ಬುಧನ ಶ್ರೀರಕ್ಷೆಯಿಂದ ಈ ರಾಶಿಯವರ ಹಣೆಬರಹವೇ ಚೇಂಜ್: ಅದೃಷ್ಟ-ಧನಸಂಪತ್ತು ಜೀವನದಲ್ಲಿ ಮೇಳೈಸುವುದು!
ವೈದಿಕ ಜ್ಯೋತಿಷ್ಯದ ಪ್ರಕಾರ ಬುಧದೇವನು ಜುಲೈ 7 ರಂದು ಕರ್ಕಾಟಕದಲ್ಲಿ ಉದಯಿಸುತ್ತಾನೆ. ಈ ಸಂದರ್ಭದಲ್ಲಿ ಕೆಲವು ಜನರ ಅದೃಷ್ಟವನ್ನು ಬೆಳಗಿಸುತ್ತಾನೆ. ಜೊತೆಗೆ ವೃತ್ತಿ-ವ್ಯವಹಾರದಲ್ಲಿ ಪ್ರಗತಿಯ ಸಾಧ್ಯತೆಗಳಿವೆ. ಈ ಅದೃಷ್ಟದ ರಾಶಿಗಳ ಬಗ್ಗೆ ತಿಳಿಯೋಣ.
ಮಿಥುನ ರಾಶಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕರ್ಕಾಟಕದಲ್ಲಿ ಬುಧ ಉದಯವಾಗುವುದರಿಂದ ಮಿಥುನ ರಾಶಿಯವರಿಗೆ ಶುಭ ಫಲಗಳು ಸಿಗಲಿವೆ. ಬುಧ ಗ್ರಹವು ಈ ರಾಶಿಯ ಎರಡನೇ ಮನೆಯಲ್ಲಿ ಉದಯಿಸುತ್ತಿದೆ. ಆಕಸ್ಮಿಕ ಹಣ ಲಾಭದಾಯಕವಾಗಿರುತ್ತದೆ. ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ.
ಕನ್ಯಾ ರಾಶಿ: ಕರ್ಕಾಟಕದಲ್ಲಿ ಬುಧದ ಉದಯದಿಂದಾಗಿ ಕನ್ಯಾ ರಾಶಿಯವರಿಗೆ ವಿಶೇಷ ಲಾಭಗಳು ಸಿಗುತ್ತವೆ. ಆದಾಯದಲ್ಲಿ ಭಾರಿ ಹೆಚ್ಚಳವಾಗಬಹುದು. ಹಳೆಯ ಹೂಡಿಕೆಯಿಂದ ಲಾಭವಿರುತ್ತದೆ. ಈ ಸಮಯದಲ್ಲಿ ಮಕ್ಕಳ ಕಡೆಯಿಂದಲೂ ಒಳ್ಳೆಯ ಸುದ್ದಿಗಳು ಕೇಳಿಬರುತ್ತವೆ. ಸಂತೋಷ ಮತ್ತು ಸಮೃದ್ಧಿಯ ಹೆಚ್ಚಳವೂ ಇರುತ್ತದೆ.
ಮಕರ ರಾಶಿ: ಈ ರಾಶಿಯವರಿಗೆ ಮಂಗಳಕರ ಮತ್ತು ಫಲಪ್ರದವಾಗಿದೆ. ವೈವಾಹಿಕ ಜೀವನವು ಮಧುರವಾಗಿರುತ್ತದೆ. ನಿಮ್ಮ ಮಹತ್ವಾಕಾಂಕ್ಷೆಗಳು ಈಡೇರುತ್ತವೆ. ಪರಸ್ಪರ ಸಂಬಂಧಗಳು ಉತ್ತಮಗೊಳ್ಳುತ್ತವೆ ಮತ್ತು ಸಮಾಜದಲ್ಲಿ ಪ್ರಭಾವವು ಹೆಚ್ಚಾಗುತ್ತದೆ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)