ಯಾವ ಕಾರಣಕ್ಕೂ ಮನೆಯ ಈ ದಿಕ್ಕಿನಲ್ಲಿ ಕನ್ನಡಿ ಇಟ್ಟು ಮುಖ ನೋಡಬೇಡಿ! ಅರ್ಧ ಆಯುಷ್ಯಕ್ಕೆ ಬರುತ್ತೆ ಕುತ್ತು; ಕೋಟ್ಯಾಧಿಪತಿಯೂ ಸಾಲದ ಸುಳಿಗೆ ಬೀಳುವನು
ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಇರುವ ಪ್ರತಿಯೊಂದು ವಸ್ತುವು ಮನೆಯಲ್ಲಿ ವಾಸಿಸುವ ಸದಸ್ಯರ ಮೇಲೆ ಪರಿಣಾಮ ಬೀರುವ ಶಕ್ತಿಯನ್ನು ಹೊಂದಿರುತ್ತದೆ. ವಾಸ್ತು ಶಾಸ್ತ್ರದಲ್ಲಿ ಈ ಎಲ್ಲದರ ಬಗ್ಗೆ ಉಲ್ಲೇಖಿಸಲಾಗಿದೆ. ಕೆಲವೊಂದು ವಸ್ತುಗಳನ್ನು ಮನೆಯಲ್ಲಿ ಎಲ್ಲೆಂದರಲ್ಲಿ ಇಡುವಂತಿಲ್ಲ. ಬದಲಾಗಿ ಅದಕ್ಕೆ ಸರಿಯಾದ ದಿಕ್ಕುಗಳನ್ನು ಉಲ್ಲೇಖಿಸಲಾಗಿದೆ. ಅವುಗಳನ್ನು ಅನುಸರಿಸಿದರೆ ಮನೆಗೆ ಸಮೃದ್ಧಿಯನ್ನು ತರುತ್ತದೆ.
ಇನ್ನು ಮನೆಯಲ್ಲಿ ಕನ್ನಡಿಗಳನ್ನು ಅಳವಡಿಸುವಾಗ, ವಾಸ್ತುಗೆ ಸಂಬಂಧಿಸಿದ ಕೆಲವು ವಿಷಯಗಳ ಬಗ್ಗೆ ವಿಶೇಷ ಗಮನ ನೀಡಬೇಕು. ವಾಸ್ತು ಪ್ರಕಾರ, ಕನ್ನಡಿಯನ್ನು ಸರಿಯಾದ ದಿಕ್ಕಿನಲ್ಲಿ ಇರಿಸಿದರೆ ಅದೃಷ್ಟದ ಬಾಗಿಲು ತೆರೆಯುತ್ತದೆ. ಅದೇ ತಪ್ಪು ದಿಕ್ಕಿನಲ್ಲಿ ಇಡುವುದರಿಂದ ಮನೆಯಲ್ಲಿ ಬಡತನ ಬಂದು ಬದುಕೇ ನರಕವಾಗುತ್ತದೆ.
ಕನ್ನಡಿಯನ್ನು ಎಂದಿಗೂ ಪಶ್ಚಿಮ ಅಥವಾ ದಕ್ಷಿಣದ ಗೋಡೆಯ ಮೇಲೆ ಇಡಬಾರದು. ವಾಸ್ತು ಪ್ರಕಾರ, ಈ ದಿಕ್ಕಿನಲ್ಲಿ ಕನ್ನಡಿ ಇಡುವುದರಿಂದ ಮನೆಯ ಸದಸ್ಯರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಮತ್ತು ಮನೆಯಲ್ಲಿ ಯಾವಾಗಲೂ ಅಪಶ್ರುತಿ ಇರುತ್ತದೆ.
ಚೂಪಾದ, ಮಸುಕಾದ ಅಥವಾ ಕೊಳಕು ಕನ್ನಡಿಯನ್ನು ಎಂದಿಗೂ ಮನೆಯಲ್ಲಿ ಇಡಬಾರದು. ಮನೆಯಲ್ಲಿರುವ ಕನ್ನಡಿ ಸ್ವಲ್ಪ ಒಡೆದರೂ ಸಹ ತಕ್ಷಣ ಬಿಸಾಡಿ. ಅಂತಹ ಕನ್ನಡಿಯನ್ನು ಮನೆಯಲ್ಲಿ ಇಡುವುದರಿಂದ ಮನೆಯಲ್ಲಿ ಬಡತನ ಬರುತ್ತದೆ. ಇದರಿಂದ ಕುಟುಂಬ ಸದಸ್ಯರ ಪ್ರಗತಿ ನಿಲ್ಲುತ್ತದೆ.
