Shani Temple: ಈ ದೇವಾಲಯಗಳಿಗೆ ಭೇಟಿ ನೀಡುವುದರಿಂದ ಕಡಿಮೆಯಾಗುತ್ತಂತೆ ಶನಿದೇವನ ಕೋಪ!

Thu, 31 Mar 2022-1:42 pm,

ಶನಿಧಾಮ, ನವದೆಹಲಿ :  ಶನಿ ದೇವನಿಗೆ ಅರ್ಪಿತವಾಗಿರುವ ಈ ದೇವಾಲಯವು ನವದೆಹಲಿಯ ಛತ್ತರ್‌ಪುರ ರಸ್ತೆಯಲ್ಲಿದೆ. ಈ ದೇವಾಲಯವು ವಿಶ್ವದ ಅತಿ ಎತ್ತರದ ಶನಿದೇವನ ಪ್ರತಿಮೆಯನ್ನು ಹೊಂದಿದೆ. ಇಲ್ಲಿಗೆ ಲಕ್ಷಾಂತರ ಭಕ್ತರು ದರ್ಶನಕ್ಕೆ ಬರುತ್ತಾರೆ. ಇದರೊಂದಿಗೆ ಇಲ್ಲಿ ಶನಿದೇವನ ನೈಸರ್ಗಿಕ ವಿಗ್ರಹವನ್ನು ಪೂಜಿಸಲಾಗುತ್ತದೆ. ಈ ದೇವಾಲಯಕ್ಕೆ ಭೇಟಿ ನೀಡಿದರೆ ಎಲ್ಲಾ ಪಾಪಗಳು ಪರಿಹಾರವಾಗುತ್ತವೆ ಎಂದು ನಂಬಲಾಗಿದೆ.

ಶನಿ ಮಂದಿರ, ಇಂದೋರ್: ಇಂದೋರ್‌ನಲ್ಲಿ ಶನಿದೇವನ ಪುರಾತನ ಮತ್ತು ಅದ್ಭುತವಾದ ದೇವಾಲಯವಿದೆ. ಇದು ಇಂದೋರ್‌ನ ಜುನಿಯಲ್ಲಿದೆ. ಈ ದೇವಾಲಯದ ಬಗ್ಗೆ ಅನೇಕ ಐತಿಹ್ಯಗಳಿವೆ. ಶನಿ ದೇವನನ್ನು ಪೂಜಿಸಲು ಅಹಲ್ಯಾಬಾಯಿ ಈ ಸ್ಥಳಕ್ಕೆ ಬಂದಿದ್ದಳು ಎಂದು ನಂಬಲಾಗಿದೆ. 

ಶನಿ ಶಿಂಗ್ನಾಪುರ: ಶನಿ ಶಿಂಗ್ನಾಪುರ ದೇವಾಲಯವು ಮಹಾರಾಷ್ಟ್ರ ರಾಜ್ಯದ ಅಹಮದ್‌ನಗರ ಜಿಲ್ಲೆಯಲ್ಲಿದೆ. ಈ ಶನಿ ದೇವಾಲಯವು ಸುಮಾರು 300 ವರ್ಷಗಳಷ್ಟು ಹಳೆಯದು. ಈ ದೇವಾಲಯದಲ್ಲಿ ಯಾವುದೇ ರೀತಿಯ ಛಾವಣಿ ಅಥವಾ ಗೋಡೆ ಇಲ್ಲ. ಇಲ್ಲಿ 5 ಅಡಿ ಎತ್ತರದ ಕಪ್ಪು ಶಿಲೆಯಿದ್ದು, ಜನರು ಅದನ್ನು ಭಕ್ತಿಯಿಂದ ಪೂಜಿಸುತ್ತಾರೆ. ಶನಿ ಶಿಂಗ್ನಾಪುರ ಗ್ರಾಮದ ಯಾವ ಮನೆಯಲ್ಲೂ ಬಾಗಿಲಿಲ್ಲ ಎನ್ನಲಾಗಿದೆ. ಶನಿದೇವನು ಇಲ್ಲಿನ ಜನರನ್ನು ರಕ್ಷಿಸುತ್ತಾನೆ ಎಂದು ನಂಬಲಾಗಿದೆ. ಆದರೆ, ಈ ದೇವಾಲಯದಲ್ಲಿ ಮಹಿಳೆಯರ ಪ್ರವೇಶವನ್ನು ನಿಷೇಧಿಸಲಾಗಿದೆ. 

ಶನಿಚರ ದೇವಸ್ಥಾನ, ಮಧ್ಯಪ್ರದೇಶ: ಇದು ಮಧ್ಯಪ್ರದೇಶದ ಅತ್ಯಂತ ಹಳೆಯ ಶನಿ ದೇವಾಲಯವಾಗಿದೆ. ಇದು ಮೊರೆನಾ ಜಿಲ್ಲೆಯ ಆಂಟಿ ಗ್ರಾಮದಲ್ಲಿ ಬೆಟ್ಟಗಳ ಮೇಲೆ ನೆಲೆಗೊಂಡಿದೆ. ಇದು ರಾಮಾಯಣ ಕಾಲದ ಸ್ಥಳ ಎಂದು ನಂಬಲಾಗಿದೆ. ಪುರಾಣಗಳಲ್ಲಿ ಉಲ್ಲೇಖಿಸಲಾದ ಕಥೆಗಳ ಪ್ರಕಾರ, ರಾವಣನ ಸೆರೆಯಿಂದ ಬಿಡುಗಡೆಯಾದ ನಂತರ ಹನುಮನು ಶನಿ ದೇವನನ್ನು ಇಲ್ಲಿ ಬಿಟ್ಟಿದ್ದರು ಎಂದು ಹೇಳಲಾಗುತ್ತದೆ. ಇಲ್ಲಿ ಶನಿ ಪರ್ವತಕ್ಕೆ ಪ್ರದಕ್ಷಿಣೆ ಹಾಕುವುದರಿಂದ ಶನಿಯ ಶಾಪ ವಿಮೋಚನೆಯಾಗುತ್ತದೆ ಎಂದು ನಂಬಲಾಗಿದೆ.   

ತಿರುನಲ್ಲರ್ ದೇವಸ್ಥಾನ, ತಮಿಳುನಾಡು: ಈ ದೇವಾಲಯವು ಪುದುಚೇರಿಯ ತಿರುನಲ್ಲಾರ್‌ನಲ್ಲಿದೆ. ಶನಿ ದೇವನಿಗೆ ಅರ್ಪಿತವಾಗಿರುವ ಈ ದೇವಾಲಯವು ತಮಿಳುನಾಡಿನ ಸಮೀಪದಲ್ಲಿದೆ. ಈ ದೇವಾಲಯವನ್ನು ನವಗ್ರಹ ಮಂದಿರ ಎಂದೂ ಕರೆಯುತ್ತಾರೆ. ಕಾವೇರಿ ನದಿಯ ದಡದಲ್ಲಿರುವ ಈ ಶನಿ ದೇವಾಲಯವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಈ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ರಾಜ ನಲ್ ಶನಿಯ ಕೋಪದಿಂದ ಮುಕ್ತಿ ಪಡೆದನೆಂದು ನಂಬಲಾಗಿದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link