Health Tips: ಮೈಗ್ರೇನ್-ತಲೆನೋವಿನ ಸಮಸ್ಯೆಗೆ ಇಲ್ಲಿದೆ ಸರಳ ಪರಿಹಾರ!
ಮೈಗ್ರೇನ್ ಒಂದು ರೀತಿಯ ಕಾಯಿಲೆಯಾಗಿದ್ದು, ಇದರ ನೋವು ತುಂಬಾ ಅಸಹನೀಯವಾಗಿದೆ. ಇದರಲ್ಲಿ ತಲೆಯ ಅರ್ಧ ಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಆದರೆ ಇದನ್ನು ತಡೆದುಕೊಳ್ಳುವುದು ತುಂಬಾ ಕಷ್ಟಕರ. ಅದರಲ್ಲೂ ಇಂದಿನ ದಿನಗಳಲ್ಲಿ ಯುವ ಪೀಳಿಗೆ ಮೈಗ್ರೇನ್ ಸಮಸ್ಯೆಯಿಂದ ತುಂಬಾ ತೊಂದರೆಗೀಡಾಗುತ್ತಿದೆ.
ಮೈಗ್ರೇನ್ ಅಟ್ಯಾಕ್ ಬಂದಾಗಲೆಲ್ಲಾ ಅದನ್ನು ನಿಯಂತ್ರಿಸುವುದು ತುಂಬಾ ಕಷ್ಟ. ಈ ಸಮಸ್ಯೆ ಹೋಗಲಾಡಿಸಲು ನೀವು ಕೆಲವು ಮನೆಮದ್ದುಗಳನ್ನು ಪ್ರಯತ್ನಿಸಬಹುದು.
ಮೈಗ್ರೇನ್ ಸಮಸ್ಯೆಯಿಂದ ಮುಕ್ತಿ ಪಡೆಯಲು ನೀವು ದಾಲ್ಚಿನ್ನಿ ಬಳಸಿ. ದಾಲ್ಚಿನ್ನಿಯಲ್ಲಿ ಹಲವಾರು ಪೋಷಕಾಂಶಗಳಿದ್ದು, ಇದು ತಲೆನೋವಿನ ಸಮಸ್ಯೆಯನ್ನು ನಿವಾರಿಸುತ್ತದೆ.
ಶುಂಠಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಮೈಗ್ರೇನ್‌ನಂತಹ ಅಸಹನೀಯ ನೋವಿನಲ್ಲೂ ಶುಂಠಿ ನಿಮಗೆ ಸಹಾಯ ಮಾಡುತ್ತದೆ. ಮೈಗ್ರೇನ್ ಅಟ್ಯಾಕ್ ಬಂದಾಗಲೆಲ್ಲಾ ಶುಂಠಿ ಚಹಾವನ್ನು ಕುಡಿಯಿರಿ.
ವರದಿಯ ಪ್ರಕಾರ ಕಾಫಿ ಕುಡಿಯುವುದರಿಂದ ಸ್ವಲ್ಪ ಸಮಯದವರೆಗೆ ಮೈಗ್ರೇನ್ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ನಿಮಗೆ ತಲೆನೋವು ಇದ್ದರೆ ನೀವು ಬ್ಲಾಕ್ ಕಾಫಿಯನ್ನು ಕುಡಿಯಬಹುದು. ನೆನಪಿರಲಿ ಇದನ್ನು ಅತಿಯಾಗಿ ಸೇವಿಸುವುದು ಕೂಡ ದೇಹಕ್ಕೆ ಒಳ್ಳೆಯದಲ್ಲ.
ಮೈಗ್ರೇನ್ ಸಮಸ್ಯೆಯಿಂದ ಮುಕ್ತಿ ಪಡೆಯಲು ನೀವು ಪೌಷ್ಟಿಕಾಂಶಯುಕ್ತ ಆಹಾರ ಸೇವಿಸುವುದು ಬಹಳ ಮುಖ್ಯ. ನೀವು ಪೌಷ್ಟಿಕ ಆಹಾರವನ್ನು ತೆಗೆದುಕೊಂಡರೆ ಮೈಗ್ರೇನ್ ಸಮಸ್ಯೆಗಳು ಕಡಿಮೆಯಾಗುತ್ತವೆ. ಪೌಷ್ಟಿಕ ಆಹಾರವು ಮೈಗ್ರೇನ್ ಹೊರತುಪಡಿಸಿ ಇತರ ಕಾಯಿಲೆಗಳನ್ನೂ ಗುಣಪಡಿಸುತ್ತದೆ.
ವೈದ್ಯರ ಪ್ರಕಾರ ಮೈಗ್ರೇನ್ ಅಟ್ಯಾಕ್ ಅತಿಯಾದ ಒತ್ತಡ, ಮದ್ಯ ಸೇವನೆ, ಸಿಗರೇಟ್, ನಿರ್ಜಲೀಕರಣದ ಕಾರಣದಿಂದಾಗಿ ಬರುತ್ತದೆ. ಇದಕ್ಕೆ ಸಮಯಕ್ಕೆ ಚಿಕಿತ್ಸೆ ನೀಡುವುದು ಅವಶ್ಯಕ.