ಅಕಾಲಿಕ ಬಿಳಿ ಕೂದಲನ್ನು ಕಪ್ಪಾಗಿಸಲು ಈ ಗಿಡಮೂಲಿಕೆಗಳೊಂದಿಗೆ ಮೊಸರನ್ನು ಬೆರೆಸಿ ಹಚ್ಚಿ
ಚಿಕ್ಕ ವಯಸ್ಸಿನಲ್ಲಿಯೇ ಬಿಳಿ ಕೂದಲು ಹೆಚ್ಚಾಗಿದ್ಯಾ? ಮಾರುಕಟ್ಟೆಯಲ್ಲಿ ಸಿಗುವ ಹೇರ್ ಡೈ ಬದಲಿಗೆ ಮನೆಯಲ್ಲಿಯೇ ಸುಲಭವಾಗಿ ಬಿಳಿ ಕೂದಲನ್ನು ಕಪ್ಪಾಗಿಸಬಹುದು.
ಒಂದೆರಡು ಗಿಡಮೂಲಿಕೆಗಳ ಸಹಾಯದಿಂದ ಬಿಳಿ ಕೂದಲಿಗೆ ಸುಲಭವಾಗಿ ಮನೆಮದ್ದನ್ನು ತಯಾರಿಸಬಹುದು.
ನೈಸರ್ಗಿಕವಾಗಿ ಬಿಳಿ ಕೂದಲನ್ನು ಕಪ್ಪಾಗಿಸಲು ಬೇಕಾಗುವ ಪದಾರ್ಥಗಳೆಂದರೆ... >> ಕಬ್ಬಿಣದ ಬಾಣೆಲೆ >> ಮೆಹಂದಿ ಸೊಪ್ಪು >> ದಾಸವಾಳದ ಎಲೆ >> ಮೊಸರು
ಕಬ್ಬಿಣದಲ್ಲಿ ಬಾಣಲೆಯಲ್ಲಿ ಫೆರಸ್ ಸಲ್ಫೆಟ್ ಇರುತ್ತದೆ. ಇದು ಕೂದಲು ಉದುರುವಿಕೆಯನ್ನು ಕಡಿಮೆ ಮಾಡಿ, ಕೂದಲಿನ ಬೆಳವಣಿಗೆಗೆ ಪ್ರಯೋಜನಕಾರಿ ಆಗಿದೆ.
ಮೊದಲು ಒಂದು ಕಬ್ಬಿಣದ ಬಾಣಲೆಯನ್ನು ಒಲೆಯ ಮೇಲೆ ಬಿಸಿಯಾಗಲು ಇಡಿ. ಮೆಹಂದಿ ಸೊಪ್ಪು, ದಾಸವಾಳದ ಎಲೆಗೆ ಮೊಸರನ್ನು ಬೆರೆಸಿ ಚೆನ್ನಾಗಿ ರುಬ್ಬಿ, ಇದನ್ನು ಬಿಸಿ ಬಾಣಲೆಯಲ್ಲಿ ಹಾಕಿ ಒಂದು ಕುದಿ ಕುದಿಯುವವರೆಗೂ ಸಣ್ಣ ಉರಿಯಲ್ಲಿ ಕಾಯಿಸಿ. ಸ್ಟೌವ್ ಆಫ್ ಮಾಡಿ. ತಯಾರಿಸಿದ ಹೇರ್ ಡೈ ಅನ್ನು ಇಡೀ ರಾತ್ರಿ ಹಾಗೆಯೇ ಬಿಡಿ.
ರಾತ್ರಿ ಕಬ್ಬಿಣದ ಬಾಣಲೆಯಲ್ಲಿ ತಯಾರಿಸಿಟ್ಟ ಹೇರ್ ಡೈ ಅನ್ನು ಕೂದಲಿಗೆ ಹಚ್ಚಿ ಅದು ಬೇಗ ಡ್ರೈ ಆಗದಂತೆ ಒಂದು ತೆಳುವಾದ ಬಟ್ಟೆಯನ್ನು ಸುತ್ತಿ.
ಹೋಂ ಮೇಡ್ ಹೇರ್ ಡೈ ಹಚ್ಚಿ ಎರಡು ಗಂಟೆಗಳ ಬಳಿಕ ಬಿಸಿ ನೀರಿನಿಂದ ಹೇರ್ ವಾಶ್ ಮಾಡಿ. ಒಂದೆರಡು ಬಾರಿ ಈ ಮನೆಮದ್ದನ್ನು ಬಳಸುವುದರಿಂದ ನೈಸರ್ಗಿಕವಾಗಿ ನಿಮ್ಮ ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸಬಹುದು.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.