ಬಿಗ್ ಬಾಸ್ ನಲ್ಲಿ ಮಿಡ್ ವೀಕ್ ಎಲಿಮಿನೇಷನ್! ಸ್ಟ್ರಾಂಗ್ ಕಂಟೆಸ್ಟಂಟ್ ರಾತ್ರೋ ರಾತ್ರಿ ಮನೆಯಿಂದ ಔಟ್?
ಬಿಗ್ ಬಾಸ್ ಕನ್ನಡ ಸೀಸನ್ 11 ದಿನ ಕಳೆದಂತೆ ಹೊಸ ತಿರುವುಗಳಲ್ಲಿ ಸಾಗುತ್ತಿದೆ. ಈ ವಾರ ನಾಮಿನೇಷನ್ ಪ್ರಕ್ರಿಯೆ ನಡೆಯುತ್ತಿರುವ ರೀತಿ ವಿಭಿನ್ನವಾಗಿದೆ.
ಬಿಗ್ ಬಾಸ್ ಕನ್ನಡ 11 ರಲ್ಲಿ 6 ನೇ ವಾರ ಶುರುವಾಗಿದೆ. ಈ ವಾರದ ಶುರುವಿನಲ್ಲೇ ಬಿಗ್ ಬಾಸ್ ಮನೆಯಲ್ಲಿ 4 ತಂಡಗಳನ್ನು ರೂಪಿಸಿದ್ದಾರೆ. ವಿವಿಧ ಟಾಸ್ಕ್ಗಳ ಮೂಲಕ ನಾಮಿನೇಷನ್ ಪ್ರಕ್ರಿಯೆ ಮೂಡಿಸಿದ್ದಾರೆ.
ಈ ವಾರ ಬಿಗ್ ಬಾಸ್ ಕನ್ನಡ ಮನೆಯಲ್ಲಿ ಸ್ಟ್ರಾಂಗ್ ಕಂಟೆಸ್ಟಂಟ್ಗಳೇ ನಾಮಿನೇಟ್ ಆಗಿದ್ದಾರೆ. ಟಾಸ್ಕ್ಗಳ ಮೂಲಕವೇ ನಾಮಿನೇಷನ್ನಿಂದ ಸೇವ್ ಆಗುವ ಅವಕಾಶಗಳನ್ನು ಸಹ ಬಿಗ್ ಬಾಸ್ ನೀಡುತ್ತಿದ್ದಾರೆ.
ಚೈತ್ರಾ ಕುಂದಾಪುರ, ಧರ್ಮ ಕೀರ್ತಿರಾಜ್, ಅನುಷಾ ರೈ, ಭವ್ಯಾ ಗೌಡ, ತ್ರಿವಿಕ್ರಮ್ ಈ ವಾರ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದಾರೆ.
ಇದು 6 ನೇ ವಾರವಾದ ಕಾರಣ ಮತ್ತು ಟಾಸ್ಕ್ ಗಳನ್ನು ಕೊಡುತ್ತಿರುವ ರೀತಿ ನೋಡಿದವರಿಗೆ ಮಿಡ್ ವೀಕ್ ಎಲಿಮಿನೇಷನ್ ನಡೆಯಬಹುದೆಂದು ಕೆಲವರು ಭಾವಿಸುತ್ತಿದ್ದಾರೆ.
ಚೈತ್ರಾ, ಧರ್ಮ, ಅನುಷಾ, ಭವ್ಯಾ, ತ್ರಿವಿಕ್ರಮ್ ನಾಮಿನೇಟ್ ಆಗಿದ್ದಾರೆ. ಇಂದಿನ ಟಾಸ್ಕ್ನಲ್ಲಿ ಬಿಗ್ ಬಾಸ್ ತಂಡಗಳಿಗೆ ಮಂಜು ಅವರ ತಂಡ ಪವರ್ ಕಾರ್ಡ್ಗಳನ್ನು ನೀಡಿದ್ದಾರೆ.
ಈ ಎಲ್ಲ ಲೆಕ್ಕಾಚಾರಗಳನ್ನು ನೋಡಿದಾಗ ಈ ವಾರ ಬಲಿಷ್ಠ ಅಭ್ಯರ್ಥಿ ಮನೆಯಿಂದ ಹೊರ ಹೋಗಬಹುದಾಗಿದೆ. ಆದರೆ ವಾರದ ಮಧ್ಯವೇ ಒಬ್ಬರು ಔಟ್ ಆಗುತ್ತಾರೋ ಅಥವಾ ಎಂದಿನಂತೆ ವೀಕೆಂಡ್ ಎಲಿಮಿನೇಷನ್ ನಡೆಯಲಿದೆಯೋ ಎಂಬುದನ್ನು ಕಾದು ನೋಡಬೇಕಿದೆ.