Mercury Transit 2023: ಹೊಸ ವರ್ಷದಲ್ಲಿ ರಚನೆಯಾಗಲಿರುವ ಭದ್ರ ರಾಜಯೋಗದಿಂದ 5 ರಾಶಿಯವರಿಗೆ ಹಣದ ಸುರಿಮಳೆ

Tue, 20 Dec 2022-9:15 am,

ಮೇಷ ರಾಶಿ: ಹೊಸ ವರ್ಷ 2023ರಲ್ಲಿ ಬುಧ ಸಂಕ್ರಮಣದಿಂದ ಮೇಷ ರಾಶಿಯವರಿಗೆ ಹೆಚ್ಚಿನ ಪ್ರಯೋಜನವಾಗಲಿದೆ. ಈ ಸಮಯದಲ್ಲಿ ಬುಧನ ಗೋಚಾರದ ಪರಿಣಾಮವಾಗಿ ಮೇಷ ರಾಶಿಯವರಿಗೆ ಅದೃಷ್ಟದ ಸಂಪೂರ್ಣ ಬೆಂಬಲ ಲಭ್ಯವಾಗಲಿದ್ದು ಎಲ್ಲಾ ಕೆಲಸಗಳಲ್ಲೂ ಯಶಸ್ಸು ಸಿಗಲಿದೆ. ಉನ್ನತ ವಿದ್ಯಾಭ್ಯಾಸ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಉತ್ತಮ ಸಮಯ. ವಿದೇಶ ಪ್ರವಾಸ ಯೋಗ, ವೃತ್ತಿ ಬದುಕಿನಲ್ಲಿಯೂ ಬಡ್ತಿ ಸಾಧ್ಯತೆ ಇದೆ. 

ಮಿಥುನ ರಾಶಿ: ಮಿಥುನ ರಾಶಿಯವರ ಅಧಿಪತಿಯಾಗಿರುವ ಬುಧನು 2023ರಲ್ಲಿ ಈ ರಾಶಿಯವರಿ ಬಂಪರ್ ಲಾಭವನ್ನು ಕರುಣಿಸಲಿದ್ದಾನೆ. ಈ ಸಮಯದಲ್ಲಿ ಮಿಥುನ ರಾಶಿಯವರು ಸುಖ ದಾಂಪತ್ಯ ಜೀವನವನ್ನು ಆನಂದಿಸಲಿದ್ದಾರೆ. ಇನ್ನೂ ಮದುವೆಯಾಗದವರಿಗೆ ಕಂಕಣ ಭಾಗ್ಯ ಕೂಡಿಬರಲಿದೆ. ವ್ಯಾಪಾರ-ವ್ಯವಹಾರದಲ್ಲಿಯೂ ಲಾಭದಾಯಕ ಸಮಯ ಇದಾಗಿದೆ.

ಧನು ರಾಶಿ: ಹೊಸ ವರ್ಷದಲ್ಲಿ ಧನು ರಾಶಿಗೆ ಪ್ರವೇಶಿಸಲಿರುವ ಬುಧನು ಭದ್ರ ಯೋಗವನ್ನು ರೂಪಿಸಲಿದ್ದಾರೆ. ಭದ್ರ ರಾಜಯೋಗದ ಪರಿಣಾಮವಾಗಿ ಈ ರಾಶಿಯವರು ವೃತ್ತಿ ಜೀವನದಲ್ಲಿ ಉನ್ನತ ಸ್ಥಾನಕ್ಕೇರಲಿದ್ದಾರೆ. ಹೂಡಿಕೆಯಿಂದ ಉತ್ತಮ ಲಾಭ ದೊರೆಯಲಿದೆ. ಇಷ್ಟು ದಿನಗಳ ಕಾಲ ಸ್ಥಗಿತಗೊಂಡಿದ್ದ ಕಾಮಗಾರಿಗಳು ಈ ಸಮಯದಲ್ಲಿ ಪೂರ್ಣಗೊಳ್ಳಲಿವೆ. 

ಕುಂಭ ರಾಶಿ: ಹೊಸ ವರ್ಷದಲ್ಲಿ ಬುಧ ರಾಶಿ ಪರಿವರ್ತನೆ, ಭದ್ರ ರಾಜಯೋಗದ ಪರಿಣಾಮವಾಗಿ ಕುಂಭ ರಾಶಿಯ ಉದ್ಯೋಗಸ್ಥರಿಗೆ ಬಡ್ತಿ-ಇನ್ಕ್ರಿಮೆಂಟ್ ಪ್ರಾಪ್ತಿಯಾಗಲಿದೆ. ವ್ಯಾಪಾರ-ವ್ಯವಹಾರದಲ್ಲಿ ತೊಡಗಿರುವವರ ಆದಾಯ ಹೆಚ್ಚಾಗಲಿದೆ. ರಾಜಕೀಯದಲ್ಲಿ ಸಕ್ರಿಯರಾಗಿರುವವರಿಗೆ ಎಲೆಕ್ಷನ್ ಸಂದರ್ಭದಲ್ಲಿ ಉತ್ತಮ ಲಾಭವಾಗಲಿದೆ. 

ಮೀನ ರಾಶಿ:  2023ರ ಆರಂಭದಲ್ಲಿ ಬುಧನ ಸಂಚಾರವು ಮೀನ ರಾಶಿಯವರಿಗೆ ಸಾಕಷ್ಟು ಕೀರ್ತಿ, ಯಶಸ್ಸು, ಪ್ರಗತಿಯನ್ನು ತರಲಿದೆ. ಈ ಸಮಯದಲ್ಲಿ ನಿಮ್ಮ ನೆಚ್ಚಿನ ಉದ್ಯೋಗದ ಆಫರ್ ಬರಬಹುದು. ಹೊಸ ಆರ್ಥಿಕ ಮೂಲಗಳು ಸೃಷ್ಟಿಯಾಗಲಿದ್ದು ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ.

ಸೂಚನೆ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link