MIS-C Affecting Kids Post-Covid-19: Corona ಹಾಗೂ Black Fungus ನಡುವೆಯೇ ಮಕ್ಕಳಲ್ಲಿ ಹರಡುತ್ತಿದೆ ಈ ಕಾಯಿಲೆ
1. ಏನಿದು MIS-C? - ಕೊವಿಡ್ ನಿಂದ ಚೇತರಿಸಿಕೊಂಡ ಬಳಿಕ ಮಕ್ಕಳಲ್ಲಿ 'ಮಲ್ಟಿ ಸಿಸ್ಟಂ ಇನ್ಫ್ಲೇಮೆಟರಿ ಸಿಂಡ್ರೋಮ್' (MIS-C) ಕಾಯಿಲೆ ಚಿಂತೆಯನ್ನು ಹೆಚ್ಚಿಸಿದೆ. ಈ ಸಿಂಡ್ರೋಮ್ ನಲ್ಲಿ ಮಕ್ಕಳ ಹಲವು ಅಂಗಗಳು ಪ್ರಭಾವಿತಗೊಳ್ಳುತ್ತವೆ. COVID-19ನಿಂದ ಸೋಂಕಿತಗೊಂಡ ಕೆಲ ವಾರಗಳ ಬಳಿಕ ಈ ಕಾಯಿಲೆ ಮಕ್ಕಳನ್ನು ತನ್ನ ಬಲಿಪಶುವನ್ನಾಗಿಸುತ್ತಿದೆ. ಕೋರೋನಾ ಎರಡನೆಯ ಅಲೆಯಲ್ಲಿ ಇಬ್ಬರು ಮಕ್ಕಳ ಮೇಲೆ ಈ ಕಾಯಿಲೆಯ ಪ್ರಭಾವ ಕಂಡುಬಂದಿದೆ. ಇದುವರೆಗೆ ಒಟ್ಟು 5 ಮಕ್ಕಳಲ್ಲಿ ಈ ಕಾಯಿಲೆ ಇರುವುದು ಪತ್ತೆಯಾಗಿದೆ.
2. ಈ ಅಂಗಗಳನ್ನು ಪ್ರಭಾವಿತಗೊಳಿಸುತ್ತದೆ - ಕೊರೊನಾ ವೈರಸ್ ನಿಂದ ಚೆತರಿಸಿಕೊಳ್ಳುತ್ತಿರುವ ಮಕ್ಕಳಲ್ಲಿ 'ಮಲ್ಟಿ ಇನ್ಫ್ಲೇಮೇಟರೀ ಸಿಂಡ್ರೋಮ್' (MIS-C) ಸೋಂಕು ಕಾಣಿಸಿಕೊಳ್ಳುವ ಅಪಾಯವಿದೆ. ಫೋರ್ಟಿಸ್ ಹೆಲ್ತ್ ಕೆಯರ್ ನಲ್ಲಿ ಶಿಶು ತಜ್ಞರಾಗಿ ಕೆಲಸ ಮಾಡುವ ಡಾ. ಯೋಗೇಶ್ ಕುಮಾರ್ ಗುಪ್ತಾ ಅವರು ಹೇಳುವ ಪ್ರಕಾರ, 'ಇದು ತುಂಬಾ ಅಪಾಯಕಾರಿಯಾಗಿದೆ ಅಥವಾ ಇದರಿಂದ ಜೀವಕ್ಕೆ ಅಪಾಯವಿದೆ ಎಂದು ನಾನು ಹೇಳುವುದಿಲ್ಲ. ಆದರೆ, ನಿಶ್ಚಿತವಾಗಿ ಹಲವು ಬಾರಿ ಈ ಸೋಂಕು ಮಕ್ಕಳನ್ನು ವಿಪರೀತ ಪ್ರಭಾವಿತಗೊಲಿಸಿತ್ತದೆ. ಇದು ಮಕ್ಕಳ ಹೃದಯ, ಲೀವರ್ ಹಾಗೂ ಕಿಡ್ನಿಯ ಮೇಲೆ ಪರಿಣಾಮ ಬೀರುತ್ತದೆ' ಎನ್ನುತ್ತಾರೆ.
