Milana Nagaraj : ಮಿಲನಾ ನಾಗರಾಜ್ ಪ್ರೆಗ್ನೆಂಟ್.! ಮಗು ಹುಟ್ಟವ ಮೊದಲೇ ಹೆಸರಿಟ್ಟ ಸ್ಟಾರ್ ಜೋಡಿ
ನಟ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಕುರಿತು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಫೋಸ್ಟ್ ಹಂಚಿಕೊಂಡಿದ್ದಾರೆ.
ಇನ್ನು ಪೋಸ್ಟ್‌ನಲ್ಲಿ ಮಗುವಿನ ಡ್ರೆಸ್ ಇದ್ದು ಅದರಲ್ಲಿ ಬೇಬಿ ಕ್ರಿಸ್ಮಿ ಅಂತ ಬರೆದು ಪಿಂಕ್ ಹಾರ್ಟ್ ಹಾಕಲಾಗಿದೆ.
ಈ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಮಾಕ್ಟೇಲ್ ಜೋಡಿ ಮೊದಲ ಮಗುವನ್ನು ಸ್ವಾಗತಿಸಲಿದೆ.
ಇನ್ನು ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಫೆಬ್ರವರಿ 14, 2021 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ಪ್ರೇಮಿಗಳ ದಿನದಂದು ಸಪ್ತಪದಿ ತುಳಿದ ಜೋಡಿ ಹಲವಾರು ಸಿನಿಮಾಗಳಲ್ಲು ಒಟ್ಟಾಗಿ ನಟಿಸಿದ್ದಾರೆ.
ಕೃಷ್ಣ ಮತ್ತು ಮಿಲನಾ ನಡಿಸಿದ ಲವ್ ಮಾಕ್ಟೇಲ್ ಸಿನಿಮಾ ಸೂಪರ್ ಹಿಟ್ ಆಗಿತ್ತು.