ಅಪ್ಪು ತೊಟ್ಟ ಜಾಕೆಟ್ಗೆ ವಿಶೇಷ ಕಾಳಜಿ: ಫ್ರೇಮ್ ಹಾಕಿಸಿಟ್ಟ ಸಚಿವರ ಪುತ್ರ
ಅಪ್ಪು ತೊಟ್ಟು ಅಭಿಮಾನಿಗೆ ಕೊಟ್ಟಿದ್ದ ಜಾಕೆಟ್ಗೆ ಫ್ರೇಮ್ ಹಾಕಿಸಿಟ್ಟ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಪುತ್ರ ಸಿದ್ದಾರ್ಥ್ ಸಿಂಗ್
ಹೊಸಪೇಟೆಗೆ ಪುನೀತ್ ರಾಜ್ಕುಮಾರ್ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಭಿಮಾನಿ ಕಿಚಡಿ ವಿಶ್ವನಿಗೆ ಈ ಜಾಕೆಟ್ನ್ನು ನೀಡಿದ್ದರು. ಕಿಚಡಿ ವಿಶ್ವ ದೊಡ್ಮನೆ ಹುಡ್ಗನ ಪ್ರೀತಿಗೆ ಫಿದಾ ಆಗಿದ್ದ.
ಇದೀಗ ಸಚಿವ ಆನಂದ್ ಸಿಂಗ್ ಪುತ್ರ ಸಿದ್ಧಾರ್ಥ್ ಆ ಜಾಕೆಟ್ ಪಡೆದುಕೊಂಡು ಫ್ರೇಮ್ ಹಾಕಿಸಿ ಕಚೇರಿಯಲ್ಲಿ ಇಟ್ಟಿದ್ದಾರೆ.
ಕಿಚಡಿ ವಿಶ್ವನಿಗೆ ಕೊಟ್ಟ ಜಾಕೆಟ್ನ್ನು ಸಿದ್ಧಾರ್ಥ್ ಸಿಂಗ್ಗೆ ನೀಡಲಾಗಿತ್ತು. ಹೀಗಾಗಿ ಪ್ರೀತಿಯ ನಟನ ಮೇಲಿರುವ ಅಭಿಮಾನವನ್ನು ಹೀಗೆ ತೋರ್ಪಡಿಸಿದ್ದಾರೆ.
ಅಪ್ಪು ಅಗಲಿ ದಿನಗಳು ಉರುಳುತ್ತಿದ್ದರೂ ಸಹ ಅಭಿಮಾನಿಗಳ ಪಾಲಿಗೆ ಅವರು ಮರೆಯಲಾಗದ ಮಾಣಿಕ್ಯದಂತಿದ್ದಾರೆ.