ಮನೆಯ ಸ್ಟೋರ್ ರೂಂನಲ್ಲಿ ಕನ್ನಡಿ ಅಳವಡಿಸಬಾರದು. ಈ ಸ್ಥಳದಲ್ಲಿ ಕನ್ನಡಿಯನ್ನು ಇರಿಸುವುದರಿಂದ, ಕುಟುಂಬದ ಸದಸ್ಯರು ಯಾವಾಗಲೂ ಮಾನಸಿಕ ಒತ್ತಡದಲ್ಲಿರುತ್ತಾರೆ. ಜೊತೆಗೆ ಅವರಿಗೆ ಯಾವುದೇ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ.
ವಾಸ್ತು ಶಾಸ್ತ್ರದ ಪ್ರಕಾರ ಮಲಗುವ ಕೋಣೆಯಲ್ಲಿ ಕನ್ನಡಿ ಇಡಬಾರದು. ಹಾಸಿಗೆಯ ಪ್ರತಿಬಿಂಬ ಕನ್ನಡಿಯಲ್ಲಿ ಗೋಚರಿಸಬಾರದು ಎಂಬ ನಂಬಿಕೆಯಿದೆ.
ವಾಸ್ತು ಪ್ರಕಾರ ಮನೆಯ ಅಡುಗೆ ಮನೆಯಲ್ಲಿ ಕನ್ನಡಿ ಹಾಕಬಾರದು. ಅದರಿಂದ ಹೊರಹೊಮ್ಮುವ ನಕಾರಾತ್ಮಕ ಶಕ್ತಿಯು ಕುಟುಂಬದ ಸದಸ್ಯರ ಆರೋಗ್ಯವನ್ನು ಹಾಳು ಮಾಡುತ್ತದೆ.
ವಾಸ್ತು ಪ್ರಕಾರ ಮನೆಗೆ ಧನಾತ್ಮಕ ಶಕ್ತಿ ಬರಬೇಕಾದರೆ ಮುಖ್ಯ ಬಾಗಿಲಿಗೆ ಕನ್ನಡಿ ಹಾಕಬೇಡಿ. ಮುಖ್ಯ ಬಾಗಿಲಿಗೆ ಕನ್ನಡಿಯನ್ನು ಹಾಕುವುದರಿಂದ ಲಕ್ಷ್ಮಿ ದೇವಿಯು ಮನೆಯೊಳಗೆ ಪ್ರವೇಶಿಸುವುದನ್ನು ತಡೆಯುತ್ತದೆ. ಮುಖ್ಯ ಬಾಗಿಲಿಗೆ ಗಾಜು ಹಾಕುವುದರಿಂದ ಪ್ರಗತಿ ನಿಲ್ಲುತ್ತದೆ.
ವಾಸ್ತು ಪ್ರಕಾರ, ನೀವು ಸ್ನಾನಗೃಹದಲ್ಲಿ ಕನ್ನಡಿಯನ್ನು ಇಡುತ್ತಿದ್ದರೆ ಅದನ್ನು ಪೂರ್ವ ಅಥವಾ ಉತ್ತರದ ಗೋಡೆಗಳ ಮೇಲೆ ಇರಿಸಿ. ಇದರಿಂದ ನೆಗೆಟಿವ್ ಎನರ್ಜಿ ದೂರವಾಗಿ ಆರೋಗ್ಯ ಸುಧಾರಿಸುತ್ತದೆ.
ಕನ್ನಡಿ ಇಡಲು ಪೂರ್ವ ಮತ್ತು ಉತ್ತರ ದಿಕ್ಕುಗಳನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಉತ್ತರ ದಿಕ್ಕು ಸಂಪತ್ತಿನ ದೇವರಾದ ಕುಬೇರನ ಕೇಂದ್ರವಾಗಿದೆ. ಆದ್ದರಿಂದ ಈ ದಿಕ್ಕಿನಲ್ಲಿ ಕನ್ನಡಿಯನ್ನು ಇಡುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಬರುತ್ತದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.