ಈ ಎಲೆಯ ರಸವನ್ನು ತೆಂಗಿನೆಣ್ಣೆಗೆ ಬೆರೆಸಿ ಹಚ್ಚಿದರೆ ಬಿಳಿ ಕೂದಲು ಕಪ್ಪಾಗುವುದು !ಮಾತ್ರವಲ್ಲ ಕೂದಲು ಉದುರುವುದೂ ಇಲ್ಲ !
ಕೂದಲಿನ ಬೆಳವಣಿಗೆಗಾಗಿ ಸಾರಭೂತ ತೈಲಗಳನ್ನು ಹಲವಾರು ವರ್ಷಗಳಿಂದ ಬಳಸಲಾಗುತ್ತಿದೆ. ಈ ಎಣ್ಣೆ ಕೂದಲು ಉದುರಿದ ಜಾಗದಲ್ಲಿ ಮತ್ತೆ ಕೂದಲು ಬೆಳೆಯಲು ಸಹಾಯ ಮಾಡುತ್ತದೆ.
ಕೂದಲು ಉದುರುವುದನ್ನು ತಡೆಯಲು ಪುದೀನಾ ಎಣ್ಣೆಯನ್ನು ಬಳಸಲಾಗುತ್ತದೆ. ಇದರಲ್ಲಿರುವ ಮೆಂಥಾಲ್ ವಾಸೋಡಿಲೇಟರ್ ರಕ್ತದ ಹರಿವನ್ನು ಸುಧಾರಿಸುತ್ತದೆ.ಕೂದಲು ಕಿರುಚೀಲಗಳಿಗೆ ರಕ್ತದ ಹರಿವನ್ನು ಹೆಚ್ಚಿಸುವುದರಿಂದ ಕೂದಲು ಉದುರುವುದು ನಿಲ್ಲುತ್ತದೆ.
ಪುದೀನಾ ಸಾರಭೂತ ತೈಲಗಳು ಕೂದಲಿನ ಬೆಳವಣಿಗೆಗೆ ಸಾಕಷ್ಟು ರೀತಿಯಲ್ಲಿ ಸಹಾಯ ಮಾಡುತ್ತದೆ ಎನ್ನುವುದು ಅಧ್ಯಯನದಲ್ಲಿ ಕೂಡಾ ಸಾಬೀತಾಗಿದೆ.
ಇದನ್ನು ತೆಂಗಿನ ಎಣ್ಣೆಗೆ ಒಂದೆರಡು ಒಂದೆರಡು ಹನಿ ಪುದೀನ ಎಣ್ಣೆಯನ್ನು ಸೇರಿಸಿ ಮೃದುವಾಗಿ ಮಸಾಜ್ ಮಾಡಬೇಕು.
ಹೀಗೆ ಮಸಾಜ್ ಮಾಡಿದ ಬಳಿಕ 15 ರಿಂದ 20 ನಿಮಿಷಗಳ ನಂತರ ಕೂದಲನ್ನು ತೊಳೆಯಬೇಕು. ಅಥವಾ ಶಾಂಪೂ ಮತ್ತು ಕಂಡಿಷನರ್ ಬಾಟಲಿಗಳಿಗೆ ಪುದೀನಾ ಎಣ್ಣೆಯನ್ನು ನೇರವಾಗಿ ಹಾಕಬಹುದು. ಹೀಗೆ ಹಾಕುವಾಗ ಶಾಂಪೂ ಅಥವಾ ಕಂಡಿಷನರ್‌ನ ಪ್ರತಿ ಔನ್ಸ್‌ಗೆ ಸುಮಾರು ಐದು ಹನಿಗಳನ್ನು ಮಾತ್ರ ಸೇರಿಸಬೇಕು ಎನ್ನುವುದು ನೆನಪಿರಲಿ.
ಹೀಗೆ ಮಾಡುತ್ತಾ ಬಂದರೆ ಕೂದಲು ಉದುರುವುದು ತಡೆಯುವುದು ಮಾತ್ರವಲ್ಲ ಕೂದಲು ಬೆಳ್ಳಗಾಗುವುದನ್ನು ಕೂಡಾ ತಡೆಯಬಹುದು. (ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.)