Divita Rai : ʼ2023 ಮಿಸ್‌ ಯನಿವರ್ಸ್‌ʼಗೆ ಇಂಡಿಯಾ ಪ್ರತಿನಿಧಿಸಿ ಸ್ಪರ್ಧೆ ಮಾಡಿದ ʼಕರುನಾಡಿನ ಗೊಂಬೆʼ...!

Fri, 13 Jan 2023-5:36 pm,

ಅಮೆರಿಕದ ಲೂಸಿಯಾನದಲ್ಲಿ ನಾಳೆ (14) ವಿಶ್ವ ಸುಂದರಿ 2023ರ ಸ್ಪರ್ಧೆ ನಡೆಯಲಿದೆ. ಮಂಗಳೂರಿನ ಸುಂದರಿ ದಿವಿತಾ ರೈ ಇದರಲ್ಲಿ ಸ್ಪರ್ಧಿಸುತ್ತಿದ್ದಾರೆ.

25 ವರ್ಷದ ದಿವಿತಾ ರೈ ಕಳೆದ ವರ್ಷ ಆಗಸ್ಟ್‌ನಲ್ಲಿ ಮಿಸ್ ದಿವಾ ಯೂನಿವರ್ಸ್ 2022 ಆಗಿ ಆಯ್ಕೆಯಾಗಿದ್ದರು.

ದಕ್ಷಿಣ ಕನ್ನಡದ ಸುಂದರಿ ಭಾರತವನ್ನು ಪ್ರತಿನಿಧಿಸುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರವಾಗಿದೆ.

ದಿವಿತಾ ಗೋಲ್ಡನ್ ಡ್ರೆಸ್ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಹೈಪ್‌ ಕ್ರಿಯೇಟ್‌ ಮಾಡುತ್ತಿವೆ. 

ಸುಂದರಿ ದಿವಿತಾ ವಿಶಿಷ್ಟ ವೇಷಭೂಷಣಕ್ಕೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗುತ್ತಿದೆ. ರಾಷ್ಟ್ರೀಯ ಕಾಸ್ಟ್ಯೂಮ್‌ ರೌಂಡ್‌ಗಾಗಿ ದಿವಿತಾ ಈ ವಿಶಿಷ್ಟ ಬಟ್ಟೆಯನ್ನು ಧರಿಸಿದ್ದರು.

‌ಬಂಗಾರದ ಜಿಂಕೆಯಂತೆ ಕಂಗೊಳಿಸುತ್ತಿರುವ ದಿವಿತಾ ಅವರನ್ನು ನೋಡಿದ ಮೇಲೆ ಮತ್ತೊಮ್ಮೆ ಭಾರತಕ್ಕೆ ಮಿಸ್‌ ಯುನಿವರ್ಸ್‌ ಪಟ್ಟ ಸಿಗಬಹುದು ಎಂದು ನಿರೀಕ್ಷಿಸಲಾಗಿದೆ.

ಹರ್ನಾಜ್ ಸಂಧು 2021 ರಲ್ಲಿ ಮಿಸ್ ಯೂನಿವರ್ಸ್ ಆಗಿ ಆಯ್ಕೆಯಾದರು. ಈ ಬಾರಿ ದಿವಿತಾ ರೈ ಬರವಸೆ ಮೂಡಿಸುತ್ತಿದ್ದಾರೆ.

ಸುಮಾರು 80 ದೇಶಗಳ ಸುಂದರಿಯರು ಈ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ದಿವಿತಾ ಯಾರಿಗೂ ಕಡಿಮೆಯಿಲ್ಲ, ಬಿಕಿನಿ ರೌಂಡ್‌ನಲ್ಲೂ ಸಹ ದಿವಿತಾ ರೈ ಮಿಂಚಿದ್ದರು.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link