Photo Gallery: ಕನ್ನಡ ಚಿತ್ರರಂಗದಲ್ಲಿ ‘ಮಿಲ್ಕ್ ಬ್ಯೂಟಿ’ ಆಶಿಕಾ ರಂಗನಾಥ್

Mon, 20 Mar 2023-1:20 pm,

ನಟಿ ಆಶಿಕಾ ರಂಗನಾಥ್ 1996 ಅಗಸ್ಟ್ 5ರಂದು ಹಾಸನದಲ್ಲಿ ಜನಿಸಿದರು. ತಂದೆ ರಂಗನಾಥ್ ಸಿವಿಲ್ ಕಾಂಟ್ರಾಕ್ಟರ್ ಮತ್ತು ತಾಯಿ ಸುಧಾ ಗೃಹಿಣಿ. ಇವರ ಹಿರಿಯ ಸಹೋದರಿ ಅನು‍ಷಾ ಕಿರುತೆರೆಯ ಪ್ರಮುಖ ನಟಿ. ತುಮಕೂರಿನಲ್ಲಿ ಬೆಳೆದ ಇವರು ಪಿಯುಸಿ ಶಿಕ್ಷಣಕ್ಕೆ ಬೆಂಗಳೂರಿಗೆ ಬಂದರು.

ಬೆಂಗಳೂರಿನ ಕೋರಮಂಗಲದ ಜ್ಯೋತಿ ನಿವಾಸ ಕಾಲೇಜಿನಲ್ಲಿ ಪಿಯು ಶಿಕ್ಷಣ ಮುಗಿಸಿದ ನಟಿ ಆಶಿಕಾ ರಂಗನಾಥ್ MES ಕಾಲೇಜಿನಿಂದ ವಾಣಿಜ್ಯ ವಿಭಾಗದಲ್ಲಿ ಪದವಿ ಪಡೆದರು. ಹಲವು ನೃತ್ಯ ಪ್ರಕಾರಗಳಲ್ಲಿ ಪರಿಣಿತಿ ಹೊಂದಿರುವ ಆಶಿಕಾ ಬಾಲ್ಯದಿಂದಲೂ ಹಲವು ನೃತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿ ಪಡೆದುಕೊಂಡಿದ್ದಾರೆ.

2014ರಲ್ಲಿ ನಡೆದ ‘ಕ್ಲೀನ್ ಆಂಡ್ ಕ್ಲಿಯರ್ ಫ್ರೇಶ್ ಪೇಸ್’ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ನಟಿ ಆಶಿಕಾ ರಂಗನಾಥ್ ರನ್ನರ್-ಅಪ್ ಅಗಿದ್ದರು. ನಿರ್ದೇಶಕ ಮಹೇಶ್ ಬಾಬು ಇವರನ್ನು ತಮ್ಮ ‘ಕ್ರೇಜಿ ಬಾಯ್’ ಚಿತ್ರದ ಮೂಲಕ ಚಂದನವನಕ್ಕೆ ಪರಿಚಯಿಸಿದರು.

ಹ್ಯಾಟ್ರಿಕ್ ಹೋರೋ ಶಿವರಾಜಕುಮಾರ್ ಅವರ`ಮಾಸ್ ಲೀಡರ್', ಗೋಲ್ಡನ್ ಸ್ಟಾರ್ ಗಣೇಶ್ ಅವರ ‘ಮುಗಳು ನಗೆ',’ರಾಜು ಕನ್ನಡ ಮೀಡಿಯಂ', ರ್ಯಾಂಬೋ-2, ತಾಯಿಗೆ ತಕ್ಕ ಮಗ, ಕೋಟಿಗೊಬ್ಬ-3, ಮದಗಜ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿ ಆಶಿಕಾ ರಂಗನಾಥ್ ಹೆಸರು ಮಾಡಿದರು.

2018ರಲ್ಲಿ ಆಶಿಕಾ ರಂಗನಾಥ್ ಮತ್ತು ನಟ ಶರಣ್ ಕಾಂಬಿನೇಶನ್‌ಲ್ಲಿ ಬಂದ ‘ರ‍್ಯಾಂಬೋ 2’ ಚಿತ್ರ ಭರ್ಜರಿ ಪ್ರದರ್ಶನ ಕಂಡಿತು. ಈ ಚಿತ್ರದ ‘ಚುಟು ಚುಟು’ ಹಾಡು ಯುಟ್ಯೂಬ್‌ನಲ್ಲಿ ಅತಿಹೆಚ್ಚು ವೀಕ್ಷಣೆ ಕಂಡ ಕನ್ನಡದ ಹಾಡು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.

ಸದ್ಯ ನಟಿ ಆಶಿಕಾ ರಂಗನಾಥ್ ಅವರು ಕನ್ನಡ ಸೇರಿದಂತೆ ವಿವಿಧ ಚಿತ್ರರಂಗಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರು ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದು, ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ವಿವಿಧ ರೀತಿಯ ಫೋಟೋಶೂಟ್ ಮತ್ತು ತಮ್ಮ ಚಿತ್ರಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅಪ್‍ಡೇಟ್ ಮಾಡುತ್ತಿರುತ್ತಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link