ಮುಂದಿನ ಒಂದೂವರೆ ತಿಂಗಳು ಈ ರಾಶಿಯವರ ಅದೃಷ್ಟ ತಡೆಯುವವರೇ ಇಲ್ಲ ! ಇಟ್ಟ ಹೆಜ್ಜೆಗೆ ಸೋಲೇ ಇಲ್ಲ
ಬುಧ ಗ್ರಹವು ಈಗಾಗಲೇ ಮೇಷ ರಾಶಿಯನ್ನು ಪ್ರವೇಶಿಸಿದೆ. ಜೂನ್ 7 ರವರೆಗೆ ಬುಧ ಇಲ್ಲೇ ಇರಲಿದ್ದಾನೆ. ಬುಧನ ಈ ಸಂಚಾರ ಎಲ್ಲಾ ರಾಶಿಯವರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲೂ ಮೂರು ರಾಶಿಯವರ ಮೇಲೆ ಬುಧನ ವಿಶೇಷ ಆಶೀರ್ವಾದ ಇರುತ್ತದೆ. ಈ ರಾಶಿಯವರು ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಇದರೊಂದಿಗೆ ಅವರ ಆರ್ಥಿಕ ಜೀವನವೂ ಉತ್ತಮವಾಗಿರುತ್ತದೆ.
ಬುಧ ಗ್ರಹದ ರಾಶಿ ಬದಲಾವಣೆಯು ಮೇಷ ರಾಶಿಯವರ ಬದುಕನ್ನೇ ಬದಲಾಯಿಸುತ್ತದೆ. ಈ ರಾಶಿಯವರ ಜಾತಕದ ಲಗ್ನದ ಮನೆಗೆ ಬುಧ ಪ್ರವೇಶಿಸಿದ್ದಾನೆ. ಆದ್ದರಿಂದ, ನಿಮ್ಮ ವ್ಯಕ್ತಿತ್ವವು ಸುಧಾರಿಸುತ್ತದೆ. ಆತ್ಮವಿಶ್ವಾಸ ಹೆಚ್ಚುತ್ತದೆ. ಉದ್ಯೋಗಸ್ಥರು ಕೆಲಸದ ಸ್ಥಳದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ. ಪಾಲುದಾರಿಕೆಯಲ್ಲಿಉತ್ತಮ ಪ್ರಗತಿಯನ್ನು ಪಡೆಯುವ ಸಾಧ್ಯತೆಯಿದೆ. ಜೀವನ ಸಂಗಾತಿ ಬಡ್ತಿ ಪಡೆಯಬಹುದು.
ಬುಧ ಗ್ರಹದ ರಾಶಿಯ ಬದಲಾವಣೆಯಿಂದ ಮಿಥುನ ರಾಶಿಯವರ ಜೀವನದಲ್ಲಿ ಒಳ್ಳೆಯ ದಿನಗಳು ಆರಂಭವಾಗಿದೆ. ಬುಧನು ಮಿಥುನ ರಾಶಿಯ ಅಧಿಪತಿಯಾಗಿದ್ದು, ಈ ರಾಶಿಯ ಸಂಕ್ರಮಣ ಜಾತಕದ 11 ನೇ ಮನೆಯಲ್ಲಿ ಸಂಚಾರ ಮಾಡುತ್ತಿದ್ದಾನೆ. ಈ ಅವಧಿಯಲ್ಲಿ ನಿಮ್ಮ ಆದಾಯವು ಹೆಚ್ಚಾಗುತ್ತದೆ. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ನೀವು ವ್ಯಾಪಾರ ಅಥವಾ ಉದ್ಯೋಗದಲ್ಲಿ ಕೆಲವು ಉತ್ತಮ ಅವಕಾಶಗಳನ್ನು ಪಡೆಯಬಹುದು.
ಬುಧನು ಈ ರಾಶಿಯವರ ಜಾತಕದ ಐದನೇ ಮನೆಯಲ್ಲಿ ಸಂಚರಿಸುತ್ತಿದ್ದಾನೆ. ಸಂತಾನ ಭಾಗ್ಯ ಇಲ್ಲದವರ ಆಸೆ ಈ ಸಂದರ್ಭದಲ್ಲಿ ಈಡೇರುವುದು. ಕಚೇರಿಯಲ್ಲಿ ನಿಮ್ಮ ಕೆಲಸದ ಹೊರೆ ಹೆಚ್ಚಾಗಬಹುದು ಆದರೆ, ದೊಡ್ಡ ಜವಾಬ್ದಾರಿಯನ್ನು ಕೂಡಾ ಪಡೆಯುವ ಸಾಧ್ಯತೆ ಇದೆ. ಮನೆಯಲ್ಲಿ ಶುಭ ಕಾರ್ಯಗಳು ನಡೆಯಬಹುದು.
( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)