ಬುಧ ಸಂಚಾರ ಬದಲಾವಣೆಯಿಂದ ವಿಪರೀತ ರಾಜಯೋಗ: ಇನ್ನೆರಡು ವಾರ ಈ ರಾಶಿಯವರಿಗೆ ಕೀರ್ತಿ ಜೊತೆಗೆ ಅಪಾರ ಧನ ಪ್ರಾಪ್ತಿ

Thu, 05 Oct 2023-8:25 am,

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ರಾಜಕುಮಾರ ಎಂದು ಕರೆಯಲ್ಪಡುವ ಬುಧನು ಸದ್ಯ ಕನ್ಯಾ ರಾಶಿಯಲ್ಲಿ ಅಸ್ತಮಿಸಲಿದ್ದಾನೆ. ಅಕ್ಟೋಬರ್ 8 ರಂದು ಬುಧ ಗ್ರಹವು ಕನ್ಯಾ ರಾಶಿಯಲ್ಲಿ ಅಸ್ತಮಿಸಲಿದೆ. ಮುಂದಿನ ಬಳಿಕ 16 ದಿನಗಳ ಕಾಲ ಬುಧ ಇದೇ ಸ್ಥಿತಿಯಲ್ಲಿ ಇರಲಿದ್ದಾನೆ. ಬುಧ ಸಂಚಾರ ಬದಲಾವಣೆಯಿಂದ ವಿಪರೀತ ರಾಜಯೋಗ ನಿರ್ಮಾಣವಾಗುತ್ತಿದೆ. 

ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ, ಬುಧ ಸಂಚಾರದಿಂದ ನಿರ್ಮಾಣವಾಗಿರುವ ವಿಪರೀತ ರಾಜಯೋಗವನ್ನು ಅತ್ಯಂತ ಮಂಗಳಕರ ಯೋಗ ಎಂದು ಬಣ್ಣಿಸಲಾಗುತ್ತದೆ. ಇದರ ಪರಿಣಾಮ ಎಲ್ಲಾ 12 ರಾಶಿಯವರ ಮೇಲೆ ಕಂಡು ಬರುತ್ತದೆ. ಆದರೂ, ಇದರ ಶುಭ ಪರಿಣಾಮ ಮೂರು ರಾಶಿಯವರ ಜೀವನದಲ್ಲಿ ಅಪಾರ ಕೀರ್ತಿ ಪ್ರತಿಷ್ಠೆಯ ಜೊತೆಗೆ ಖಜಾನೆಯನ್ನೂ ತುಂಬಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ... 

ಬುಧ ಅಸ್ತದ ಪರಿಣಾಮವಾಗಿ ಅಕ್ಟೋಬರ್ 8ರ ಬಳಿಕ ಮುಂದಿನ 16 ದಿನ ಮೂರು ರಾಶಿಯವರಿಗೆ ಕೀರ್ತಿ-ಪ್ರತಿಷ್ಠೆಯೊಂದಿಗೆ ಮೋಜು-ಮಸ್ತಿಯಿಂದ ಕೂಡಿರಲಿದೆ. ಮಾತ್ರವಲ್ಲ, ಈ ಸಂದರ್ಭದಲ್ಲಿ ಈ ರಾಶಿಯವರ ಖಜಾನೆಯೂ ತುಂಬಲಿದೆ. ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ... 

ಬುಧ ರಾಶಿ ಬದಲಾವಣೆಯಿಂದ ನೀರ್ಮಾನವಾಗಲಿರುವ ವಿಪರೀತ ರಾಜಯೋಗವು ಮೇಷ ರಾಶಿಯವರಿಗೆ ತುಂಬಾ ಪ್ರಯೋಜನಕಾರಿ ಆಗಿದೆ. ಈ ಸಮಯದಲ್ಲಿ ನೀವು ಷೇರು ಮಾರುಕಟ್ಟೆಯ ವ್ಯವಹಾರಗಳಿಂದ ಲಾಭವನ್ನು ಪಡೆಯಬಹುದು. ವ್ಯಾಪಾರ-ವ್ಯವಹಾರವನ್ನು ವಿಸ್ತರಿಸಲು ಯೋಚಿಸುತ್ತಿರುವವರಿಗೆ ಇದು ಅತ್ಯುತ್ತಮ ಸಮಯ ಎಂದು ಸಾಬೀತುಪಡಿಸಲಿದೆ. ಆಸ್ತಿ, ವಾಹನ ಖರೀದಿ ಯೋಗವೂ ಇದೆ. 

ಬುಧ ಅಸ್ತದ ಪರಿಣಾಮವಾಗಿ ನಿರ್ಮಾಣವಾಗುತ್ತಿರುವ ವಿಪರೀತ ರಾಜಯೋಗವು ಕರ್ಕಾಟಕ ರಾಶಿಯವರ ಜೀವನದಲ್ಲಿಯೂ ಶುಭ ಫಲಗಳನ್ನು ತರಲಿದೆ. ಈ ಸಮಯದಲ್ಲಿ ನೀವು ಅಪಾರ ಹಣವನ್ನು ಪಡೆಯಲಿದ್ದು ಸಿರಿವಂತರಾಗುವ ಯೋಗವಿದೆ. ಅಷ್ಟೇ ಅಲ್ಲದೆ, ಉದ್ಯಮಿಗಳು ಉತ್ತಮ ಲಾಭವನ್ನು ಗಳಿಸಬಹುದು. ನಿಮ್ಮ ಸಹೋದರ ವರ್ಗದವರಿಂದ ಬೆಂಬಲ ದೊರೆಯಲಿದ್ದು  ಷೇರು ಮಾರುಕಟ್ಟೆ, ಬೆಟ್ಟಿಂಗ್ ಮತ್ತು ಲಾಟರಿಯಲ್ಲಿ ಹಣ ಹೂಡಿಕೆ ಮಾಡುವವರಿಗೆ ಬಂಪರ್ ಧನಲಾಭ ಸಂಭವವಿದೆ.   

ಬುಧ ಅಸ್ತದಿಂದ ನಿರ್ಮಾಣವಾಗಲಿರುವ ವಿಪರೀತ ರಾಜಯೋಗವು ವೃಶ್ಚಿಕ ರಾಶಿಯವರಿಗೂ ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ. ಈ ಸಂದರ್ಭದಲ್ಲಿ ನಿಮ್ಮ್ ಆದಾಯದ ಮೂಲಗಳು ಹೆಚ್ಚಾಗಲಿದ್ದು ದಿಢೀರ್ ಧನಲಾಭವಾಗಲಿದೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿದ್ದು ಉದ್ಯೋಗ ರಂಗದಲ್ಲಿಯೂ ಉತ್ತಮ ಸ್ಥಾನವನ್ನು ಗಳಿಸುವಿರಿ. ನಿಮ್ಮ ವೃತ್ತಿಜೀವನದಲ್ಲಿ ಈ ಸಮಯದಲ್ಲಿ, ನೀವು ತುಂಬಾ ಮಂಗಳಕರ ಫಲಗಳನ್ನು ತರಲಿದೆ ಎಂದು ಹೇಳಲಾಗುತ್ತಿದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link