3. ಕೊರೊನಾ ಸೋಂಕು ತಗುಲಿದ ಎಷ್ಟು ದಿನಗಳ ಬಳಿಕ ಈ ಕಾಯಿಲೆ ಬರುತ್ತದೆ? - ಈ ಕುರಿತು ಮಾತನಾಡುವ ಶಿಶು ರೋಗ ತಜ್ಞ ಡಾ.ಯೋಗೇಶ್, 'ಕೊವಿಡ್ -19 (Covid-19) ಸೋಂಕು ತಗುಲಿದ ಆರು ವಾರಗಳ ಬಳಿಕ ಈ ಕಾಯಿಲೆ (MIS-C Causes)ಕಾಣಿಸಿಕೊಳ್ಳುತ್ತದೆ. MIS-C, ದೇಹದಲ್ಲಿ ಕೊವಿಡ್ -19 ವಿರುದ್ಧ ಹೋರಾಡಲು ಶರೀರದಲ್ಲಿ ಉತ್ಪನ್ನಗೊಂಡ ಆಂಟಿಜನ್ ಪ್ರಕ್ರಿಯೇಯ ಪರಿಣಾಮವಾಗಿದೆ. ಕೋವಿಡ್ -19 ಸೋಂಕು ಚಿಂತೆ ಹೆಚ್ಚು ಮಾಡುತ್ತಿಲ್ಲ. ಏಕೆಂದರೆ ಹೆಚ್ಚಿನ ಸಂದರ್ಭಗಳಲ್ಲಿ ಅದು ಮಾಮೂಲಿ ಅಥವಾ ಸೌಮ್ಯ ರೋಗಲಕ್ಷಣವನ್ನು ಹೊಂದಿರುತ್ತವೆ ಆದರೆ ಒಮ್ಮೆ ಈ ಸೋಂಕಿನಿಂದ (MIS-C Symptoms) ಚೇತರಿಸಿಕೊಂಡಾಗ ಮಕ್ಕಳ ದೇಹದಲ್ಲಿ ಪ್ರತಿಕಾಯಗಳು ಉತ್ಪತ್ತಿಯಾಗುತ್ತವೆ ಮತ್ತು ಈ ಆಂಟಿಬಾಡಿಗಳೆ ಮಕ್ಕಳಲ್ಲಿ ಪ್ರತಿಕ್ರಿಯೆ ಆರಂಭಿಸುತ್ತವೆ. ಇವು ಮಕ್ಕಳ ಶರೀರದಲ್ಲಿ ಅಲರ್ಜಿ ಉತ್ಪತ್ತಿಗೂ ಕೂಡ ಕಾರಣವಾಗಬಹುದು' ಎಂದಿದ್ದಾರೆ.
4. ಕೊರೊನಾದಿಂದ ಚೇತರಿಸಿಕೊಂಡ ಬಳಿಕ ಈ ಅಪಾಯ - ಇತರ ದೇಶಗಳಲ್ಲಿ ಕೊವಿಡ್-19 ಪೀಕ್ ಸ್ಟೇಜ್ ನಲ್ಲಿರುವಾಗ ಈ MIS-C ಕಾಯಿಲೆಯನ್ನು ಮೊದಲ ಬಾರಿಗೆ Documentation ಮಾಡಲಾಗಿದೆ. ಕಳೆದ ವರ್ಷ ಇಂತಹ ಮೂರು ಪ್ರಕರಣಗಳು ಬೆಳಕಿಗೆ ಬಂದಿದ್ದವು. ಎರಡನೇ ಅಲೆಯಲ್ಲಿ ಮತ್ತೆ ಮೂರು ಪ್ರಕರಣಗಳನ್ನು ಗುರುತಿಸಲಾಗಿದೆ. MIS-C ಪ್ರಕರಣಗಳ ಸಂಖ್ಯೆಯಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಗುಪ್ತಾ ಶಂಕೆ ವ್ಯಕ್ತಪಡಿಸಿದ್ದಾರೆ.
5.MIS-C ತುಂಬಾ ರೆಯರ್ ಕಾಯಿಲೆಯಾಗಿದೆ - ಮಕ್ಕಳಲ್ಲಿ MIS-C ಕಾಯಿಲೆ (MIS-C Treatment) ಕಾಣಿಸಿಕೊಳ್ಳುವುದು ತೀರಾ ವಿರಳ ಎನ್ನುತ್ತಾರೆ ತಜ್ಞರು. ಇದರ ಶೇಕಡಾವಾರು ಪ್ರಮಾಣ ತುಂಬಾ ಕಡಿಮೆಯಾಗಿದ್ದರೂ ಕೂಡ ಈ ಕುರಿತು ಗಂಭೀರ ಪರೀಕ್ಷೆ ನಡೆಸುವ ಅವಶ್ಯಕತೆ ಇದೆ ಎಂದು ಅವರು ಹೇಳಿದ್ದಾರೆ. ಮುಂದಿನ ಅಲೆ ಬರುವ ಮುನ್ನ ಈ ಕುರಿತು ಸ್ಪಷ್ಟ ಚಿತ್ರಣ ತಿಳಿಯುವುದು ಅತ್ಯಾವಶ್ಯಕವಾಗಿದೆ.