ಗೆಳೆಯನಿಗಾಗಿ ಗರಡಿಯಲ್ಲಿ ಬಣ್ಣ ಹಚ್ಚಿದ ಸಹಕಾರ ಸಚಿವ ಎಸ್.ಟಿ ಸೋಮಶೇಖರ್
ಸಚಿವ ಬಿ.ಸಿ ಪಾಟೀಲ್ ಅವರ ನಿರ್ಮಾಣದಲ್ಲಿ ತಯಾರಾಗುತ್ತಿರುವ ಚಿತ್ರ ‘ಗರಡಿ’
ಈ ಸಿನಿಮಾದಲ್ಲಿ ಸಚಿವ ಎಸ್.ಟಿ ಸೋಮಶೇಖರ್ ಅವರು, ಸೋಮಣ್ಣ ಎನ್ನುವ ಪಾತ್ರ ನಿರ್ವಹಿಸುತ್ತಿದ್ದಾರೆ.
ಸಚಿವ ಬಿ.ಸಿ ಪಾಟೀಲ್ ಅವರ ನಿರ್ಮಾಣದಲ್ಲಿ ತಯಾರಾಗುತ್ತಿರುವ ‘ಗರಡಿ’ ಚಿತ್ರದಲ್ಲಿ ಗೆಳೆಯನಿಗಾಗಿ ಪಾತ್ರ ಮಾಡಿರುವುದಾಗಿ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ.
ಬಿ.ಸಿ. ಪಾಟೀಲ್ ಅವರ ಗೆಳೆಯನ ಪಾತ್ರದಲ್ಲಿ ಸಚಿವ ಸೋಮಶೇಖರ್ ಈ ಚಿತ್ರದಲ್ಲಿ ಕಾಣಿಸಿಕೊಳ್ಳಳಿದ್ದಾರೆ.
ಅಂದಹಾಗೆ ಗಾಳಿಪಟ 2 ಸಿನಿಮಾದ ನಂತರ ಯೋಗರಾಜ್ ಭಟ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನಿಮಾ ಇದಾಗಿದೆ. ಈ ಸಿನಿಮಾದಲ್ಲಿ ಹಳ್ಳಿ ಸೊಗಡಿನಲ್ಲಿ ಕಥೆಯನ್ನು ಹೇಳಲು ಹೊರಟಿದ್ದಾರಂತೆ ನಿರ್ದೇಶಕರು.