Budha Asta: ಐದು ದಿನಗಳ ಬಳಿಕ ಅಸ್ತಮಿಸಲಿರುವ ಬುಧ, ಹೆಚ್ಚಾಗಲಿದೆ ಈ ರಾಶಿಯವರ ಟೆನ್ಷನ್

Wed, 14 Jun 2023-6:37 am,

ಒಂದು ಗ್ರಹವು ಸೂರ್ಯನಿಗೆ ಬಹಳ ಹತ್ತಿರಕ್ಕೆ ಬಂದಾಗ, ಆ ಗ್ರಹವು ಅಸ್ತಮಿಸುತ್ತದೆ. ಇದೀಗ ಜೂನ್ 19, 2023 ರಂದು ಬೆಳಿಗ್ಗೆ 7.16ಕ್ಕೆ ಗ್ರಹಗಳ ರಾಜಕುಮಾರ ಬುಧನು ವೃಷಭ ರಾಶಿಯಲ್ಲಿ ಅಸ್ತಮಿಸಲಿದ್ದಾನೆ. ಬುಧ ಗ್ರಹದ ಅಸ್ತಮದೊಂದಿಗೆ ಕೆಲವು ರಾಶಿಯವರ ಸಂಕಷ್ಟಗಳು ಕೂಡ ಹೆಚ್ಚಾಗಲಿದೆ. ಅದರಲ್ಲೂ ಮುಖ್ಯವಾಗಿ ಈ ರಾಶಿಯವರು ಜನರು ತಮ್ಮ ವೃತ್ತಿಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಲಾಗುತ್ತಿದ್ದು, ಈ ಸಮಯದಲ್ಲಿ ಯಾವ ರಾಶಿಯವರು ಎಚ್ಚರಿಕೆಯಿಂದ ಇರಬೇಕು ತಿಳಿಯಿರಿ. 

ಗ್ರಹಗಳ ರಾಜಕುಮಾರ ಬುಧನು ವೃಷಭ ರಾಶಿಯಲ್ಲಿ ಅಸ್ತಮಿಸಲಿರುವುದರಿಂದ ಮಿಥುನ ರಾಶಿಯವರು ವೃತ್ತಿ ಕ್ಷೇತ್ರದಲ್ಲಿ ಕೆಲವು ಸವಾಲುಗಳನ್ನು ಎದುರಿಸಬೇಕಾಗಬಹುದು. ವೃತ್ತಿಯಲ್ಲಿ ಕೆಲವು ಅಡೆತಡೆಗಳನ್ನು ಎದುರಿಸಬೇಕಾಗಬಹುದು. ಈ ಸಮಯದಲ್ಲಿ ಯಾವುದೇ ಕೆಲಸದಲ್ಲಿ ಯಶಸ್ಸನ್ನು ಪಡೆಯಲು ತುಂಬಾ ಕಠಿಣ ಶ್ರಮದ ಅಗತ್ಯವಿದೆ. 

ಬುಧನ ಆಸ್ತಮ ಸ್ಥಿತಿಯು ಸಿಂಹ ರಾಶಿಯವರಿಗೂ ಕೂಡ ಅಷ್ಟು ಉತ್ತಮವಾಗಿರುವುದಿಲ್ಲ. ಈ ಸಮಯದಲ್ಲಿ ಸಿಂಹ ರಾಶಿಯವರಿಗೆ ಅನುಕೂಲಕರ ಫಲಿತಾಂಶಗಳು ಸಿಗುವುದಿಲ್ಲ. ನಿಮಗೆ ಅದೃಷ್ಟದ ಬೆಂಬಲ ಸಿಗುವುದಿಲ್ಲ. ಈ ಹಂತದಲ್ಲಿ ನಿಮ್ಮ ಆಸೆಗಳನ್ನು ಪೂರೈಸಲು ನಿಮಗೆ ಸಾಧ್ಯವಾಗುವುದಿಲ್ಲ. ವೃತ್ತಿ ಕ್ಷೇತ್ರದಲ್ಲಿಯೂ ಸಹ, ನೀವು ಕೆಲಸದಲ್ಲಿ ಹೆಚ್ಚಿನ ಒತ್ತಡವನ್ನು ಎದುರಿಸಬೇಕಾಗಬಹುದು, ಜಾಗರೂಕರಾಗಿರಿ. 

ಬುಧ ಗ್ರಹದ ಅಸ್ತಮವು ಈ ರಾಶಿಯವರಲ್ಲಿ ಅಭದ್ರತೆಯ ಭಾವನೆಯನ್ನು ತರಬಹುದು. ಯಾವುದೇ ಪ್ರಮುಖ ವಿಷಯಗಳಲ್ಲಿ ನಿರ್ಧಾರ ಕೈಗೊಳ್ಳುವಲ್ಲಿಯೂ ನೀವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ವೃತ್ತಿಜೀವನದಲ್ಲಿ ಕೆಲಸದ ಒತ್ತಡ ಹೆಚ್ಚಾಗಲಿದೆ. ಮಾತ್ರವಲ್ಲ,  ನಿಮ್ಮ ಕಠಿಣ ಪರಿಶ್ರಮಕ್ಕೆ ನೀವು ಸಾಕಷ್ಟು ಮೆಚ್ಚುಗೆಯನ್ನು ಪಡೆಯುವುದಿಲ್ಲ.

ಬುಧ ಗ್ರಹದ ಆಸ್ತಮ ಸ್ಥಿತಿಯು ಧನು ರಾಶಿಯವರಿಗೂ ಕೂಡ ಉದ್ಯೋಗ-ವ್ಯವಹಾರದಲ್ಲಿ ಹಲವು ಸಂಕಷ್ಟಗಳನ್ನು ತಂದೊಡ್ಡಬಹುದು. ಇದು ಹೆಚ್ಚಿನ ಸವಾಲಿನ ಸಮಯವಾದ್ದರಿಂದ ಪ್ರತಿ ಹೆಜ್ಜೆಯನ್ನೂ ತುಂಬಾ ಎಚ್ಚರಿಕೆಯಿಂದ ಮುಂದಿಡುವುದು ಒಳ್ಳೆಯದು. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link