Budh Uday 2024: ಮೀನ ರಾಶಿಯಲ್ಲಿ ಬುಧ ಉದಯ, ಈ 5 ರಾಶಿಯವರ ಜೀವನದಲ್ಲಿ ಭಾರೀ ಸಂಕಷ್ಟ

Thu, 18 Apr 2024-6:43 am,

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಏಪ್ರಿಲ್ 19 ರಂದು ಬೆಳಿಗ್ಗೆ 10:23 ಕ್ಕೆ  ಮೀನ ರಾಶಿಯಲ್ಲಿ ಬುಧ ಉದಯಿಸಲಿದ್ದಾನೆ. ಇದರ ಪರಿಣಾಮ ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ. 

ಗ್ರಹಗಳ ರಾಜಕುಮಾರ ಬುಧನ ಉದಯವು ಕೆಲವು ರಾಶಿಯವರ ಜೀವನದಲ್ಲಿ ಶುಭ ಫಲಗಳನ್ನು ತರಲಿದೆ. ಆದರೂ, ಈ ವೇಳೆ 5 ರಾಶಿಯ ಜನರು ತುಂಬಾ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಲಾಗುತ್ತಿದೆ. ಆ ರಾಶಿಗಳೆಂದರೆ... 

ಬುಧ ಉದಯದಿಂದ ಮೇಷ ರಾಶಿಯ ಜನರ ಸಮಸ್ಯೆಗಳು ಹೆಚ್ಚಾಗಲಿವೆ. ಈ ಸಮಯದಲ್ಲಿ ಹೂಡಿಕೆಯಿಂದ ಕೈ ಸುಟ್ಟುಕೊಳ್ಳುವ ಸಾಧ್ಯತೆ ಇದೆ. ವ್ಯವಹಾರದಲ್ಲಿಯೂ ನಷ್ಟ ಉಂಟಾಗಬಹುದು. 

ಬುಧ ಉದಯ ಪರಿಣಾಮವಾಗಿ ಖರ್ಚುಗಳು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಮಿಥುನ ರಾಶಿ8ಯ ಜನರು ನಿಮ್ಮ ಹಣಕಾಸಿನ ವಿಷಯದ ಬಗ್ಗೆ ಜಾಗರೂಕರಾಗಿರಿ.   

ಬುಧ ಉದಯವು ತುಲಾ ರಾಶಿಯ ಜನರಿಗೆ ಮಾನಸಿಕ ಒತ್ತಡವನ್ನು ಹೆಚ್ಚಿಸಬಹುದು. ಸಣ್ಣ-ಪುಟ್ಟ ವಿಷಯಗಳಿಗೆ ಮನಸ್ಸು ಉದ್ವಿಗ್ನತೆಯನ್ನು ಎದುರಿಸಬಹುದು. ಹಣಕಾಸಿನ ಸಮಸ್ಯೆಗಳು ಹೆಚ್ಚಾಗಲಿವೆ. 

ಇನ್ನೂ 24ಗಂಟೆಗಳಲ್ಲಿ ಬುಧ ಉದಯವು ಧನು ರಾಶಿಯವರ ಜೀವನದಲ್ಲಿ ಮಹತ್ವದ ಬದಲಾವಣೆಯನ್ನು ತರಬಹುದು. ಹಣದ ಹರಿವು ಹೆಚ್ಚಾಗುತ್ತದೆ ಆದರೂ ಉಳಿತಾಯ ಕಷ್ಟವಾಗಬಹುದು. 

ಬುಧ ಉದಯದಿಂದಾಗಿ ಕುಂಭ ರಾಶಿಯವರಿಗೆ ಆರ್ಥಿಕ ಸಮಸ್ಯೆಗಳು ಹೆಚ್ಚಾಗಲಿವೆ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯವು ದೊಡ್ಡ ಸಮಸ್ಯೆಯಾಗಿ ಕಾಡಬಹುದು. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link