Weight Loss: ಯಾವ ಡಯೆಟ್ ಕೂಡ ಬೇಡ! ಈ ನೀರನ್ನಷ್ಟೇ ಕುಡಿದರೆ ಸಾಕು ಅಸಾಧ್ಯವೆನಿಸುವ ದೇಹದ ಹಠಮಾರಿ ಬೊಜ್ಜು ಸುಲಭವಾಗಿ ಕರಗುತ್ತೆ!
ಆರೋಗ್ಯವನ್ನು ಕಾಪಾಡುವ ಮತ್ತು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುವ ಪಾನೀಯವೆಂದರೆ ಅದು ಪುದೀನ ನೀರು. ಇದು ರೋಗನಿರೋಧಕ ಶಕ್ತಿ ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಹೆಚ್ಚಿಸಲು ಸಹ ಸಹಕಾರಿ.
ಪುದೀನಾ ಅದರ ಪ್ರಸಿದ್ಧ ಜೀರ್ಣಕಾರಿ ಗುಣಲಕ್ಷಣಗಳಿಂದ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಈ ಮೂಲಿಕೆಯು ಜೀರ್ಣಕಾರಿ ಕಿಣ್ವಗಳನ್ನು ಉತ್ತೇಜಿಸುತ್ತದೆ. ಜೊತೆಗೆ ಆಹಾರದಿಂದ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.
ಪುದೀನ ನೀರಿನ ಮತ್ತೊಂದು ಪ್ರಯೋಜನವೆಂದರೆ ಅದು ಹೊಟ್ಟೆ ಮತ್ತು ಜೀರ್ಣಕಾರಿ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಆಸಿಡ್ ರಿಫ್ಲಕ್ಸ್ ಅನ್ನು ಅನುಭವಿಸಿದರೆ ಅಥವಾ ಆಮ್ಲೀಯತೆ, ಗ್ಯಾಸ್ ಅಥವಾ ಇತರ ಸಮಸ್ಯೆಗಳನ್ನು ಹೊಂದಿದ್ದರೆ ಪುದೀನ ನೀರನ್ನು ಕುಡಿಯುವುದು ಉತ್ತಮ.
ಪುದೀನಾ ಗಂಟಲು ಮತ್ತು ಮೂಗು ಕಟ್ಟುವ ಸಮಸ್ಯೆಗೆ ಪರಿಹಾರ ನೀಡುತ್ತದೆ. ಪುದೀನದಲ್ಲಿರುವ ಉರಿಯೂತ ನಿವಾರಕ ಗುಣಗಳು ನಿರಂತರ ಕೆಮ್ಮಿನಿಂದ ಉಂಟಾಗುವ ಶ್ವಾಸನಾಳ ಮತ್ತು ಕಿರಿಕಿರಿಯನ್ನು ಸಹ ಶಮನಗೊಳಿಸುತ್ತದೆ.
ಬಾಯಿಯಲ್ಲಿ ಬ್ಯಾಕ್ಟೀರಿಯಾಗಳು ದುರ್ವಾಸನೆ ಉಂಟುಮಾಡಬಹುದು. ಹೀಗಿರುವಾಗ ಪುದೀನ ನೀರು ಉಸಿರಾಟವನ್ನು ತಾಜಾಗೊಳಿಸಲು ಮತ್ತು ಪ್ಲೇಕ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಪುದೀನಾ ವಿವಿಧ ರೀತಿಯ ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ, ಸ್ವತಂತ್ರ ರಾಡಿಕಲ್ಗಳ ಚಟುವಟಿಕೆಯನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ. ಸಾಮಾನ್ಯವಾಗಿ ಶೀತ ಮತ್ತು ಜ್ವರದಿಂದ ಉಂಟಾಗುವ ನೋವು ಮತ್ತು ಅಸ್ವಸ್ಥತೆಗೆ ಪರಿಹಾರವನ್ನು ಒದಗಿಸಲು ಕೂಡ ಇದು ಸಹಾಯ ಮಾಡುತ್ತದೆ.
ಪುದೀನವು ಬಲವಾದ ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಇದು ಚರ್ಮದ ಚಿಕಿತ್ಸೆಗೆ ಉತ್ತಮ ಅಂಶ. ರಂಧ್ರಗಳನ್ನು ಬಿಗಿಗೊಳಿಸಲು ಮತ್ತು ತೇವಾಂಶವನ್ನು ಲಾಕ್ ಮಾಡಲು ಪುದೀನ ಎಲೆಗಳನ್ನು ಬಳಸಬಹುದು. ಜೊತೆಗೆ ಚರ್ಮವನ್ನು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತವೆ.
ಮನೆಯಲ್ಲಿ ಪುದೀನ ನೀರನ್ನು ತಯಾರಿಸುವುದು ತುಂಬಾ ಸರಳ. ಒಂದು ಲೋಟ ನೀರಿಗೆ ಸ್ಪಲ್ಪ ಪುದೀನ ಎಲೆಗಳನ್ನು ಹಾಕಿ ಮತ್ತು ಅದಕ್ಕೆ ಸ್ವಲ್ಪ ನಿಂಬೆ ರಸವನ್ನು ಕೂಡ ಸೇರಿಸಬಹುದು. ರಾತ್ರಿಯಿಡೀ ನೆನೆಸಿಟ್ಟು ಬೆಳಿಗ್ಗೆ ಈ ನೀರನ್ನು ಕುಡಿಯಿರಿ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞ ಅಥವಾ ವೈದ್ಯರನ್ನು ಸಂಪರ್ಕಿಸಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.