ನೋ ಮೇಕ್‌ಅಪ್‌, ನಗುವೇ ಈಕೆಗೆ ಆಭರಣ..! ಎಕ್ಸ್ ಕ್ಯೂಸ್ ಮಿ ಗರ್ಲ್ಸ್‌.. ʼಸೌಂದರ್ಯʼ ಅಂದ್ರೆ ಇದು..

Fri, 09 Aug 2024-1:24 pm,

ಇತ್ತೀಚಿನವರೆಗೂ ಯಾವುದೇ ಸಿನಿಮಾ ನೋಡಿದ್ರೂ, ಶ್ರೀಲೀಲಾ, ಮೃಣಾಲ್ ಠಾಕೂರ್‌, ರಶ್ಮಿಕಾ ಮಂದಣ್ಣ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು. ಆದ್ರೆ ಇನ್ಮುಂದೆ ಭಾಗ್ಯಶ್ರೀ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತು ಸಿನಿರಂಗದಲ್ಲಿದೆ..  

ಭಾಗ್ಯ ಶ್ರೀ ಬೋರ್ಸೆ ತನ್ನ ಮೊದಲ ಚಿತ್ರ ಬಿಡುಗಡೆಗೆ ಮುನ್ನವೇ ತನ್ನ ಗ್ಲಾಮರ್‌ನಿಂದ ಇಂಡಸ್ಟ್ರಿಯ ಟಾಕ್ ಆಗಿದ್ದಾರೆ..  

ರವಿತೇಜ ಅಭಿನಯದ ಮಿಸ್ಟರ್ ಬಚ್ಚನ್ ಸಿನಿಮಾದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ ಚೆಲುವೆ ಭಾಗ್ಯಶ್ರೀ ಬೋರ್ಸೆ.  

ಈ ಚಿತ್ರ ಬಿಡುಗಡೆಯಾಗುವ ಮುನ್ನವೇ ಭಾಗ್ಯಶ್ರೀಗೆ ಸಾಲು ಸಾಲು ಆಫರ್ ಗಳು ಬರುತ್ತಿವೆ.. ಇದರಿಂದ ಮುಂದೇ ಸೌತ್‌ ಸಿನಿರಂಗದಲ್ಲಿ ಈಕೆಯ ಕ್ರೇಜ್‌ ಹೆಚ್ಚಾಗುವ ಸಾಧ್ಯತೆ ಇದೆ..  

ಭಾಗ್ಯಶ್ರೀ ಬೋರ್ಸೆಗೆ ದುಲ್ಕರ್ ಸಲ್ಮಾನ್ ನಟನೆಯ ಮುಂಬರುವ ಸಿನಿಮಾದಲ್ಲಿ ಅವಕಾಶ ಸಿಕ್ಕಿದೆ ಎಂದು ಹೇಳಲಾಗುತ್ತಿದೆ...   

ಸದ್ಯ ಭಾಗ್ಯಶ್ರೀ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದ್ದಾರೆ. ಈ ಚೆಲುವೆ ಫೋಟೋಸ್‌ ಇಂಟರ್‌ನೆಟ್‌ನಲ್ಲಿ ಹೈಪ್‌ ಕ್ರಿಯೇಟ್‌ ಮಾಡುತ್ತಿವೆ..   

ಈ ಬಾಲಿವುಡ್ ಬೆಡಗಿ ಫುಲ್ ಟ್ರೆಂಡಿಂಗ್‌ನಲ್ಲಿದ್ದು, ತನ್ನ  ಮೊದಲ ಸಿನಿಮಾ ಬಿಡುಗಡೆಗೂ ಮುನ್ನವೇ ಹುಡುಗರ ಕ್ರಶ್ ಲಿಸ್ಟ್ ಗೆ ಎಂಟ್ರಿ ಕೊಟ್ಟಿದ್ದಾರೆ.  

ಭಾಗ್ಯಶ್ರೀ ಬೋರ್ಸೆ ಹಿಂದಿ ಚಲನಚಿತ್ರ ಯಾರಿಯಾನ್ 2 (2023) ಮೂಲಕ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದರು   

ಭಾಗ್ಯಶ್ರೀ ಬೋರ್ಸೆ ನೈಜೀರಿಯಾದ ಲಾಗೋಸ್‌ನಲ್ಲಿ ಓದಿದ್ದಾರೆ.. ಭಾರತಕ್ಕೆ ಮರಳಿದಾಗ ರೂಪದರ್ಶಿಯಾಗಿ ವೃತ್ತಿ ಜೀವನ ಪ್ರಾರಂಭಿಸಿದರು. ಅಲ್ಲದೆ, ಹಲವು ಬ್ರಾಂಡ್‌ಗಳಿಗೆ ರಾಯಭಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ.    

ZEENEWS TRENDING STORIES

By continuing to use the site, you agree to the use of cookies. You can find out more by Tapping this link