ಮಂಜಣ್ಣನ ತಲೆಗೆ ಬಾಟಲಿಯಿಂದ ಹೊಡೆದ ಮೋಕ್ಷಿತಾ.! ರಾತ್ರೋ ರಾತ್ರಿ ಮನೆಯಿಂದ ಔಟ್?
bigg boss kannada 11 elimination: ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಈ ವಾರದ ಟಾಸ್ಕ್‌ನಲ್ಲಿ ಸ್ಪರ್ಧಿಗಳ ಆರ್ಭಟ ಜೋರಾಗಿದೆ. ಈ ನಡುವೆ ಉಗ್ರಂ ಮಂಜು ಅವರಿಗೆ ಮೋಕ್ಷಿತಾ ಬಾಟಲಿಯಿಂದ ತಲೆಗೆ ಹೊಡೆದಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಈ ವಾರ ರೆಸಾರ್ಟ್ ಟಾಸ್ಕ್ ನೀಡಲಾಗಿತ್ತು. ಇದರಲ್ಲಿ ಎರಡು ತಂಡಗಳನ್ನು ರಚಿಸಿ ಭವ್ಯಾ ಮತ್ತು ಚೈತ್ರ ಅವರನ್ನು ಕ್ಯಾಪ್ಟನ್ ಮಾಡಲಾಗಿತ್ತು.
ಇದೀಗ ಈ ಟಾಸ್ಕ್ ಬಳಿಕ ನಾಮಿನೇಷನ್ ಪ್ರಕ್ರಿಯೆ ಶುರುವಾಗಿದೆ. ಬಿಯರ್ ಬಾಟಲಿಯನ್ನು ತಲೆ ಮೇಲೆ ಒಡೆಯುವ ಮೂಲಕ ನಾಮಿನೇಟ್ ಮಾಡುವ ಅವಕಾಶವನ್ನು ಬಿಗ್ ಬಾಸ್ ನೀಡಿದ್ದಾರೆ.
ಈ ವೇಳೆ ಮನೆಯಲ್ಲಿ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ ಎಂದು ಕಾರಣ ನೀಡಿ ಮೋಕ್ಷಿತಾ ಉಗ್ರಂ ಮಂಜು ಅವರನ್ನು ನಾಮಿನೇಟ್ ಮಾಡಿದ್ದಾರೆ.
ಇದಕ್ಕೆ ಮಂಜು ಕೂಡ ಗರಂ ಆಗಿದ್ದು, ಸಿಲ್ಲಿ ಕಾರಣಗಳಿಗೆ ನಾಮಿನೇಟ್ ಆಗಲು ನಾನು ಒಪ್ಪಲ್ಲ ಎಂದಿದ್ದಾರೆ. ನಾಮಿನೇಷನ್ ನನ್ನಿಷ್ಟ ಎಂದು ಮೋಕ್ಷಿತಾ ಮಂಜಣ್ಣನ ತಲೆ ಮೇಲೆ ಬಿಯರ್ ಬಾಟಲಿ ಒಡೆದಿದ್ದಾರೆ.
ಇಂದು ಅಂದರೆ ಗುರುವಾರ ನಾಮಿನೇಷನ್ ಪ್ರಕ್ರಿಯೆ ನಡೆಯಲಿದ್ದು, ಈ ವಾರ ಮಿಡ್ ವೀಕ್ ಎಲಿಮಿನೇಷನ್ ನಡೆಯಬಹುದು ಎನ್ನಲಾಗುತ್ತಿದೆ.
ಈ ವಾರ ನಾಮಿನೇಟ್ ಆದವರಲ್ಲಿ ಸುದೀಪ್ ವೀಕೆಂಡ್ ಎಪಿಸೋಡ್‌ಗೂ ಮುನ್ನವೇ ಶುಕ್ರವಾರ ರಾತ್ರಿ ಬಿಗ್ ಬಾಸ್ ಮನೆಯಿಂದ ಓರ್ವ ಸ್ಪರ್ಧಿ ಆಚೆ ಬರಬಹುದು ಎಂದು ಹೇಳಲಾಗುತ್ತಿದೆ.
ಆದರೆ ಈ ಬಗ್ಗೆ ಬಿಗ್ ಬಾಸ್ ಯಾವುದೇ ಸುಳಿವು ನೀಡಿಲ್ಲ. ಬಿಗ್ ಬಾಸ್‌ನಲ್ಲಿ 13 ನೇ ವಾರ ಯಾರು ಮನೆಯಿಂದ ಹೊರ ನಡೀತಾರೆ ಎಂಬುದನ್ನು ಕಾದು ನೋಡಬೇಕಿದೆ.