ತೆಂಗಿನೆಣ್ಣೆಗೆ ಈ ಎಲೆಯ ರಸ ಬೆರೆಸಿ ಹಚ್ಚಿದರೆ ಬಿಳಿ ಕೂದಲು ಕಪ್ಪಾಗುವುದು ಮಾತ್ರವಲ್ಲ ಅಷ್ಟುದ್ದ ಬೆಳೆಯುವುದು ಕೇಶ ರಾಶಿ
ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು ವಿಶ್ವದ ಕೆಲವು ಭಾಗಗಳಲ್ಲಿ ಸಾರಭೂತ ತೈಲಗಳನ್ನು ಸಾವಿರಾರು ವರ್ಷಗಳಿಂದ ಬಳಸಲಾಗುತ್ತಿದೆ. ಈ ಎಣ್ಣೆ ಕೂದಲು ಉದುರಿದ ಜಾಗದಲ್ಲಿ ಮತ್ತೆ ಕೂದಲು ಬೆಳೆಯಲು ಸಹಾಯ ಮಾಡುತ್ತದೆ.
ಪುದೀನಾ ಎಣ್ಣೆಯನ್ನು ಕೂದಲು ಉದುರುವಿಕೆಗೆ ಪರಿಹಾರವಾಗಿ ಬಳಸುತ್ತಾರೆ. ಪುದೀನಾ ಸಾರಭೂತ ತೈಲದಲ್ಲಿರುವ ಮೆಂಥಾಲ್ ವಾಸೋಡಿಲೇಟರ್ ಆಗಿರುವುದರಿಂದ ರಕ್ತದ ಹರಿವನ್ನು ಸುಧಾರಿಸುತ್ತದೆ. ಕೂದಲು ಕಿರುಚೀಲಗಳಿಗೆ ರಕ್ತದ ಹರಿವನ್ನು ಹೆಚ್ಚಿಸುವುದರಿಂದ ಕೂದಲು ಉದುರುವುದು ನಿಲ್ಲುತ್ತದೆ.
ಇತ್ತೀಚಿನ ಅಧ್ಯಯನದಲ್ಲಿ ಕೂಡಾ ಪುದೀನಾ ಸಾರಭೂತ ತೈಲಗಳು ಕೂದಲಿನ ಬೆಳವಣಿಗೆಗೆ ಸಾಕಷ್ಟು ಸಹಾಯ ಮಾಡುತ್ತದೆ ಎನ್ನುವುದನ್ನು ತೋರಿಸಿದೆ.
ನೇರ ನೆತ್ತಿಯ ಮಸಾಜ್ ಮೂಲಕ ಈ ಎಣ್ಣೆಯನ್ನು ಬಳಸಬಹುದು. ತೆಂಗಿನ ಎಣ್ಣೆಗೆ ಒಂದೆರಡು ಒಂದೆರಡು ಪುದೀನ ಎಣ್ಣೆಯನ್ನು ಸೇರಿಸಿ. ಈಗ ಈ ಎಣ್ಣೆಯಿಂದ ಮೃದುವಾಗಿ ಮಸಾಜ್ ಮಾಡುತ್ತಾ ಬನ್ನಿ.
15 ರಿಂದ 20 ನಿಮಿಷಗಳ ನಂತರ ಕೂದಲನ್ನು ತೊಳೆಯಿರಿ. ನಿಮ್ಮ ಶಾಂಪೂ ಮತ್ತು ಕಂಡಿಷನರ್ ಬಾಟಲಿಗಳಿಗೆ ನೀವು ಪುದೀನಾ ಎಣ್ಣೆಯನ್ನು ನೇರವಾಗಿ ಹಾಕಬಹುದು. ಆದರೆ ಹೆಚ್ಚು ಸೇರಿಸದಂತೆ ಎಚ್ಚರ ವಹಿಸಿ. ಶಾಂಪೂ ಅಥವಾ ಕಂಡಿಷನರ್‌ನ ಪ್ರತಿ ಔನ್ಸ್‌ಗೆ ಸುಮಾರು ಐದು ಹನಿಗಳನ್ನು ಶಿಫಾರಸು ಮಾಡಲಾಗಿದೆ.
ಹೀಗೆ ಮಾಡುತ್ತಾ ಬಂದರೆ ಕೂದಲು ಉದುರುವುದು ತಡೆಯುವುದು ಮಾತ್ರವಲ್ಲ ಕೂದಲು ಬೆಳ್ಳಗಾಗುವುದನ್ನು ಕೂಡಾ ತಡೆಯುತ್ತದೆ ಎನ್ನಲಾಗಿದೆ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ. )