮೇಷ ಜಾತಕದವರ ಮೇಲೆ ಕೆಲಸ ಮತ್ತು ಒತ್ತಡದಲ್ಲಿ ಹೆಚ್ಚಳ ಮಾಡಲಿದೆ. ಈ ಕಾರಣದಿಂದ ಬಾಸ್ ಅಥವಾ ಸಹೋದ್ಯೋಗಿಗಳ ಜೊತೆಗೆ ವಾಗ್ವಾದ ನಡೆಯುವ ಸಾಧ್ಯತೆ ಇದೆ. ದಾಂಪತ್ಯ ಜೀವನದಲ್ಲಿಯೂ ಕೂಡ ಇರುಸು-ಮುರುಸು ಇರಲಿದೆ.
2. ವೃಷಭ - ವೃಷಭ ರಾಶಿಯ ಜನರಿಗೆ ಈ ಅವಧಿಯಲ್ಲಿ ಭಾಗ್ಯದ ಸಾಥ್ ಸಿಗುವುದಿಲ್ಲ. ಹೀಗಾಗಿ ನಡೆಯುತ್ತಿರುವುದನ್ನು ಹಾಗೆಯೇ ನಡೆಯಲು ಬಿಡಿ. ಹೊಸದಾಗಿ ಏನನ್ನು ಪ್ರಯತ್ನಿಸಲು ಹೋಗಬೇಡಿ. ತಂದೆಯ ಜೊತೆಗೆ ಯೋಚಿಸಿ ಮಾತುಕತೆ ನಡೆಸಿ. ಧೈರ್ಯದಿಂದ ಮುಂದುವರೆಯಿರಿ. ಸಮಯ ಖಂಡಿತ ಬದಲಾಗಲಿದೆ.
3. ಕನ್ಯಾ - ಬುಧನ ವಕ್ರ ನಡೆ ಕನ್ಯಾ ರಾಶಿಯ ಜಾತಕದವರ ಕುಟುಂಬ ಜೀವನದಲ್ಲಿ ಸಮಸ್ಯೆಗಳನ್ನು ತರಲಿದೆ. ಕುಟುಂಬದಲ್ಲಿ ಯಾರ ಜೊತೆಗೂ ಕೂಡ ವಾಗ್ವಾದ ನಡೆಸಬೇಡಿ. ಅದರಲ್ಲೂ ವಿಶೇಷವಾಗಿ ಸಂಗಾತಿಯ ಜೊತೆಗೆ ವಾದ-ವಿವಾದಕ್ಕೆ ಇಳಿಯಬೇಡಿ. ಹೂಡಿಕೆಯಿಂದ ದೂರ ಉಳಿಯಿರಿ.
4. ವೃಶ್ಚಿಕ - ಸಮಯಕ್ಕೆ ತಕ್ಕಂತೆ ಮುಂದಕ್ಕೆ ಸಾಗಿ. ಬಲವಂತವಾಗಿ ಅತ್ತಿತ್ತ ಕಾಲು ಬಡಿಯಲು ಪ್ರಯತ್ನಿಸಬೇಡಿ. ಅದರಿಂದ ಯಾವುದೇ ಲಾಭ ಸಿಗುವುದಿಲ್ಲ. ಈ ಅವಧಿಯಲ್ಲಿ ಆದಷ್ಟು ಪ್ರವಾಸ ತಪ್ಪಿಸಿ. ಹೂಡಿಕೆ ಬೇಡ, ಕುಟುಂಬದಲ್ಲಿ ಯಾರಿಗಾದರು ಅನಾರೋಗ್ಯ ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ನಿರ್ಲಕ್ಷ ಧೋರಣೆ ತಳೆಯಬೇಡಿ.
5. ವಕ್ರ ನಡೆಯಲ್ಲಿರುವ ಬುಧ ಬುದ್ಧಿ ತಿರುಗಿಸುತ್ತಾನೆ - ಬುಧನ ವಕ್ರ ನಡೆಯ ಪ್ರಭಾವಕ್ಕೆ ಒಳಗಾದ ವ್ಯಕ್ತಿಯ ಬುದ್ಧಿಯನ್ನು ಬುಧ ತಿರುಗಿಸುತ್ತಾನೆ. ಬೌದ್ಧಿಕವಾಗಿ ಇಕ್ಕಟ್ಟಿಗೆ ಸಿಲುಕಿದ ಅನುಭವ ಅವರಿಗಾಗುತ್ತದೆ. ಅವರ ನಿರ್ಣಯ ಕ್ಷಮತೆ ಹಾಗೂ ವ್ಯವಹಾರದಲ್ಲಿ ಸಾಕಷ್ಟು ಬದಲಾವಣೆ ಕಂಡುಬರುತ್ತದೆ. ಈ ಅವಧಿಯಲ್ಲಿ ಅವರು ಕೈಗೊಳ್ಳುವ ನಿರ್ಧಾರಗಳು ಅವರನ್ನು ಒಳಗೊಂಡಂತೆ ಇತರರನ್ನು ಸಹ ಇಕ್ಕಟ್ಟಿಗೆ ಸಿಲುಕಿಸುತ್ತವೆ.