ಈ ಎಲೆಯ ಪುಡಿಯನ್ನು ತೆಂಗಿನೆಣ್ಣೆಯಲ್ಲಿ ಬೆರೆಸಿ ಹಲ್ಲುಜ್ಜಿ… ಹಳದಿ ಕಲೆ ಹೋಗಿ ಹಲ್ಲುಗಳು ಫಳಫಳ ಅಂತ ಹೊಳೆಯುತ್ತೆ!
ಪ್ರತಿದಿನ ಬ್ರಷ್ ಮಾಡಿದರೂ ಸಹ ಬಯಸಿದ ಫಲಿತಾಂಶವನ್ನು ಪಡೆಯುವುದಿಲ್ಲ. ಹೀಗಾಗಿ ನಾವಿಂದು 5 ಮನೆಮದ್ದುಗಳ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದೇವೆ. ಇವುಗಳು ಸುಲಭವಾಗಿ ಹಲ್ಲುಗಳನ್ನು ಬಿಳಿಯಾಗಿಸಲು ಸಹಾಯ ಮಾಡುತ್ತದೆ.
ಒಂದು ಸಣ್ಣ ತುಂಡು ಶುಂಠಿಯನ್ನು ಮಿಕ್ಸರ್ ಗ್ರೈಂಡರ್’ನಲ್ಲಿ ರುಬ್ಬಿಕೊಳ್ಳಿ. ನಂತರ ಕಾಲು ಟೀ ಚಮಚ ಉಪ್ಪಿನೊಂದಿಗೆ ಮಿಶ್ರಣ ಮಾಡಿ. ಅದಕ್ಕೆ ಒಂದು ನಿಂಬೆಹಣ್ಣಿನ ರಸವನ್ನು ಕೂಡ ಮಿಶ್ರಣ ಮಾಡಿ. ಟೂತ್ ಬ್ರಶ್ ಬಳಸಿ ಈ ಮಿಶ್ರಣದ ಸಹಾಯದಿಂದ ಹಲ್ಲುಜ್ಜಿ.
ಬೇವಿನ ಔಷಧೀಯ ಗುಣಗಳ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ಅದರ ಎಲೆಗಳನ್ನು ಚೆನ್ನಾಗಿ ಕುದಿಸಿ, ನಂತರ ನೀರನ್ನು ಫಿಲ್ಟರ್ ಮಾಡಿ ತಣ್ಣಗಾಗುವವರೆಗೆ ಕಾಯಿರಿ. ಈಗ ಈ ನೀರಿನಿಂದ ಬಾಯಿ ಸ್ವಚ್ಛಗೊಳಿಸಿ, ಬೇವಿನ ಕಹಿ ಬಾಯಿ ಮತ್ತು ಹಲ್ಲುಗಳಲ್ಲಿ ಇರುವ ಸೂಕ್ಷ್ಮಾಣುಗಳನ್ನು ಕೊಲ್ಲುತ್ತದೆ.
ಕೋಕೋ ಪೌಡರ್ ಅನ್ನು ನೀರು ಅಥವಾ ತೆಂಗಿನ ಎಣ್ಣೆಯೊಂದಿಗೆ ಬೆರೆಸಿ ಪೇಸ್ಟ್ ಆಗಿ ತಯಾರಿಸಿ. ನಂತರ ಬ್ರಷ್ ಸಹಾಯದಿಂದ ಹಲ್ಲುಗಳನ್ನು ಸ್ವಚ್ಛಗೊಳಿಸಿ. ಈ ಮಿಶ್ರಣವನ್ನು ಬಳಸುವುದರಿಂದ ನಿಮ್ಮ ಹಲ್ಲುಗಳ ಹೊಳಪನ್ನು ಮರಳಿ ತರುತ್ತದೆ.
ಇದು ಸಾಮಾನ್ಯ ಉಪ್ಪಲ್ಲ, ಇದನ್ನು ಎಪ್ಸಮ್ ಸಾಲ್ಟ್ ಎಂದು ಕರೆಯಲಾಗುತ್ತದೆ. ಕಲ್ಲು ಉಪ್ಪಿನಂತೆ ಇದ್ದು ಪಿಂಕ್ ಬಣ್ಣದಲ್ಲಿರುತ್ತದೆ, ಸಾಮಾನ್ಯ ಭಾಷೆಯಲ್ಲಿ ಪಿಂಕ್ ಸಾಲ್ಟ್ ಎಂದೂ ಕರೆಯಲಾಗುತ್ತದೆ. ಈ ಉಪ್ಪು ಮತ್ತು ನೀರನ್ನು ಸಮಾನ ಪ್ರಮಾಣದಲ್ಲಿ ಮಿಶ್ರಣ ಮಾಡಿ. ನಂತರ ಟೂತ್ ಬ್ರಶ್ ಬಳಸಿ ಮಿಶ್ರಣವನ್ನು ಹಲ್ಲುಗಳ ಮೇಲೆ ಉಜ್ಜಿ. ನಂತರ ಬಾಯಿಯನ್ನು ತೊಳೆಯಿರಿ.
ಪುದೀನವನ್ನು ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. 3 ಅಥವಾ 4 ಎಲೆಗಳನ್ನು ಪುಡಿಮಾಡಿ ತೆಂಗಿನ ಎಣ್ಣೆಯೊಂದಿಗೆ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಬ್ರಷ್ ಬಳಸಿ ಚೆನ್ನಾಗಿ ಹಲ್ಲುಗಳ ಮೇಲೆ ಉಜ್ಜಿಕೊಳ್ಳಿ. ಹೀಗೆ ಮಾಡಿದರೆ ತಕ್ಷಣವೇ ಹಳದಿ ಕಲೆಗಳು ದೂರವಾಗಿ ಹಲ್ಲುಗಳು ಬಿಳಿಯಾಗುತ್ತವೆ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ದಯವಿಟ್ಟು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)