Mesha Sankranti 2022: ಮೇಷ ಸಂಕ್ರಾಂತಿಯಂದು ಈ ಕೆಲಸ ಮಾಡಿದ್ರೆ ಅದೃಷ್ಟ, ಸಂಪತ್ತು ನಿಮ್ಮದಾಗಲಿದೆ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯ ಸಂಕ್ರಾಂತಿಯ ದಿನದಂದು ಬೆಲ್ಲವನ್ನು ದಾನ ಮಾಡುವುದರಿಂದ ದೈಹಿಕ ತೊಂದರೆಗಳಿಂದ ಮುಕ್ತಿ ದೊರೆಯುತ್ತದೆ. ಅದೇ ರೀತಿ ಪ್ರತಿ ಕೆಲಸದಲ್ಲಿ ನಿಮಗೆ ಯಶಸ್ಸು ಸಿಗುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬೇಳೆಕಾಳು ಸೂರ್ಯ ಮತ್ತು ಶನಿಗೆ ಸಂಬಂಧಿಸಿದೆ. ಸೂರ್ಯ ಸಂಕ್ರಾಂತಿಯ ದಿನದಂದು ಬೇಳೆಯನ್ನು ಸೇವಿಸುವುದು ಅಥವಾ ದಾನ ಮಾಡುವುದು ಲಾಭದಾಯಕ. ಹೀಗೆ ಮಾಡುವುದರಿಂದ ಜಾತಕದಲ್ಲಿ ಸೂರ್ಯನು ಬಲಶಾಲಿಯಾಗುತ್ತಾನೆ. ಇದು ಉದ್ಯೋಗದಲ್ಲಿ ಬಡ್ತಿಗೆ ಕಾರಣವಾಗುತ್ತದೆ.
ಮೇಷ ಸಂಕ್ರಾಂತಿಯ ದಿನದಂದು ಕಡಲೆ ದಾನ ಮಾಡುವುದು ಸಹ ಲಾಭದಾಯಕವೆಂದು ಪರಿಗಣಿಸಲಾಗಿದೆ. ಇದಲ್ಲದೇ ಕಡಲೆ ಸೇವಿಸುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ.
ಮೇಷ ಸಂಕ್ರಾಂತಿಯಂದು ಫ್ಯಾನ್‌ಗಳನ್ನು ದಾನ ಮಾಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಬಿದಿರಿನಿಂದ ಮಾಡಿದ ಫ್ಯಾನ್ ಬೇಸಿಗೆಯ ದಿನಗಳಲ್ಲಿ ತಂಪು ನೀಡುತ್ತದೆ. ಹಿಂದೆ ಜನರು ಬಿದಿರಿನ ಫ್ಯಾನ್‌ಗಳನ್ನು ದಾನವಾಗಿ ನೀಡುತ್ತಿದ್ದರು.
ಮೇಷ ಸಂಕ್ರಾಂತಿಯ ವಿಶೇಷ ದಿನದಂದು ನೀರಿನ ಪಾತ್ರೆಗಳು ಅಥವಾ ನೀರಿನ ಬಾಟಲಿಗಳನ್ನು ದಾನ ಮಾಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ನೀರು ತುಂಬಿದ ಹೂಜಿಯನ್ನು ದಾನ ಮಾಡುವ ವ್ಯಕ್ತಿಗೆ ಚಿನ್ನವನ್ನು ದಾನ ಮಾಡಿದಷ್ಟೇ ಪುಣ್ಯ ಸಿಗುತ್ತದೆ ಎಂಬ ನಂಬಿಕೆ ಇದೆ.
(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)